ಸ್ಪೀಕರ್‌ ಕೆಲಸ ನೋಡಿ ಏನು ಕೊಡ್ತಾರೆ ಗೊತ್ತಿಲ್ಲ: ಖಾದರ್‌

KannadaprabhaNewsNetwork |  
Published : Jun 02, 2026, 03:00 AM IST
ಯು.ಟಿ.ಖಾದರ್‌ | Kannada Prabha

ಸಾರಾಂಶ

ನಾನು ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ಸ್ಪೀಕರ್ ಕೆಲಸ ನೋಡಿ ಏನು ಕೊಡ್ತಾರೆ ಗೊತ್ತಿಲ್ಲ ಎಂದು ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

ಮಂಗಳೂರು: ನಾನು ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ಸ್ಪೀಕರ್ ಕೆಲಸ ನೋಡಿ ಏನು ಕೊಡ್ತಾರೆ ಗೊತ್ತಿಲ್ಲ ಎಂದು ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

ಅವರು ಸೋಮವಾರ ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.\

ಈಗ ನಾನು ಸ್ಪೀಕರ್ ಆಗಿದ್ದೇನೆ, ಸರ್ಕಾರ ಅಧಿವೇಶನ ಮಾಡಲು ಹೇಳಿದಾಗ ಮಾಡುತ್ತೇನೆ. ಸಾಮಾಜಿಕ ಜಾಲತಾಣ‌ ನೋಡಿ ಯಾರೂ ಅಧಿಕಾರ ಕೊಡಲ್ಲ, ಫರ್ಫಾಮೆನ್ಸ್ ನೋಡಿ ಕೊಡ್ತಾರೆ. ಆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.ದ‌‌.ಕ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ಅಕ್ರಮಕ್ಕೆ ಕಡಿವಾಣ ಹಾಕಿದ್ದೇನೆ. ನಾನು ಯಾವುದೇ ಹುದ್ದೆ ಕೇಳಿಲ್ಲ, ಸಿಎಂ ಭೇಟಿಯಾಗಿ ಮೂರು ವರ್ಷ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದೇನೆ. ನನಗೆ ಏನು ನಡೆದಿದೆ ಅಂತ ಗೊತ್ತಿಲ್ಲ, ನಾನು ಪಕ್ಷ ಹೇಳಿದಂತೆ ಕೇಳಿದವನು. ಸ್ಪೀಕರ್ ಸ್ಥಾನದಲ್ಲಿ ಇರುವಾಗ ಪಕ್ಷ ರಹಿತವಾಗಿ ಕೆಲಸ ಮಾಡಿದ್ದೇನೆ. ನಾನು ಒಮ್ಮೆ ದ.ಕ. ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಇನ್ನು ಉತ್ತಮ ಕೆಲಸ ಮಾಡೋರು ಯಾರಾದ್ರೂ ಮಾಡಲಿ. ನಾನು ದೆಹಲಿಗೆ ಹೋಗಲ್ಲ, ಪಕ್ಷದ ಜೊತೆಗೆ ಕ್ಷೇತ್ರದ ಜನರು ಕೂಡ ಮುಖ್ಯ. ಜಾತಿ ಹಾಗೂ ಧರ್ಮ ಒಂದು ಗೌರವ ಮಾತ್ರ, ಯಾವುದೇ ಸ್ಥಾನಕ್ಕೆ ಹೋದರೂ ಪಕ್ಷದ ಸಿದ್ದಾಂತದಡಿ ಕೆಲಸ ಮಾಡಬೇಕು. ಪಕ್ಷದ ತತ್ವ ಸಿದ್ದಾಂತಗಳ ಅನುಗುಣವಾಗಿ ಕಾಂಗ್ರೆಸ್ ಪಕ್ಷದ ಸಿದ್ದಾಂತದಡಿ ಕೆಲಸ ಮಾಡಬೇಕು. ಡಿಸಿಎಂ ಹುದ್ದೆ ಸೃಷ್ಟಿ ಹೈಕಮಾಂಡ್ ತೀರ್ಮಾನ, ಅದಕ್ಕೆ ಎಲ್ಲರೂ ಬದ್ದ, ನಮ್ಮ ಮೇಲೆ ವಿಶ್ವಾಸ ಇಟ್ಟು ಆವತ್ತು ಹೈಕಮಾಂಡ್ ಕೇಳಿದಾಗ ಸ್ಪೀಕರ್ ಆಗಿದ್ದೇನೆ ನಮಗೆ ಪಕ್ಷ ಮುಖ್ಯ, ಅದಕ್ಕೆ ಮೊದಲು ನಮಗೆ ದೇಶ ಮುಖ್ಯ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಒತ್ತು; ದಯಾನಂದ ಪೈ
ಶಿಕ್ಷಕರನ್ನೇ ಆತ್ಮೀಯವಾಗಿ ಸ್ವಾಗತಿಸಿ ಹೊಸ ಶೈಕ್ಷಣಿಕ ವರ್ಷದ ಸಂಭ್ರಮ!