ನಿರಂತರ ಕಲಿಕೆ ಜೀವನದ ಧ್ಯೇಯವಾಗಬೇಕು

KannadaprabhaNewsNetwork |  
Published : Sep 19, 2024, 01:47 AM IST
ಸಿಕೆಬಿ-2 ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಬೆಳಗಾವಿಯ ವಿ.ಟಿ.ಯುನ ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರದ ನಿರ್ಧೇಶಕ ಡಾ.ಬಸವಕುಮಾರ್ ಉಧ್ಗಾಟಿಸಿದರು | Kannada Prabha

ಸಾರಾಂಶ

ಸರ್.ಎಂ.ವಿಶ್ವೇಶ್ವರಯ್ಯ ನವರು ತಮ್ಮ ಸೇವೆ ಜ್ಞಾನದಿಂದ ಆದರ್ಶವಂತ ಚಿರಂಜೀವಿಯಾಗಿದ್ದಾರೆ. ಕಲಿತಿದ್ದು ಕೈ ಅಗಲ, ಕಲಿಯುವುದು ಸಾಗರದಗಲ ಎಂಬಂತೆ ಪ್ರತಿಯೊಬ್ಬರೂ ಕಲಿಕೆಯಲ್ಲಿ ಸದಾ ನಿರಂತರವಾಗಿರಬೇಕು. ಸೆಮಿನಾರ್‌ಗಳಲ್ಲಿ ಭಾಗವಹಿಸಿ ಜ್ಞಾನ ವಿನಿಮಯ ಮಾಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರತಿಯೊಬ್ಬರೂ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯನವರಂತೆ ಪ್ರಾಮಾಣಿಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ಮೌಲ್ಯವಿಲ್ಲದ ಜೀವನ ಬದುಕಿದ್ದರೂ ಸತ್ತಂತೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನ ಚೇರ್‌ಮೆನ್ ಹಾಗೂ ಸಿ.ಒ.ಇ ಇನ್ ಹೈಪರ್ ಸಾನಿಕ್‌ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ನ ಡಾ. ಗೋಪಾಲನ್ ಜಗದೀಶ್ ಹೇಳಿದರು.

ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರುಗಳ ದಿನಾಚರಣೆ ಹಾಗೂ ಎಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತು 2 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿರಂತರ ಕಲಿಕೆಯೆ ಜೀವನದ ಧ್ಯೇಯವಾಗಬೇಕು ಎಂದರು.

ಸೆಮಿನಾರ್‌ಗಳಲ್ಲಿ ಭಾಗವಹಿಸಿ

ಬೆಳಗಾವಿಯ ವಿಟಿಯು ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರದ ನಿರ್ದೇಶಕ ಡಾ.ಬಸವಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳಲ್ಲಿ ಭಾಗವಹಿಸಿ ಜ್ಞಾನ ವಿನಿಮಯ ಮಾಡಿಕೊಂಡು ವಿವಿಧ ಕ್ಷೇತ್ರಗಳ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ನವೀನ ವಿದ್ಯಾಮಾನಗಳನ್ನು ಕಾರ್ಯ ರೂಪಕ್ಕೆ ತರಬೇಕೆಂದು ತಿಳಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ನವರು ತಮ್ಮ ಸೇವೆ ಜ್ಞಾನದಿಂದ ಆದರ್ಶವಂತ ಚಿರಂಜೀವಿಯಾಗಿದ್ದಾರೆ. ಕಲಿತಿದ್ದು ಕೈ ಅಗಲ, ಕಲಿಯುವುದು ಸಾಗರದಗಲ ಎಂಬಂತೆ ಪ್ರತಿಯೊಬ್ಬರೂ ಕಲಿಕೆಯಲ್ಲಿ ಸದಾ ನಿರಂತರವಾಗಿರಬೇಕು.ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಜಿ.ಟಿ. ರಾಜು, ಎಸ್ ಜೆಸಿಐಟಿ ಇಂಜನಿಯರಿಂಗ್ ಕಾಲೇಜಿ ಕುಲಪತಿ ಜೆ.ಸುರೇಶ್, ಡೀನ್ ಅಕಾಡೆಮಿಕ್ಸ್ ನ ಡಾ. ಬಿ.ಹೆಚ್.ಮಂಜುನಾಥ್ ಕುಮಾರ್ ,ವೈಮಾನಿಕ ವಿಭಾಗದ ಸಿ.ಒ.ಇ ಹಾಗೂ ಮುಖ್ಯಸ್ಥ, ಡಾ.ಎಂ.ಎಸ್.ದೀಪ , ಮುಖ್ಯಸ್ಥರು, ವೈಮಾನಿಕ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ.ಮಧುಸೂದನ್ , ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ.ಎನ್.ಆರ್.ತ್ಯಾಗರಾಜ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!