ಉಡುಪಿ: ನಗರದ ಪ್ರತಿಷ್ಠಿತ ಶೋಕಮಾತಾ ಚರ್ಚಿನ ನೂತನ ಧರ್ಮಗುರುಗಳಾಗಿ ಅತೀ ವಂ| ಡೆನಿಸ್ ಡೆಸಾ ಗುರುವಾರ ಅಧಿಕಾರ ಸ್ವೀಕರಿಸಿದರು.
ಚರ್ಚಿನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದ ನೇತೃತ್ವವನ್ನು ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಕುಲಪತಿಗಳಾದ ವಂ|ಸ್ಟೀವನ್ ಡಿಸೋಜಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಚರ್ಚಿನ ವಂ|ಜೆ ಬಿ ಸಲ್ಡಾನಾ, ಶೋಕಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಲಿಯೋ ಪ್ರವೀಣ್ ಡಿಸೋಜಾ, ಸಂತ ಮೇರಿ ಶಾಲೆಗಳ ಪ್ರಾಂಶುಪಾಲರಾದ ವಂ|ವಿಜಯ್ ಡಿಸೋಜಾ, ಮೂಡುಬೆಳ್ಳೆ ಚರ್ಚಿನ ವಂ|ಜೋರ್ಜ್ ಡಿಸೋಜಾ, ವಂ|ಸ್ಟೀಫನ್ ರೊಡ್ರಿಗಸ್, ಉದ್ಯಾವರ ಚರ್ಚಿನ ವಂ|ಅನಿಲ್ ಡಿಸೋಜಾ, ತೊಟ್ಟಂ ಚರ್ಚಿನ ವಂ|ಹೆನ್ರಿ ಮಸ್ಕರೇನ್ಹಸ್, ನಿವೃತ್ತ ಧರ್ಮಗುರು ವಂ|ವಿಲಿಯಂ ಮಾರ್ಟಿಸ್, ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ಆಲ್ವಿನ್ ಉಪಸ್ಥಿತರಿದ್ದರು.ಉಡುಪಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆಯಲ್ಲಿದ್ದ ವಂ| ಚಾರ್ಲ್ಸ್ ಮಿನೇಜಸ್ ಅವರನ್ನು ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ವರ್ಗಾವಣೆಗೊಳಿಸಲಾಗಿದೆ.