ಹೊಳಲಿ ಬಳಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ

KannadaprabhaNewsNetwork |  
Published : Oct 19, 2024, 12:26 AM IST
೧೯ಕೆಎಲ್‌ಆರ್-೪ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸಂಚಾಲಕ ಆಯಿಲ್ ರಮೇಶ್ ಮಾತನಾಡಿದರು. | Kannada Prabha

ಸಾರಾಂಶ

ಹೊಳಲಿ ಬಳಿ ೨೮ ಎಕರೆ ಜಾಗದ ಪ್ರಸ್ತಾವನೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರವು ಪ್ರಸ್ತುತ ೧೬ ಎಕರೆ ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿ ಉಳಿದ ೮ ಎಕರೆ ಮಂಜೂರಾತಿ ಮಾಡುವ ನಿರೀಕ್ಷೆ ಇದೆ. ಈ ಜಾಗದಲ್ಲಿ ೪ ಗ್ರೌಂಡ್‌ಗಳನ್ನು ನಿರ್ಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನಿಂದ ತಾಲೂಕಿನ ಮುಳಬಾಗಿಲು ಹೆದ್ದಾರಿ ಸಮೀಪದ ಹೊಳಲಿ ಬಳಿ ೧೬ ಎಕರೆ ಜಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣದ ಗುದ್ಧಲಿಪೂಜೆ ಅ.೨೩ರಂದು ನಡೆಯಲಿದೆ ಎಂದು ಕ್ರಿಕೆಟ್‌ ಅಸೋಸಿಯೇಷನ್ ಸಂಚಾಲಕ ಆಯಿಲ್ ರಮೇಶ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅ‍ವರು, ಈಗಾಗಲೇ ರಾಜ್ಯದ ಮಂಗಳೂರು, ಉಡುಪಿ, ಪುತ್ತೂರು, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಕ್ರಿಕೆಟ್ ಕ್ರೀಡಾಂಗಣವನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಾಯಕ ಬ್ರಿಜೇಶ್‌ಪಟೇಲ್ ಮಾರ್ಗದರ್ಶನದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ಕ್ರೀಡಾಂಗಣಕ್ಕೆ 16 ಎಕರೆ

ಅಸೋಸಿಯೇಷನ್‌ನಿಂದ ಹೊಳಲಿ ಬಳಿ ೨೮ ಎಕರೆ ಜಾಗದ ಪ್ರಸ್ತಾವನೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರವು ಪ್ರಸ್ತುತ ೧೬ ಎಕರೆ ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿ ಉಳಿದ ೮ ಎಕರೆ ಮಂಜೂರಾತಿ ಮಾಡುವ ನಿರೀಕ್ಷೆ ಇದೆ. ಈ ಜಾಗದಲ್ಲಿ ೪ ಗ್ರೌಂಡ್‌ಗಳನ್ನು ವಿಭಜಿಸಲಾಗುವುದು. ಸೀಟ್ ಮ್ಯಾಟ್‌ನಲ್ಲಿ ಲೇದರ್ ಬಾಲ್‌ನ ತರಬೇತಿ ೧೪ ವರ್ಷ, ೧೬ ವರ್ಷ, ೧೮ ವರ್ಷ ಹಾಗೂ ೨೦ ವರ್ಷದ ಯುವಕರಿಗೆ ಹಾಗೂ ಯುವತಿಯರಿಗೆ ಉಚಿತ ತರಬೇತಿ ಶಿಬಿರಗಳನ್ನು ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.ಅ.೨೩ ರಿಂದ ಗುದ್ದಲಿ ಪೂಜೆಯ ಮೂಲಕ ಪ್ರಥಮವಾಗಿ ಗ್ರೌಂಡ್ ಹಾಗೂ ಕಾಂಪೌಂಡ್ ಕಾಮಗಾರಿ ಪ್ರಾರಂಭಿಸಲಾಗುವುದು ನಂತರ ಹಂತ, ಹಂತವಾಗಿ ಉಳಿದ ಸೌಲಭ್ಯಗಳನ್ನು ಅಳವಡಿಸಲಾಗುವುದು, ಕೋಲಾರದ ಹೊಳಲಿಯಲ್ಲಿ ಪ್ರಥಮವಾಗಿ ರಣಜಿ ಪಂದ್ಯವನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದರು. ಮುಖಂಡ ಓಂಶಕ್ತಿ ಚಲಪತಿ ಮಾತನಾಡಿದರು. ಕ್ರಿಕೆಟ್ ಪಟುಗಳಾದ ಮಂಜುನಾಥ್, ವಿಜಯ್ ಸಾಗರ್ ಶೆಟ್ಟಿ, ಅಡಿಗ ರಘು, ಕಿಟ್ಟಿ, ಪುಟ್ಟಸ್ವಾಮಿ, ಹೊಲ್ಲಂಬಳ್ಳಿ ಚಂದ್ರಶೇಖರ್, ಉಲ್ಲಾಸ್ ಸನ್ನಿರಾಜ್, ಪ್ರಭಾಕರ್, ಶಿವು, ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!