ಗಣೇಶ್ ಕಾಮತ್, ಮೂಡುಬಿದಿರೆ:
ಆದರೆ, ಇಂತಹ ಪರಿಸ್ಥಿತಿಯಲ್ಲಿ ಹಸಿರ ಮಡಿಲಲ್ಲಿ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಾ ಮಕ್ಕಳನ್ನು ಮೌಲಿಕವಾಗಿ ಬೆಳೆಸುವುದರ ಜತೆಗೆ ಸ್ಪರ್ಧಾತ್ಮಕವಾಗಿಯೂ ಸರಿಸಾಟಿ ಇಲ್ಲದಂತೆ ರೂಪಿಸುವಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಸಾಧನೆ ನಾಡಿನ ಗಮನ ಸೆಳೆದಿದೆ.
ಇಲ್ಲಿ ಅನುಭವ, ಅನುಭಾವ, ಅನುಭೂತಿಗಳಿವೆ. ಅಕ್ಕರೆ ಇದೆ. ಅಚ್ಚರಿ ಇದೆ. ಅಳಿಸಲಾಗದಂತೆ ಮನ ಮುಟ್ಟುವ ಮೌಲ್ಯಗಳ ಜೀವನ ಪಾಠಗಳಿವೆ. ಕಲ್ಲರಳಿಸಿ ಹೂವಾಗಿಸುವ ಶಿಕ್ಷಕರೆಂಬ ಶಿಲ್ಪಿಗಳ ದಂಡಿದೆ. ಆತ್ಮವಿಶ್ವಾಸದ ಹೆಜ್ಜೆಗಳನ್ನಿಡುವಲ್ಲಿಂದ ಆರಂಭಿಸಿ ತಾವೇ ಅಳಿಸಲಾಗದ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗುವ ವಿದ್ಯಾರ್ಥಿಗಳು ಇಲ್ಲಿನ ವಿಶೇಷತೆ. ಇದನ್ನು ಪ್ರತಿ ವರ್ಷವೂ ಹೊಸ ದಾಖಲೆ ಬರೆಯುತ್ತಿರುವ ಫಲಿತಾಂಶಗಳೇ ಸಾರಿ ಹೇಳುತ್ತಿವೆ! ಸಾಮಾನ್ಯ ವಿದ್ಯಾರ್ಥಿಗಳೂ ಅಸಾಮಾನ್ಯರಾಗಿ ಸಾಧಕರಾಗಿ ಬೆಳೆದಿದ್ದಾರೆ. ಬೆಳಗಿದ್ದಾರೆ. ಇದು ಎಕ್ಸಲೆಂಟ್ ವಿಶೇಷತೆ.ಮೂಡುಬಿದಿರೆಯ ಮಣ್ಣಿನಲ್ಲಿ ಅಕ್ಷರ ಪ್ರೀತಿಯ ಜತೆಗೆ ಸಾಂಸ್ಕೃತಿಕ ಕಾಳಜಿಯೊಂದಿಗೆ ಅರಳಿ ನಿಂತ ಸಂಸ್ಥೆ ಎಕ್ಸಲೆಂಟ್ ಸಂಸ್ಥೆ. ಪಾಠ ಪುಸ್ತಕಗಳ ಗಡಿಯನ್ನು ಮೀರಿ ಜೀವನವೆಂಬ ಮಹಾ ಗ್ರಂಥದ ಅರ್ಥ ವಿವರಿಸುವ ಗುರುಕುಲ ಪರಂಪರೆಯ ಪ್ರತಿರೂಪವಾಗಿದೆ. ಸಾಧನೆಯ ಸೀಮೆ ವಿಸ್ತರಿಸಿ ಹೊಸ ಸಾಧ್ಯತೆಯನ್ನು ಶೋಧಿಸುವಲ್ಲಿ ಗೆದ್ದಿರುವುದು ಎಕ್ಸಲೆಂಟ್ ವೈಶಿಷ್ಟ್ಯ. ಇಲ್ಲಿ ಶಿಕ್ಷಣವು ಆತ್ಮ ಶೋಧನೆಯ ಪಯಣ. ಇದಕ್ಕೆ ಕಳೆದ 13 ವರ್ಷಗಳ ನಿರಂತರ ಪರಿಶ್ರಮದ ಹಿನ್ನೆಲೆಯಿದೆ. ಈ ತಪಸ್ಸಿನ ಫಲವಾಗಿ ಇಂದು ನೀಟ್, ಜೆಇಇ, ಎನ್‌ಡಿಎ, ಸಿಎ/ಸಿಎಸ್ ಫೌಂಡೇಶನ್ ಬೋರ್ಡ್ ಪರೀಕ್ಷೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೊಸ ದಾಖಲೆಗಳನ್ನೇ ಬರೆಯುತ್ತಿದ್ದಾರೆ.
ಈ ಬಾರಿ ಎಕ್ಸಲೆಂಟ್ ಪಿಯು ಬೋರ್ಡ್ ಪರೀಕ್ಷೆಯ ಸಾಧನೆ ಇದು ಕೇವಲ ಸಂಖ್ಯೆಗಳ ಜಯವಲ್ಲ. ಪರಿಶ್ರಮದ ಪರಾಕಾಷ್ಠೆ. ಮೊದಲ ೧೦ ರ‍್ಯಾಂಕ್‌ಗಳು ಸಂಸ್ಥೆಯ ೩೨ ವಿದ್ಯಾರ್ಥಿಗಳ ಪಾಲಾಗಿದೆ. ಪರೀಕ್ಷೆ ಬರೆದ ೧೧೧೨ ವಿದ್ಯಾರ್ಥಿಗಳಲ್ಲಿ ೮೧೮ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ. ಬೇರೆ ಬೇರೆ ವಿಷಯಗಳಲ್ಲಿ ಒಟ್ಟು ೪೨೩ ಪೂರ್ಣಾಂಕ (ಶೇ.100) ಬಂದಿರುತ್ತದೆ.
ಸಮಾಜದಲ್ಲಿರುವ ಪ್ರತಿಯೊಬ್ಬ ಬಾಲಕ, ಬಾಲಕಿಯರ ಉನ್ನತ ವಿಧ್ಯಾಭ್ಯಾಸದ ಬದ್ಧತೆಯಿಂದ ತೊಡಗಿಸಿಕೊಂಡ ಎಕ್ಸಲೆಂಟ್ ಸಂಸ್ಥೆಯ ವೈಶಿಷ್ಟವೆಂದರೆ ಎಸ್ಸೆಸ್ಸೆಲ್ಸಿ ಮುಗಿಸಿ ಈ ಸಂಸ್ಥೆಗೆ ದಾಖಲಾಗಲು ವಿದ್ಯಾರ್ಥಿಗೆ ಗರಿಷ್ಠ ಅರ್ಹತೆಯ ಮಾನದಂಡವಿಲ್ಲ. ಸಾಧನೆಯ ಹಾದಿಯಲ್ಲಿ ಉತ್ಸಾಹ, ಆಸಕ್ತಿಯೇ ಪ್ರಧಾನ. ಶೇ.40ರ ವಿದ್ಯಾರ್ಥಿಯೂ ಇಲ್ಲಿ ಅಂಕಗಳಿಗಿಂತ ಆಸಕ್ತಿ ಹೇಗಿದೆ ಎನ್ನುವ ಮಾನದಂಡದಿಂದ ಅಳೆಯಲ್ಪಡುತ್ತಾನೆ. ಹಾಗಾಗಿ ಇದು ಟಾಪರ್‌ಗಳ ಸಂಗಮವಲ್ಲ. ಟಾಪರ್‌ಗಳನ್ನಾಗಿಸುವ ಸಂಗ್ರಾಮ. ಈ ಯಶಸ್ಸಿನ ಮೂಲ ಮಂತ್ರವೇ ಮೌಲ್ಯಗಳ ಪ್ರಧಾನದ ಜತೆಗೆ ಪರಿಶ್ರಮ. ಎಕ್ಸಲೆಂಟ್ ಅದೇನು ಮಾಡಿದೆ ಎನ್ನುವುದು ಈ ಬಾರಿ ಮತ್ತೆ ಸಾಬೀತಾಗಿದೆ.
ಎರಡು ವರ್ಷಗಳ ಹಿಂದೆ ಕಾಲೇಜಿಗೆ ಸೇರಿದ ಸುಮಾರು ೧೯೩ ವಿದ್ಯಾರ್ಥಿಗಳು ೧೦ನೇ ತರಗತಿಯಲ್ಲಿ ಗಳಿಸಿದ ಅಂಕಗಳಿಗಿಂತ ಪಿಯುಸಿಯಲ್ಲಿ ಶೇ.೨೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ೩೯೭ ವಿದ್ಯಾರ್ಥಿಗಳು ಮಾತ್ರ ಅತ್ಯುನ್ನತ ಶ್ರೇಣಿಯಲ್ಲಿ ಈ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. ಈ ಬಾರಿಯ ದ್ವಿತೀಯ ಪಿಯು ಬೋರ್ಡ್ ಪರೀಕ್ಷೆಯಲ್ಲಿ ಆ ಸಂಖ್ಯೆ ೮೧೮ಕ್ಕೆ ಏರಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ.೭೫ ವಿದ್ಯಾರ್ಥಿಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿಸಿದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಬೆಳಕಿಗೆ ಬಂದವರು ನಿರಂತರ ಬೆಳಗಿದ್ದಾರೆ. ಬೆಳೆಯುತ್ತಲೇ ಇದ್ದಾರೆ.
ವರ್ಷವೂ ನಾಡಿನ ಎಲ್ಲ ಮೂಲೆಗಳಿಂದ ನಿರೀಕ್ಷೆ, ಪರೀಕ್ಷೆ ,ಸಮಸ್ಯೆ, ಸವಾಲು ಹೀಗೆ ಹಲವು ಕಾರಣಗಳಿಂದ ಬಂದು ಸೇರುವ ಯುವ ವಿದ್ಯಾರ್ಥಿಗಳ ತಂಡಕ್ಕೆ ಅನನ್ಯ ಕಾಳಜಿ, ಅನುಭವ, ಅಕ್ಕರೆಯ ಜತೆಗೆ ಮೌಲ್ಯಗಳ ಧಾರೆ ಎರೆದು ಸಾಧನೆಯ ಶಿಖರವೇರಲು ಸಾಥ್ ನೀಡುವ ಎಕ್ಸಲೆಂಟ್ ಎಂಬ ಗುರುಕುಲ ಹಿಂದೆ ಗುರು ಮುಂದೆ ಗುರಿ ಎಂಬ ಒತ್ತಡ ರಹಿತ ಮೌಲ್ಯಗಳ ಹಸಿರ ಮಡಿಲಲ್ಲಿ ವರ್ಷವೂ ಸಾಧಕರನ್ನು ಅರಳಿಸುವ ಮೂಲಕ ಎಕ್ಸಲೆಂಟ್ ಹೆಸರಿಗೆ ಅನ್ವರ್ಥ ರೂಪವಾಗಿ ಬೆಳೆದಿದೆ. ಈ ಎಲ್ಲ ಸಾಧನೆಗಳ ಹಿಂದೆ ಎಲ್ಲರಿಗಾಗಿ ನಾವು ಎನ್ನುವ ಸಮರ್ಪಣಾ ಭಾವದ ಯುವರಾಜ್ ಜೈನ್, ರಶ್ಮಿತಾ ಜೈನ್ ದಂಪತಿಯ ನಾಯಕತ್ವ ನಿರಂತರ ಸಾಧನೆ, ಸಾಧಕರ ಮೂಲಕ ನಾಡಿನ ಗಮನ ಸೆಳೆದಿದೆ.