ಕನ್ನಡಪ್ರಭ ವಾರ್ತೆ ಬೆಳಗಾವಿ ಎಸ್.ಎಸ್.ಕಿವಡಸಣ್ಣವರ ಅವರು ಶ್ರೀಮಠದ ಆಪ್ತ ಶಿಷ್ಯರು. ಸಾಮಾಜಿಕ, ಧಾರ್ಮಿಕವಾಗಿ ಕಾರ್ಯವನ್ನು ನಿರ್ವಹಿಸುವುದರ ಜತೆಗೆ 6ನೇ ಬಾರಿ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದರೆ ಇವರ ಮೇಲೆ ವಕೀಲರು ಎಷ್ಟು ವಿಶ್ವಾಸ ಇಟ್ಟಿದ್ದಾರೆ ಎಂದು ತಿಳಿಯುತ್ತದೆ ಎಂದು ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿವಡಸಣ್ಣವರ ಮಾತನಾಡಿ, 6ನೇ ಬಾರಿಗೆ ಬೆಳಗಾವಿ ವಕೀಲರು ಒಮ್ಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಮಾಣಿಕವಾಗಿ ವಕೀಲರಿಗೆ ಬೇಕು ಬೇಡಿಕೆಗಳಿಗೆ ಅನುಸಾರವಾಗಿ ಕೆಲಸ ಮಾಡುತ್ತೇನೆ. ವಕೀಲರ ಸಂಘದ ಇತಿಹಾಸದಲ್ಲಿ 6ನೇ ಬಾರಿಗೆ ಅಧ್ಯಕ್ಷರನ್ನಾಗಿ ಮಾಡಿರುವ ಇತಿಹಾಸ ಇಲ್ಲ. ವಕೀಲರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ನಮ್ಮ ಎಲ್ಲಾ ಕಾರ್ಯದ ಹಿಂದೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದದ ಜೊತೆಗೆ ಮಾರ್ಗದರ್ಶನವೂ ಇದೆ ಎಂದರು.
ಈ ವೇಳೆ ಬಿಜೆಪಿ ಮುಖಂಡ ವೀರೇಶ ಕಿವಡಸಣ್ಣವರ, ಪ್ರಶಾಂತ್ ಒಡೆಯರ್ ಇದ್ದರು.