ಜಮಖಂಡಿ ನಗರದ ಒಳಚರಂಡಿ ನಿರ್ಮೂಲನೆ ಕೇಂದ್ರದ ಆವರಣದಲ್ಲಿ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದ ಸರ್ಕಾರಿ ವಸತಿ ಗೃಹದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಒಳಚರಂಡಿ ನಿರ್ಮೂಲನೆ ಕೇಂದ್ರದ ಆವರಣದಲ್ಲಿ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದ ಸರ್ಕಾರಿ ವಸತಿ ಗೃಹದಲ್ಲಿ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಗರದ ಮುಧೋಳ ಗಲ್ಲಿಯ ನಿವಾಸಿ ಮಹಾಂತೇಶ ಪಾಟೀಲ (33) ಮೃತ ವ್ಯಕ್ತಿ. ಸ್ಥಳಕ್ಕೆ ಶಹರ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಸಿಬ್ಬಂದಿ ಶಂಕರ ಆಸಂಗಿ, ಪ್ರಕಾಶ ಹೊಸಮನಿ, ಈರಣ್ಣ ದಾಶ್ಯಾಳ, ಲೋಕೆಶ ಯಲಶೆಟ್ಟಿ, ಶಂಕರ ಮೂಲಿಮನಿ ಹಾಗೂ ಬಿ.ಎ. ಮೇಳಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಒಳಚರಂಡಿ ನಿರ್ಮೂಲನೆ ಕೇಂದ್ರ ಆವರಣದಲ್ಲಿರುವ ವಸತಿ ಗೃಹಗಳು ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಸೂಕ್ತ ನಿರ್ವಹಣೆ ಹಾಗೂ ಭದ್ರತಾ ವ್ಯವಸ್ಥೆಗಳ ಕೊರತೆಯಿಂದ ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.