ಭೀಮಾ ಕೊರೇಗಾಂವ್ ವಿಜಯ ಸಾಹಸಿ ಘಟನೆ

KannadaprabhaNewsNetwork |  
Published : Jan 02, 2024, 02:15 AM IST
01 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್  ವೃತ್ತದಲ್ಲಿ ಸೋಮವಾರ  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ನಡೆದ   ಭೀಮಾ ಕೊರೇಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ  ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿದರು.   | Kannada Prabha

ಸಾರಾಂಶ

ಭೀಮಾ ಕೊರೇಗಾಂವ್ ಯುದ್ದ ಇತಿಹಾಸದ ಒಡಲಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಡಾ.ಅಂಬೇಡ್ಕರ್ ಹೊರತುಪಡಿಸಿ ಯಾರು ಇದನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿಲಿಲ್ಲ

ಭೀಮಾ ಕೊರೇಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಪ್ರತಿಪಾದನೆ

ಕನ್ನಡಪ್ರಭ ವಾರ್ತೆ ಜಗಳೂರು

ಭೀಮಾ ಕೊರೇಗಾಂವ್ ಯುದ್ದ ಇತಿಹಾಸದ ಒಡಲಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಡಾ.ಅಂಬೇಡ್ಕರ್ ಹೊರತುಪಡಿಸಿ ಯಾರು ಇದನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿಲಿಲ್ಲವೆಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ೨೦೬ನೇ ವರ್ಷದ ಭೀಮಾ ಕೊರೇಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ

ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸಿ ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸಕರಿಂದ ಕೊರೇಗಾಂವ್ ವಿಜಯೋತ್ಸವ ಮಹತ್ವ ಮತ್ತು ಸಾಹಸ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್ ಮಾತನಾಡಿ, 28 ಸಾವಿರ ಸೈನಿಕರ ಕೇವಲ 500 ಮಂದಿ ಸೈನಿಕರು ಸೋಲಿಸಿದ ಕದನವಾಗಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸಿಡಿದು ನಿಂತು ಮಾನವೀಯ ಮೌಲ್ಯಗಳ ಪಡೆದುಕೊಳ್ಳಲು ಹಂಬಲಿಸುವ ಸೈನಿಕರ ಧೈರ್ಯ, ಕೆಚ್ಚೆದೆ ಹೋರಾಟದ ಮೂಲಕ ಮೇಲ್ಜಾತಿ ಶೋಷಣೆಯ ವಿರುದ್ಧ ಯುದ್ಧ ಘೋಷಿಸಿ ಗೆಲುವು ಪಡೆದ ಸಾಹಸಗಾಥೆಯಾಗಿದೆ. ಭೀಮಾ ನದಿ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೆಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ ಎಂದರು.

ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ದೇಶದ ಇತಿಹಾಸದಲ್ಲಿ ಕೋಟೆ ಕೊತ್ತಲಗಳ ಉಳಿವಿಗಾಗಿ ಯುದ್ಧ ಮಾಡಿ ಗೆದ್ದು ರಾಜ್ಯಭಾರ ಮಾಡಿದ ರಾಜರು ವಿಜಯವನ್ನು ವಿಜೃಂಭಿಸುವುದು ನಾವೆಲ್ಲ ಗಮನಿಸಿದ್ದೇವೆ. ಆದರೆ ದೇಶದ ದಲಿತ, ದಮನಿತ, ಶೋಷಿತ ಜನರ ಆತ್ಮಗೌರವ ಕಾಪಾಡಿ ತಮ್ಮ ಮನೆಯ ಹೆಣ್ಣು ಮಕ್ಕಳ ರಕ್ಷಿಸಿಕೊಳ್ಳುವ ಉದ್ದೇಶದಿಂದ ಪೇಶ್ವೆಗಳ ವಿರುದ್ದ ಹೋರಾಡಿ ಜಯಿಸಿದ ಭೀಮಾ ಕೊರೇಗಾಂವ್ ವಿಜಯೋತ್ಸವ ಯಾವುದೇ ಪಠ್ಯದಲ್ಲಿಯೂ ಉಲ್ಲೇಖಿಸದಿರುವುದು ಬೇಸರ ತರಿಸಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್‌ ಪಟೇಲ್, ಮಾಜಿ ತಾ.ಪಂ.ಸದಸ್ಯ ಮರೇನಹಳ್ಳಿ ಬಸವರಾಜ್, ರೈತ ಮುಖಂಡ ಹೇಮರೆಡ್ಡಿ, ನಾಯಕ ಸಮಾಜದ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ತಿಪ್ಪೇಸ್ವಾಮಿ, ಮುಖಂಡರಾದ ಗ್ಯಾಸ್ ಓಬಣ್ಣ, ಬಿಸ್ತುವಳ್ಳಿ ಬಾಬು, ಶಿವಣ್ಣ, ಯುವ ಸಾಹಿತಿ ಜಗಜೀವನರಾಮ್, ಅಸಗೋಡು ಶಿವಕುಮಾರ್, ವಕೀಲ ಸಣ್ಣ ಓಬಯ್ಯ ಸೇರಿ ಮತ್ತಿತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ