ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ

KannadaprabhaNewsNetwork |  
Published : Jun 04, 2025, 12:21 AM IST
3ಕೆಜಿಎಫ್‌1 | Kannada Prabha

ಸಾರಾಂಶ

ಕೆಜಿಎಫ್‌ನ ವಲಗಮಾದಿ ರಸ್ತೆಯ ಪಕ್ಕದಲ್ಲಿರುವ ಗಾಲ್ಪ್ ಮೈದಾನದ ೮.೨ ಎಕರೆ ಭೂಮಿಯನ್ನು ಅಂಬೇಡ್ಕರ್ ಭವನ ಹಾಗೂ ಅಂಭೇಡ್ಕರ್ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ೮.೨ ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ೮.೨ ಎಕರೆ ಜಾಗದಲ್ಲಿ ಅಂಬೇಡ್ಕರ್ ಭವನ, ಡಿಜಿಟಿಲ್ ಗ್ರಂಥಾಲಯ, ೫ ಎಕರೆ ಜಾಗದಲ್ಲಿ ವಿಜ್ಞಾನ ಪ್ರದರ್ಶನ ಭವನ, ರೋರ್ಸ್‌ ಕ್ಯಾಂಪ್‌ನಲ್ಲಿ ೨೫.೬ ಎಕರೆ ಜಾಗದಲ್ಲಿ ಆಶ್ರಯ ಮನೆಗಳ ನಿವೇಶನ, ಇಂದಿರಾ ಕ್ಯಾಂಟೀನ್‌ನ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಸಹಾಯಕ ಸಾರಿಗೆ ಕಚೇರಿಯ ಕಾಮಗಾರಿ ಬಹುತೇಕ ಮುಗಿದಿದ್ದು, ಕಚೇರಿಯ ೨.೪೫ ಕೋಟಿ ರೂಪಾಯಿಗಳ ಬಿಲ್ಲು ಬಾಕಿ ಇರುವ ಹಿನ್ನಲೆಯಲ್ಲಿ ಗುತ್ತಿಗೆದಾರ ಸಾರಿಗೆ ಕಚೇರಿಯನ್ನು ಇಲಾಖೆಗೆ ಹಸ್ತಾಂತರ ಮಾಡಿಲ್ಲ ಎಂದು ಶಾಸಕಿ ರೂಪಕಲಾ ಶಶಿಧರ್‌ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು, ಈ ವಿಷಯವನ್ನು ಸಾರಿಗೆ ಆಯುಕ್ತರ ಬಳಿ ಚರ್ಚಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.ಅಂಭೇಡ್ಕರ್ ಭವನಕ್ಕೆ ಭೂಮಿಡಾ.ತಿಮ್ಮಯ್ಯ ತಾಂತ್ರಿಕ ವಿದ್ಯಾಲಯದ ಬಳಿ ವಲಗಮಾದಿ ರಸ್ತೆಯ ಪಕ್ಕದಲ್ಲಿರುವ ಗಾಲ್ಪ್ ಮೈದಾನದ ೮.೨ ಎಕರೆ ಭೂಮಿಯನ್ನು ಅಂಬೇಡ್ಕರ್ ಭವನ ಹಾಗೂ ಅಂಭೇಡ್ಕರ್ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ೮.೨ ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು. ಟಿಜಿಟಲ್ ಗ್ರಂಥಾಲಯಕ್ಕೆ ೨ ಕೋಟಿ, ಅಂಬೇಡ್ಕರ್ ಭವನಕ್ಕೆ ೧.೫೫ ಕೋಟಿ ರುಪಾಯಿ ಬಿಡುಗಡೆಯಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಿದ ನಂತರ ಮಿಕ್ಕ ಅನುದಾನವನ್ನು ಸರಕಾರ ಬಿಡುಗಡೆಗೊಳಿಸುಸಲಾಗುವುದು. ಆಶ್ರಯ ಬಡಾವಣೆಯಲ್ಲಿ ವಾಣಿಜ್ಯ ಉಪಯೋಕ್ಕಾಗಿ ಸೋಲೋ ಕಾನೂನು ರೀತ್ಯ ಬ್ಲಾಕ್‌ನ್ನು ಕಾಯ್ದರಿಸಿ ಮುಂದಿನ ದಿನಗಳಲ್ಲಿ ವಾಣೀಜ್ಯ ಮಾಲ್‌ನ್ನು ನಿರ್ಮಿಸಿವಂತೆ ಜಿಲ್ಲಾಧಿಕಾರಿ ಎಇಇ ಮಂಜುನಾಥ್ ಅವರಿಗೆ ಸೂಚಿಸಿದರು. ಆಶ್ರಯ ಮನೆಗಳ ನಿವೇಶ ನಿರ್ಮಾಣದ ರಸ್ತೆಗಳೀಗೆ ೩.೭೫ ಕೋಟಿ ರುಪಾಯಿಗಳ ವೆಚ್ಚದಲ್ಲಿ ಎಲ್ಲ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದೆಂದು ಎಇಇ ಮಂಜುನಾಥ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.ಇಂದಿರಾ ಕ್ಯಾಂಟೀನ್‌ಗೆ ಭೇಟಿಇಂದಿರಾ ಕ್ಯಾಂಟೀನ್‌ನ ಕಾಮಗಾರಿ ಬಹುತೇಕು ಮುಗಿದಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಸರ್ಮಪಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು, ನಗರದ ಹೃದಯಬಾಗದಲ್ಲಿ ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಲಾಗಿದ್ದು, ಬಸ್ ನಿಲ್ದಾಣ, ಆಸ್ಪತ್ರೆ ಹತ್ತಿರ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ, ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಂಜಲಿದೇವಿ, ಸಹಾಯಕ ಪ್ರಾದೇಶಿಕ ಅಧಿಕಾರಿ ನಯಾಜ್‌ಪಾಷ, ನಗರಸಭೆ ಅಧ್ಯಕ್ಷರಾದ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಮಾಣಿಕ್ಯಂ, ಕರುಣಾಕರನ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ