ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ, ಕಳೆದ 12 ವರ್ಷಗಳಿಂದ ಹರ್ ಘರ್ ತಿರಂಗಾ ಧ್ವಜದ ಬಗ್ಗೆ ಹೆಮ್ಮೆ ಹಾಗೂ ಗೌರವ ಮೂಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಈ ಅಭಿಯಾನವು ಪ್ರಸ್ತುತ ಸುರಕ್ಷಿತವಾದ ಭಾರತ ನಿರ್ಮಿಸುವಲ್ಲಿ ಹಾಗೂ ಒಂದೇ ಭಾರತ ಎಂಬ ಕನಸು ನನಸು ಮಾಡುವ ಸ್ಪಷ್ಟ ಹೆಜ್ಜೆ ಹಾಕುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಹರ್‌ಘರ್ ತಿರಂಗಾ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ತಾಲೂಕಿನ ಕೊಡಿಯಾಲ ಗ್ರಾಮದಿಂದ ಪೀಹಳ್ಳಿವರೆಗೆ ತಿರಂಗಾ ತ್ರಿವರ್ಣ ಧ್ವಜದೊಂದಿಗೆ ಬೈಕ್ ಜಾಥಾ ನಡೆಸಿದರು.
ವಿವಿಧ ಗ್ರಾಮಗಳ ಮೂಲಕ ರಾಷ್ಟ್ರ ಧ್ವಜ ಹಿಡಿದು ಬೈಕ್‌ಗಳಲ್ಲಿ ಸಾಗಿದ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೇಶಭಕ್ತಿ ಘೋಷಣೆಗಳನ್ನು ಕೂಗಿ ಜಾಥಾ ನಡೆಸಿದರು.
ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ, ಕಳೆದ 12 ವರ್ಷಗಳಿಂದ ಹರ್ ಘರ್ ತಿರಂಗಾ ಧ್ವಜದ ಬಗ್ಗೆ ಹೆಮ್ಮೆ ಹಾಗೂ ಗೌರವ ಮೂಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಈ ಅಭಿಯಾನವು ಪ್ರಸ್ತುತ ಸುರಕ್ಷಿತವಾದ ಭಾರತ ನಿರ್ಮಿಸುವಲ್ಲಿ ಹಾಗೂ ಒಂದೇ ಭಾರತ ಎಂಬ ಕನಸು ನನಸು ಮಾಡುವ ಸ್ಪಷ್ಟ ಹೆಜ್ಜೆ ಹಾಕುತ್ತಿದೆ ಎಂದರು.
ಪ್ರತಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿ ಆಚರಿಸುತ್ತಿದ್ದು, ರಾಷ್ಟ್ರವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹನೀಯರು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಗೌರವ ಹೆಚ್ಚಿಸುವುದು ಈ ಯಾತ್ರೆ ಉದ್ದೇಶ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ರಾಜು ಸಿದ್ದರಾಜುಗೌಡ, ಸಂತೋಷ್‌ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಸಚ್ಚಿನ್, ಅರಕೆರೆ ಪ್ರಶಾಂತ್, ಮೊಳ್ಳೇನಹಳ್ಳಿ ಚಂದ್ರು, ಬೈರೇಗೌಡ, ಕೊಡಿಯಾಲ ಸಿದ್ದರಾಜು, ಪೀಹಳ್ಳಿ ಕೃಪೇಶ್, ಮಧು, ಚೊಟ್ಟಹಳ್ಳಿ ದರ್ಶನ್, ಗಾಮನಹಳ್ಳಿ ಮಹದೇವು, ಬೆಟ್ಟಹಳ್ಳಿ ಚಿನ್ನಸ್ವಾಮಿ, ತಡಗವಾಡಿ ಕೆಂಪೇಗೌಡ, ಗೋವಿಂದು, ಪುಟ್ಟೇಗೌಡ, ಕೆ.ಬಿ ಕುಮಾರ್, ಗಣೇಶ್ ಪೀಹಳ್ಳಿ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.