ಭೂಮಿಯ ಸಂರಕ್ಷಣೆಗೆ ಎಲ್ಲರೂ ಸಂಕಲ್ಪತೊಡಬೇಕು

KannadaprabhaNewsNetwork |  
Published : Jul 13, 2025, 01:19 AM IST
ಸಿಕೆಬಿ-1 3ನೇ ಬಿ.ಜಿ.ಎಸ್ ನಂದಿ ಓಟ 2025  ಮ್ಯಾರಥಾನ್ ಓಟಕ್ಕೆ ಎಸ್ ಪಿ ಕುಶಲ್ ಚೌಕ್ಸೆ ಹಸಿರು ನೀಶಾನೆ ನೀಡಿದರು | Kannada Prabha

ಸಾರಾಂಶ

ನಾವು ವಾಸವಾಗಿರುವ ಭೂತಾಯಿಯ ಸಂರಕ್ಷ ಣೆ ನಮ್ಮದೇ ಹೊಣೆಗಾರಿಕೆಯಾಗಿದೆ ಎಂದು ಹಾಗಾಗಿ ನಾವೆಲ್ಲರೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ರಕ್ಷಣೆಯ ದಿವ್ಯ ಸಂಕಲ್ಪ ಮಾಡಬೇಕು. ಇದು ಒಬ್ಬರ ಕೆಲಸವಲ್ಲ. ಎಲ್ಲರ ಕೆಸಲವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮ ಆರೋಗ್ಯ ರಕ್ಷಣೆಗೆ ವ್ಯಾಯಾಮ ಅಗತ್ಯ. ಓಟಗಳ ಮೂಲಕ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ದೇಶದಲ್ಲಿ ತಾಂಡವವಾಡುತ್ತಿರುವ ಆರೋಗ್ಯ ಸಮಸ್ಯೆಗಳು ದೂರವಾಗಲಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ತಿಳಿಸಿದರು.

ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಮೈದಾನದಲ್ಲಿ ಶನಿವಾರ ಮುಂಜಾನೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ನಾಳೆಯ ಉಳಿವಿಗೆ, ಇಂದು ಓಡಿ ಎಂಬ ಘೋಷ ವಾಕ್ಯದೊಂದಿಗೆ 3 ನೇ ಬಿ.ಜಿ.ಎಸ್ ನಂದಿ ಓಟ-2025 ರ 5 ಕಿ.ಮೀ ಮತ್ತು 10 ಕಿ.ಮೀ ಗುಡ್ಡಗಾಡು ಓಟಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಭೂಮಿಯ ರಕ್ಷಣೆ ಎಲ್ಲರ ಹೊಣೆ

ನಾವು ವಾಸವಾಗಿರುವ ಭೂತಾಯಿಯ ಸಂರಕ್ಷ ಣೆ ನಮ್ಮದೇ ಹೊಣೆಗಾರಿಕೆಯಾಗಿದೆ ಎಂದು ಹಾಗಾಗಿ ನಾವೆಲ್ಲರೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸಬೇಕಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ರಕ್ಷಣೆಯ ದಿವ್ಯ ಸಂಕಲ್ಪ ಮಾಡಬೇಕು. ಇದು ಒಬ್ಬರ ಕೆಲಸವಲ್ಲ. ಎಲ್ಲರ ಕೆಸಲವಾಗಿದೆ. ಎಲ್ಲರಿಗೂ ನಂದಿ ಗಿರಿಧಾಮದ ಪ್ರಕೃತಿಯ ಮಡಿಲಿನಲ್ಲಿ ಇಂತಹ ಸ್ವಚ್ಛ ಹಸಿರಿನ ನಡೆ ಉತ್ಸಾಹ ಮತ್ತು ಸ್ಫೂರ್ತಿ ತಂದುಕೊಡುತ್ತದೆ. ಪ್ರತಿನಿತ್ಯ ನಾವು ಓಟ, ವ್ಯಾಯಾಮಗಳನ್ನು ರೂಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂದರು.

ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಮಾತನಾಡಿ, ನಮ್ಮ ಎಸ್.ಜೆ.ಸಿ.ಐ.ಟಿ ಯ ನಾಳೆಯ ಉಳಿವಿಗೆ, ಇಂದು ಓಡಿ ಎಂಬ ಘೋಷ ವಾಕ್ಯದೊಂದಿಗೆ ಈ ಓಟವು ಪ್ಲಾಸ್ಟಿಕ್ ಮುಕ್ತ, ವಾಯುಮಾಲಿನ್ಯ ಮುಕ್ತ, ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಯ ಮೂಲಕ ಇನ್ನೂ ಹಲವಾರು ಪರಿಸರ ಸಂರಕ್ಷಣೆಯ ವಿವಿಧ ಕಾರ್ಯಕ್ರಮಗಳಿಗೆ ಹಾದಿಯಾಗುತ್ತದೆ. ಎಂದರು.

ದುಶ್ಚಟ ಬಿಡಲು ಓಟ ಸಹಕಾರಿ

ಎಸ್‌ಜಿಸಿಐಟಿ ಆಡಳಿತಾಧಿಕಾರಿ ಜಿ.ರಂಗಸ್ವಾಮಿ ಮಾತನಾಡಿ, ಇಂದು ಕೆಟ್ಟ ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಇಂತಹ ಓಟಗಳು ಪ್ರಯೋಜನಕಾರಿಯಾಗಿವೆ. ಯುವಜನರು ಇಂದು ಭಾರತವನ್ನು ಮುನ್ನಡೆಸಬೇಕಾಗಿದ್ದು ಪ್ರಧಾನಿಯವರ ಆಶಯವನ್ನು ಓಟದ ಮೂಲಕ ಸಫಲಗೊಳಿಸುವುದರೊಂದಿಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳೋಣ ಎಂದರು.

ನಾಯ್ಕರ್‌ಗೆ ಪ್ರಥಮ ಬಹುಮಾನನಂದಿ ಓಟ 2025 ರ ಓಟದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರುಗಳು ಸೇರಿದಂತೆ ಸುಮಾರು 1000ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 10 ಕಿ.ಮೀ ಓಟದಲ್ಲಿ ಮಂಗಳೂರಿನ ರಂಗಣ್ಣ ನಾಯ್ಕರ್ ಮೊದಲ ಬಹುಮಾನ, ಹಾವೇರಿಯ ಗೋವಿಂದರಾಜು ಹಳಗಿ ಎರಡನೇ ಬಹುಮಾನ ಮತ್ತು ಬೆಂಗಳೂರಿನ ಗಣಪತಿ ಮೂರನೇ ಬಹುಮಾನ ಪಡೆದು ವಿಜೇತರಾದರು.

5 ಕಿ.ಮೀ ಓಟದಲ್ಲಿ ದೊಡ್ಡಬಳ್ಳಾಪುರದ ಪ್ರಣತಿ ಪ್ರಥಮ ಬಹುಮಾನ, ಸೀಮಾ ಮಹಂತೇಶ್ ಎರಡನೇ ಬಹುಮಾನ, ಉಡುಪಿಯ ಜಿ.ನಂದಿನಿ ಮೂರನೇ ಬಹುಮಾನ ಪಡೆದು ವಿಜೇತರಾದರು. ಈ ಸಂದರ್ಭದಲ್ಲಿ ಎಲ್ಲಾ ವಿಜೇತರಿಗೆ ಗಣ್ಯರಿಂದ ಸುಮಾರು 50,000 ರು.ಗಳ ಬಹುಮಾನ ನೀಡಲಾಯಿತು.

ಈ ವೇಳೆ ಅಕಾಡೆಮಿಕ್ಸ್ ಡೀನ್ ಡಾ.ಮಂಜುನಾಥ್ ಕುಮಾರ್.ಬಿ.ಹೆಚ್, ಸ್ಟುಡೆಂಟ್ ವೆಲ್‌ಫೇರ್ ಡೀನ್ ಜಿ.ನಾರಾಯಣ್, ಬಿ.ಜಿ.ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ವೈ.ಆರ್ ಮಂಜುನಾಥ್, ಬಿ.ಪಿ.ಎಡ್ ಪ್ರಾಂಶುಪಾಲ ಶಿವಶಂಕರ್, ಎಸ್.ಜೆ.ಸಿ.ಐ.ಟಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಟಿ.ಚಂದನ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ ಮತ್ತು ಭೋಧಕೇತರ ವರ್ಗದ ಸಿಬ್ಬಂದಿ ಹಾಗೂ ಬಿಜಿಎಸ್ ನ ವಿವಿಧ ಶಾಲೆಗಳ ಮುಖ್ಯಸ್ಥರು ಶಿಕ್ಷಕ ವೃಂದದವರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

PREV