ಮುಂಡರಗಿ ರೈತರ ಬೇಡಿಕೆಗಳ ಈಡೇರಿಸಲು ಒತ್ತಾಯ

KannadaprabhaNewsNetwork | Published : Oct 17, 2023 12:47 AM

ಸಾರಾಂಶ

ಮುಂಡರಗಿ ತಾಲೂಕು ನಿರಂತರವಾಗಿ ಬರಗಾಲವನ್ನು ಅನುಭವಿಸುತ್ತಿರುವ ತಾಲೂಕಾಗಿದ್ದು, ಪ್ರಸ್ತುತ ವರ್ಷವೂ ಸಹ ಭೀಕರವಾದ ಬರಗಾಲದಿಂದ ತತ್ತರಿಸಿದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಾಲೂಕಿನ ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಮುಂಡರಗಿ:ಮುಂಡರಗಿ ತಾಲೂಕು ನಿರಂತರವಾಗಿ ಬರಗಾಲವನ್ನು ಅನುಭವಿಸುತ್ತಿರುವ ತಾಲೂಕಾಗಿದ್ದು, ಪ್ರಸ್ತುತ ವರ್ಷವೂ ಸಹ ಭೀಕರವಾದ ಬರಗಾಲದಿಂದ ತತ್ತರಿಸಿದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಾಲೂಕಿನ ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

2023- 24 ನೇ ಸಾಲಿನಲ್ಲಿ ತಾಲೂಕಿನ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವ ಮೊದಲು ರೈತರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಯೋಗ್ಯವಾದ ದರ ನಿಗದಿ ಮಾಡಬೇಕು, ರೈತರಿಗೆ ಸಮರ್ಪಕವಾಗಿ ಹಗಲು ಹೊತ್ತಿನಲ್ಲಿ 7 ತಾಸು ವಿದ್ಯುತ್ ನೀಡಬೇಕು, ರೈತರ ಕಟಬಾಕಿ ಮತ್ತು ಚಾಲ್ತಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಎಲ್ಲ ಬೆಳೆಗೂ ಶೀಘ್ರವಾಗಿ ಬೆಳೆವಿಮೆ ಹಣವನ್ನು ಬಿಡುಗಡೆ ಮಾಡಬೇಕು, ಬರ ಪರಿಹಾರ ಧನವನ್ನು ಶೀಘ್ರವೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಹಾಗೂ ತಾಲೂಕಿನಲ್ಲಿ ಗೋ ಶಾಲೆಗಳನ್ನು ತೆರೆಯುವ ಮೂಲಕ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು, ತಾಲೂಕಿನಲ್ಲಿ ಈಗಾಗಲೇ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ ಮಾಡಿದ್ದು, ತಕ್ಷಣವೇ ಅಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಗ್ರೇಡ್‌-2 ತಹಸಿಲ್ದಾರ್ ಕೆ.ರಾಧಾ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಶಿವಾನಂದ ಇಟಗಿ, ಎಚ್.ಬಿ. ಕುರಿ, ಮುತ್ತನಗೌಡ ಗೌಡರ್, ಶರಣಪ್ಪ ಚನ್ನಳ್ಳಿ, ಚಂದ್ರಕಾಂತ ಉಳ್ಳಾಗಡ್ಡಿ, ಈರಣ್ಣ ಶೀರಿ, ಶಿವನಗೌಡ ಗೌಡರ್, ಶಿವಣ್ಣ ಸಬರದ್, ಅಶ್ವಿನಿ ಗೌಡರ್, ಚಂದ್ರಪ್ಪ ಕುರಿ, ಬಸವರಾಜ ಅಗ್ಗದ, ದುರ್ಗಪ್ಪ ಚಿಕ್ಕಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article