ಸರ್ಕಾರಿ ಶಾಲಾಭಿವೃದ್ಧಿಗೆ ದಾನಿಗಳ ಸಹಕಾರವೂ ಮುಖ್ಯ

KannadaprabhaNewsNetwork |  
Published : Nov 05, 2025, 01:15 AM IST
ಪೋಟೋ 10 : ತ್ಯಾಮಗೊಂಡ್ಲು ಹೋಬಳಿಯ ಒಬಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ 1.50 ಲಕ್ಷ ವೆಚ್ಚದ 15 ಡೆಸ್ಕ್ ಗಳನ್ನು ತ್ಯಾಮಗೊಂಡ್ಲು ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಗುರ್ ಹುಕಂ ಸಮಿತಿ ಸದಸ್ಯ ವಕೀಲ ಹನುಮಂತೇಗೌಡ್ರು ವಿತರಿಸಿದರು | Kannada Prabha

ಸಾರಾಂಶ

ದಾಬಸ್‍ಪೇಟೆ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ದಾನಿಗಳ ಸಹಕಾರವೂ ಮುಖ್ಯ ಎಂದು ತ್ಯಾಮಗೊಂಡ್ಲು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಗುರ್ ಹುಕಂ ಸಮಿತಿ ಸದಸ್ಯ ವಕೀಲ ಹನುಮಂತೇಗೌಡ್ರು ತಿಳಿಸಿದರು.

ದಾಬಸ್‍ಪೇಟೆ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ದಾನಿಗಳ ಸಹಕಾರವೂ ಮುಖ್ಯ ಎಂದು ತ್ಯಾಮಗೊಂಡ್ಲು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಗುರ್ ಹುಕಂ ಸಮಿತಿ ಸದಸ್ಯ ವಕೀಲ ಹನುಮಂತೇಗೌಡ್ರು ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ 1.50 ಲಕ್ಷ ವೆಚ್ಚದ 15 ಡೆಸ್ಕ್ ಗಳನ್ನು ವಿತರಿಸಿ ಮಾತನಾಡಿದ ಅವರು, ನಾವು ದುಡಿಯುವ ಸಂಬಳದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದೇವೆ. ಎಲ್ಲರೂ ಸರ್ಕಾರಿ ಶಾಲೆಗಳನ್ನು ಉಳಿಸುವತ್ತ ಚಿಂತನೆ ನಡೆಸಬೇಕಿದೆ. ಈಗಾಗಲೇ ನಮ್ಮ ಶಾಸಕರು ತಾಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಉಚಿತ ನೋಟ್‌ಬುಕ್ ಗಳನ್ನು ವಿತರಿಸಿದ್ದಾರೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಲಿಂಗರಾಜು ಮಾತನಾಡಿ, ಇಂದಿಗೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಪರಿಕರಗಳ ಸಮಸ್ಯೆ, ಮೂಲತ ಸೌಕರ್ಯಗಳ ಸಮಸ್ಯೆ ಜೀವಂತವಾಗಿದೆ. ಸರ್ಕಾರಗಳು ಎಷ್ಟೇ ಪ್ರಚಾರ ಮಾಡಿದರೂ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂಜರಿಯುತ್ತಿದ್ದಾರೆ. ಆಂಗ್ಲ ಶಿಕ್ಷಣದ ವ್ಯಾಮೋಹದಿಂದ ಕನ್ನಡ ಶಾಲೆಗಳ ದಾಖಲಾತಿ ಕುಸಿಯುತ್ತಿರುವುದು ಬೇಸರದ ಸಂಗತಿ ಎಂದರು.

ಮುಖ್ಯಶಿಕ್ಷಕ ಹನುಮಂತರಾಜು ಮಾತನಾಡಿ, ಆಂಗ್ಲ ಶಿಕ್ಷಣ ಅವಶ್ಯಕತೆ ಇದೆಯೇ ಹೊರತು ಆಂಗ್ಲ ಶಿಕ್ಷಣವೇ ಮುಖ್ಯವಲ್ಲ. ಲಕ್ಷ ಲಕ್ಷ ಡೊನೇಷನ್ ಕಟ್ಟಿ ಆಂಗ್ಲಶಾಲೆಗಳಿಗೆ ಸೇರಿಸುವುದರಿಂದ ಇಂದು ಶಿಕ್ಷಣ ವ್ಯಾಪಾರೀಕರಣವಾಗಿದೆ. ದಾನಿಗಳ ಸಹಕಾರ, ಕೊಡುಗೆಗಳಿಂದ ಸರ್ಕಾರಿ ಶಾಲೆಗಳು ಉಳಿಯುವುದಕ್ಕೆ ಸಾಧ್ಯವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶ್ರೀಧರ್, ಸೋಮಶೇಖರ್, ಮಾಜಿ ಸದಸ್ಯ ಕಾರಳಪ್ಪ, ಗ್ರಾಮಸ್ಥರಾದ ಅನಿ, ಮಂಜುನಾಥ್, ಪವನ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೋಟೋ 10 :

ತ್ಯಾಮಗೊಂಡ್ಲು ಹೋಬಳಿಯ ಒಬಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ 1.50 ಲಕ್ಷ ವೆಚ್ಚದ 15 ಡೆಸ್ಕ್ ಗಳನ್ನು ತ್ಯಾಮಗೊಂಡ್ಲು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಗುರ್ ಹುಕಂ ಸಮಿತಿ ಸದಸ್ಯ ವಕೀಲ ಹನುಮಂತೇಗೌಡ್ರು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ