ಚಡಚಣ: ಜ.16ಕ್ಕೆ ರಸ್ತೆಗಾಗಿ ರೈತರ ಉಪವಾಸ ಸತ್ಯಾಗ್ರಹ

KannadaprabhaNewsNetwork |  
Published : Jan 14, 2024, 01:30 AM ISTUpdated : Jan 14, 2024, 05:17 PM IST
ತಾಲೂಕಿನ ಶಿರನಾಳ ಗ್ರಾಮದ ರೈತರು ಬೆಳೆದ ನಿಂತಿರುವ ಕಬ್ಬನ್ನು ಕಟಾವು ಮಾಡಿ ಸಾಗಿಸಲು ರಸ್ತೆ ಅತೀಕ್ರಮಣವನ್ನು ತೆರುವುಗೊಳಿಸಿ ಸುಗಮ ಸಂಚಾರಕ್ಕೆ ಅಧಿಕಾರಿಗಳು ಸಹಕರಿಸಿದೇ ಇರುವುದನ್ನು ಖಂಡಿಸಿ ಜ.16 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಧೂಳಖೇಡ ಗ್ರಾಮ ಪಂಚಾಯ್ತಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ತಹಶೀಲ್ದಾರಗೆ ನೀಡಿರುವ ಮನವಿಯಲ್ಲಿ  ರೈತರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರಾದ ಕಲ್ಲಪ್ಪ ಗುಮತೆ, ಗುರುಬಾಯಿ ಬಿರಾದಾರ, ಪಾರ್ವತಿ ಗುಮತೆ, ರೂಪಾ ಹಳ್ಳಿ ತಿಳಿಸಿದ್ದಾರೆ. | Kannada Prabha

ಸಾರಾಂಶ

ತಾಲೂಕಿನ ಶಿರನಾಳ ಗ್ರಾಮದ ರೈತರ ಕಬ್ಬು ಸಾಗಣೆಗೆ ಸೂಕ್ತ ರಸ್ತೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಜ.16ರಂದು ಧೂಳಖೇಡ ಗ್ರಾಮ ಪಂಚಾಯತಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಗ್ರಾಪಂ ಸದಸ್ಯ ಕಲ್ಲಪ್ಪ ಗುಮತೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ತಾಲೂಕಿನ ಶಿರನಾಳ ಗ್ರಾಮದ ರೈತರ ಕಬ್ಬು ಸಾಗಣೆಗೆ ಸೂಕ್ತ ರಸ್ತೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಜ.16ರಂದು ಧೂಳಖೇಡ ಗ್ರಾಮ ಪಂಚಾಯತಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಗ್ರಾಪಂ ಸದಸ್ಯ ಕಲ್ಲಪ್ಪ ಗುಮತೆ ಹೇಳಿದರು.

ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕುರಿತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ತಾಲೂಕಿನ ಹೊಳೆ ಶಿರನಾಳ ಗ್ರಾಮದ ರೈತರು ಕಬ್ಬು ಸಾಗಿಸಲಾಗದೆ 4 ತಿಂಗಳಿಂದ ಒದ್ದಾಡುತ್ತಿದ್ದಾರೆ. ಅತೀಕ್ರಮಣ ರಸ್ತೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನಕೂಲ ಕಲ್ಪಿಸಕೊಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪಿಡಿಒ ಅವರು ಇಒ ಕಡೆ ಬೊಟ್ಟು ಮಾಡುತ್ತಾರೆ. ಇಒ ಅವರನ್ನು ಸಂಪರ್ಕಿಸಿದರೆ ಅವರು ಪಿಡಿಒ ಅವರ ಕಡೆ ಬೊಟ್ಟು ಮಾಡುತ್ತಾರೆ ಎಂದರು.

ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು ಕಾಲಹಣ ಮಾಡುತ್ತಿದ್ದಾರೆ. ಜ.16 ರಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಹಸೀಲ್ದಾರ್‌ ಅವರಿಗೆ ಮನವರಿಕೆ ಮಾಡಿದ್ದೇವೆ. ಅದಕ್ಕೂ ಬೇಡಿಕೆ ಈಡೇರದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಮಾಡುತ್ತೇವೆ. ಅವಾಗಲೂ ರೈತರ ನೆರವಿಗೆ ಬರದಿದ್ದರೇ ಕಬ್ಬಿಗೆ ಬೆಂಕಿ ಹಚ್ಚಿತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗುರುಬಾಯಿ ಬಿರಾದಾರ, ಪಾರ್ವತಿ ಗುಮತೆ, ರೂಪಾ ಹಳ್ಳಿ, ಮುರಳಿಧರ ಬಡಿಗೇರ, ರತ್ನಾಬಾಯಿ ಧೂಳಖೇಡ, ಶಿವಾಜಿ ಸಂಕಪಳ, ಹಣಮಂತ ಸಂಕಫಳ, ನಾರಾಯಣ ಸಂಕಫಳ, ಗೋಪಾಲ ಸಂಕಫಳ, ಲಕ್ಷ್ಮಣ ಸಂಕಫಳ, ಬಾಪುರಾಯ ಕುರಗೊಟಗಿ, ಜಕ್ಕಪ್ಪ ಕುರಗೊಟಗಿ, ಸಿದ್ದಾರಾಮ ಸಂಕಫಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!