ಕನ್ನಡಪ್ರಭ ವಾರ್ತೆ ಹುಳಿಯಾರು
ಸೋಮವಾರ ತಡ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಶೌಚಾಲಯ ನಿರ್ವಹಣೆ, ಸಂತೆ ಸ್ಥಳಾಂತರ ಹಾಗೂ ಕಸ ವಿಲೇವಾರಿ ಘಟಕ ನಿರ್ಮಾಣದ ಮೂರು ಬೇಡಿಕೆಗಳ ಬಗ್ಗೆ ಆಗಿರುವ ಪ್ರಗತಿ ಹಾಗೂ ಇನ್ನು 10 ದಿನಗಳ ಒಳಗೆ ಕಸ ವಿಲೆವಾರಿ ಘಟಕದ ಕುರಿತು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಆರ್ ಟಿ ಸಿ ಯಲ್ಲಿ ನಮೂದಿಸುವುದಾಗಿ ತಿಳಿಸಿದರು. ಇನ್ನು ಆರು ತಿಂಗಳ ಒಳಗೆ ಕಸ ವಿಲೇವಾರಿ ಘಟಕ ಕಾರ್ಯ ಆರಂಭ ಮಾಡಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸಲು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಯಿಸಿದ ಚಂದ್ರಶೇಖರ್ ನಾನು ತಕ್ಷಣವೇ ನಿರ್ಧಾರ ಮಾಡುವುದಿಲ್ಲ ಎಲ್ಲಾ ಸಂಘಟನೆಗಳ ಜೊತೆ ಚರ್ಚೆ ನಡೆಸಿ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಮಂಗಳವಾರ ನಡೆದ ಮುಖಂಡರು ಸಭೆಯಲ್ಲಿ ಇನ್ನೂ 10 ದಿನ ಧರಣಿ ಮುಂದುವರೆಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.