ವಿವಿಧ ಬೇಡಿಕೆಗಳ ಈಡೇರಿಕೆಗೆ ‘ಬೆಳಗಾವಿ ಚಲೋ’ ಹೋರಾಟ

KannadaprabhaNewsNetwork |  
Published : Dec 08, 2025, 01:30 AM IST
 ನೂರಾರು ಮಹಿಳಾ–ಪುರುಷ ರೈತರು ‘ಬೆಳಗಾವಿ ಚಲೋ’ ಕಾರ್ಯಕ್ರಮದ ಭಾಗವಾಗಿ ರೈಲಿನಲ್ಲಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು | Kannada Prabha

ಸಾರಾಂಶ

ಅರಸೀಕೆರೆ ಭೌಗೋಳಿಕವಾಗಿ ಹಾಗೂ ಮೂಲಸೌಕರ್ಯಗಳ ದೃಷ್ಟಿಯಿಂದ ಜಿಲ್ಲೆಯಾಗಲು ಅರ್ಹ. ಈ ಬೇಡಿಕೆಗೆ ಸಂಬಂಧಿಸಿದಂತೆ ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಅರಸೀಕೆರೆಯನ್ನು ಜಿಲ್ಲೆಯಾಗಿ ಘೋಷಿಸುವುದು ಸೇರಿದಂತೆ ವಿವಿಧ ರೈತಪರ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸಲು ಹಸಿರು ಸೇನೆ ರಾಷ್ಟ್ರೀಯ ಸಂಚಾಲಕ ಕನಕೆಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ನೂರಾರು ರೈತರು ‘ಬೆಳಗಾವಿ ಚಲೋ’ ಕಾರ್ಯಕ್ರಮದ ಭಾಗವಾಗಿ ರೈಲಿನಲ್ಲಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು.ನಗರದ ಪ್ರವಾಸಿ ಮಂದಿರದಿಂದ ರೈಲ್ವೆ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಸನ್ನಕುಮಾರ್, “ಅರಸೀಕೆರೆ ಭೌಗೋಳಿಕವಾಗಿ ಹಾಗೂ ಮೂಲಸೌಕರ್ಯಗಳ ದೃಷ್ಟಿಯಿಂದ ಜಿಲ್ಲೆಯಾಗಲು ಅರ್ಹ. ಈ ಬೇಡಿಕೆಗೆ ಸಂಬಂಧಿಸಿದಂತೆ ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.ಬೇಲೂರು ತಾಲೂಕು ಹಳೇಬೀಡು ಸರ್ವೇ ನಂ. 1ರಲ್ಲಿ ಇರುವ 2680 ಎಕರೆ ಐದಳ್ಳ ಕಾವಲು ಭೂಮಿಯನ್ನು ರೈತರಿಗೆ ವಹಿಸುವ ಕುರಿತು ರಾಜ್ಯಪಾಲರಿಗೆ ಸಲ್ಲಿಸಿದ್ದ ಮನವಿಯ ಮೇಲೆ ಅನುಕೂಲಕರ ಸೂಚನೆ ಬಂದಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು. ಬಗರ್‌ ಹುಕುಂ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ತಕ್ಷಣ ಜಮೀನು ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು,ಎಂದು ಆಗ್ರಹಿಸಿದರು.ನಮ್ಮ ಹೋರಾಟವನ್ನು ಕುಂಠಿತಗೊಳಿಸಲು ಕೆಲವರು ಸುಳ್ಳು ಆರೋಪಗಳನ್ನು ಹರಡಿ ರೈತರ ಆತ್ಮವಿಶ್ವಾಸಕ್ಕೆ ಭಂಗ ತರುತ್ತಿದ್ದಾರೆ. ಹಳೇಬೀಡು ಭೂಮಿಯ ಸುತ್ತ ಅರಣ್ಯ ಇಲಾಖೆ ಗುಂಡಿಗಳು ತೋಡಿರುವುದು ರೈತ ವಿರೋಧಿ ಚಟುವಟಿಕೆಯಾಗಿದೆ, ಎಂದು ಆರೋಪಿಸಿದರು.ರೈಲ್ವೆ ಮಾರ್ಗ ವಿಸ್ತರಣೆ, ರಾಷ್ಟ್ರೀಯ ನದಿ ಜೋಡಣೆ ಯೋಜನೆ ಶೀಘ್ರ ಪೂರ್ಣಗೊಳಿಸುವಿಕೆ ಸೇರಿದಂತೆ 26 ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುವ ಉದ್ದೇಶದಿಂದ ಬೆಳಗಾವಿ ಚಲೋ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಯೂಬ್ ಪಾಷಾ, ಏಜಸ್ ಪಾಷಾ, ಯಳವಾರೆ ಮಮತಾ, ಅಬ್ದುಲ್ ಕುನ್ನಿ, ಬೀರಪ್ಪ, ಅಮ್ಜದ್ ಖಾನ್, ಹನುಮಂತ, ಮುಬಾರಕ್ ಅಲಿ, ನಂಜಮ್ಮ, ಕಾಂತರಾಜು ಸೇರಿದಂತೆ ನೂರಾರು ರೈತರು ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌