ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಸ್ತ ಕರ್ನಾಟಕ ರಾಜ್ಯದ ಹೊಲೆಯ ಸಮುದಾಯದ ಬಂಧುಗಳು ರಾಜ್ಯ ಸರ್ಕಾರ ವತಿಯಿಂದ ಒಳ ಮೀಸಲಾತಿ ಜಾರಿಗಾಗಿ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಜಾತಿ ಗಣತಿಯನ್ನು ಆರಂಭಿಸಿದೆ. ಆ ಸಂದರ್ಭದಲ್ಲಿ ತಾವು ಹೊಲೆಯ ಜಾತಿಗೆ ಸಂಬಂಧಿಸಿದಂತೆ ಉಪಜಾತಿಗಳಿದ್ದು ಆ ಉಪಜಾತಿಗಳಾದ ಆದಿ ದ್ರಾವಿಡ, ಆದಿ ಕರ್ನಾಟಕ , ಬಲಗೈ ಛಲವಾದಿ ಇನ್ನಿತರೆ ಉಪಜಾತಿಗಳನ್ನು ಯಾರೂ ಕೂಡ ನೋಂದಣಿ ಮಾಡಿಸಬಾರದು. ದಯಮಾಡಿ ಹೊಲೆಯ ಎಂದು ನೋಂದಣಿ ಮಾಡಿಸಿದರೆ ಅದು ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ಮಾಡಿ ಹೊಲೆಯ ಜನಾಂಗದ ಎಲ್ಲಾ ಸಮುದಾಯದ ಬಂಧುಗಳು ದಯಮಾಡಿ ಸಹಕರಿಸಬೇಕಾಗಿ ವಿನಂತಿ ಎಂದರು.
ಜೊತೆಗೆ ಈಗಾಗಲೇ ಮಾಡುತ್ತಿರುವ ಜಾತಿಗಣತಿಯಲ್ಲಿ ಜಾತಿ ಗಣತಿ ನೋಂದಣಿ ಮಾಡಲು ಬರುತ್ತಿರುವ ನೋಂದಣಿ ಪ್ರತಿನಿಧಿಗಳಿಗೆ ಸರಿಯಾದ ತರಬೇತಿ ಇಲ್ಲದೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತರನ್ನು ನೇಮಕ ಮಾಡಿದರೆ ಅದರಿಂದ ಸ್ಥಳೀಯರ ನೆರವು ಮತ್ತು ಸಹಕಾರ ಹೆಚ್ಚಾಗುತ್ತದೆ. ಜೊತೆಗೆ ಮೇ ತಿಂಗಳು ಪೂರ್ತಿ ಜಾತಿ ಗಣತಿಯನ್ನು ನೋಂದಣಿ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಬಹಳಷ್ಟು ಅನುಕೂಲವೂ ಆಗುತ್ತದೆ ಎಂದು ಈ ಮೂಲಕ ಕೋರುತ್ತಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ. ದಲಿತ ಮುಖಂಡರಾದ ಪುಷ್ಪ ಕುಮಾರ್, ಮಂಜು ಮಾದಿಹಳ್ಳಿ, ಮಂಜು ಕುರುವಂಕ ಇದ್ದರು.