ಆ್ಯಂಕರ್‌...................‘ಮಾನಸಿಕ, ದೈಹಿಕ ನೆಮ್ಮದಿಗೆ ಯೋಗ ಮಾಡಿ’

KannadaprabhaNewsNetwork | Published : Oct 7, 2023 2:14 AM

ಸಾರಾಂಶ

‘ಮಾನಸಿಕ, ದೈಹಿಕ ನೆಮ್ಮದಿಗೆ ಯೋಗ ಮಾಡಿ’
ಯೋಗ ಕಾರ್ಯಾಗಾರದಲ್ಲಿ ಮಳ್ಳೂರು ರಾಮಕೃಷ್ಣ ಮಠದ ಶ್ರೀಗಳ ಸಲಹೆ ಕನ್ನಡಪ್ರಭವಾರ್ತೆ ಚಿಕ್ಕಬಳ್ಳಾಪುರ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಇಂತಹ ಯೋಗ ಶಕ್ತಿ ಪಡೆದು ಜಾಗೃತ ರಾಗವಂತೆ ಮಳ್ಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಶ್ರೀ ಪ್ರಣವಾನಂದ ಜಿ ಕರೆ ನೀಡಿದರು. ಶಿಡ್ಲಘಟ್ಟ ನಗರದ ಹೊರವಲಯದ ಹಂಡಿಗನಾಳ ಗ್ರಾಮದ ಬಾಲಾಜಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ನಾಲ್ಕು ದಿನಗಳ ಯೋಗ ಜೀವನ ದರ್ಶನ 2023ರ ಕಾರ್ಯಾಗಾರವನ್ನು ಉದ್ಘಾಟಸಿ ಆಶೀರ್ವಚನ ನೀಡಿದರು. 43 ವರ್ಷಗಳಿಂದ ಯೋಗ ತರಬೇತಿ ಸಂತೃಪ್ತ ಜೀವನ ನಡೆಸಲು ಯೋಗ ತರಬೇತಿ ಅತ್ಯುತ್ತಮ ಮಾರ್ಗ ಎಂಬುದನ್ನು ಅರಿತ ನಾಡಿನ ಹಿರಿಯ ಯೋಗ ಋಷಿ ಶ್ರೀ ರಾಮಸ್ವಾಮಿರವರು 43 ವರ್ಷಗಳ ಹಿಂದೆ ಆರೋಗ್ಯ ವಂತ ಸಮಾಜದ ಕನಸನ್ನು ಕಂಡು ಕಾರ್ಯ ರೂಪಕ್ಕೆ ತಂದ ಫಲವಾಗಿ ಇಂದು ನಾಡಿನಾದ್ಯಂತ ಸಹಸ್ರಾರು ಯೋಗ ಪಟುಗಳು ನಿಸ್ವಾರ್ಥ ಸೇವೆ ಸಲ್ಲಿಸಿದ ಪರಿಣಾಮ ರಾಜ್ಯದ ಪ್ರತಿ ಜಿಲ್ಲೆ ಗಳಲ್ಲಿ ತಾಲ್ಲೂಕು ಕೇಂದ್ರ ಗಳಲ್ಲಿ ಉಚಿತವಾದ ಯೋಗ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಯೋಗ ಶಿಕ್ಷಣ ಸಂಸ್ಕೃತಿ ಸಂಸ್ಕಾರ ಗಳನ್ನು ಕಲಿಸುತ್ತದೆ ಇದರಿಂದ ನೀವು ಪಡೆಯವ ಆನಂದವನ್ನು ಇನೋಬ್ಬರಿಗೆ ಹಂಚಿಕೆ ಮಾಡುವ ಕಾರ್ಯ ಇಲ್ಲಿನ ಯೋಗ ವಿದ್ಯಾರ್ಥಿಗಳು ಮಾಡವಂತೆ ಕರೆ ನೀಡಿದರು ಪ್ರತಿಯೊಬ್ಬರೂ ಯೋಗ ಶಕ್ತಿ ಪಡೆದು ಜಾಗೃತ ರಾಗಲಿ ಎಂದು ಆಶೀರ್ವದಿಸಿ ದರು. ಪತಂಜಲಿ ಸಂಸ್ಥೆಗೆ ಜಮೀನು ಶಾಸಕ ಮೇಲೂರು ರವಿಕುಮಾರ್ ಮಾತನಾಡಿ, ಶಿಸ್ತು ಬದ್ಧ ಸಂಸ್ಕಾರ ವಂತ ಯುವಕರನ್ನು ಸಿದ್ಧ ಗೊಳಿಸುತ್ತಿರು ಪತಂಜಲಿ ಶಿಕ್ಷಣ ಸಂಸ್ಥೆ ಯ ತನ್ನದೇ ಆದ ಕಾರ್ಯ ಸೂಚಿಯನ್ನು ಹೊಂದಿದ್ದು ತಾಲ್ಲೂಕಿನಲ್ಲಿ ಯೋಗ ಶಿಕ್ಷಣ ಕೇಂದ್ರದ ಸ್ಥಾಪನೆ ಮಾಡಲು ತಹಸೀಲ್ದಾರರ ಮುಖಾಂತರ ಅರ್ಜಿ ಸಲ್ಲಿಸಿದಲ್ಲಿ ಶೀಘ್ರವಾಗಿ ಜಮೀನು ಪಡೆಯಲು ಸಹಕರಿಸುವುದಾಗಿ ತಿಳಿಸಿದರು. ಕಾರ್ಯಕ್ರಮ ದಲ್ಲಿ ಹಿರಿಯೂರು ವೇದವತಿ ವಲಯ ಸಂಚಾಲಕ ಕುಮಾರಣ್ಣ , ಶಿಡ್ಲಘಟ್ಟ ತಾಲ್ಲೂಕು ಎಸ್ ಪಿ ವೈ ಎಸ್ ಅದ್ಯಕ್ಷ ಸುಂದರಾಚಾರಿ, ನಗರ್ತಮಂಡಳಿ ಶಿವಶಂಕರ್ ,ಪಿ, ಶ್ರೀ ಕಾಂತ್, ಲಕ್ಷ್ಮೀ,ಮಧುಸೂದನ್, ರಘು ,ಭಾಸ್ಕರ್, ಮತ್ತಿತರರು ಇದ್ದರು. ಸಿಕೆಬಿ- 4 ಶಿಡ್ಲಘಟ್ಟ ನಗರದ ಹೊರವಲಯದ ಹಂಡಿಗನಾಳ ಗ್ರಾಮದಲ್ಲಿ ಯೋಗ ಕಾರ್ಯಾಗಾರವನ್ನು ಮಳ್ಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಶ್ರೀ ಪ್ರಣವಾನಂದ ಜಿ ಉದ್ಘಾಟಿಸಿದರು.

Share this article