ಮಕ್ಕಳ ಕಲಿಕಾ ಸಾಮರ್ಥ್ಯ ಒರೆಗೆ ಹಚ್ಚುವುದು ನಮ್ಮೆಲ್ಲರ ಜವಾಬ್ದಾರಿ

KannadaprabhaNewsNetwork |  
Published : Oct 28, 2023, 01:15 AM IST
ಪೊಟೋ-ಪಟ್ಟಣದ ಸಹಸ್ರಾರ್ಜು ಬಿ.ಎಡ್‌ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶೈಕ್ಷಣಕ ಮಕ್ಕಳ ಸಾಧನ ತರಬೇತಿ ಕಾರ್ಯಾಗಾರವನ್ನು ಬಿಇಓ ಜಿ.ಎಂ.ಮುಂದಿನಮನಿ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ರಾಷ್ಟ್ರೀಯ ಶೈಕ್ಷಣಿಕ ಸಾಧನ ಸಮೀಕ್ಷೆ ಅಂಗವಾಗಿ ಶುಕ್ರವಾರ ಲಕ್ಷ್ಮೇಶ್ವರ ಪಟ್ಟಣದ ಸಹಸ್ರಾರ್ಜುನ ಬಿ. ಇಡಿ. ಪದವಿ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಾಗಾರವನ್ನು ಬಿಇಓ ಜಿ.ಎಂ. ಮುಂದಿನಮನಿ ಉದ್ಘಾಟಿಸಿದರು.

ಲಕ್ಷ್ಮೇಶ್ವರ: ರಾಷ್ಟ್ರಾದ್ಯಂತ ಎಲ್ಲ ವಿಧದ ಆಯ್ದ ಶಾಲೆಯಲ್ಲಿನ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಉದ್ದೇಶದಿಂದ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ರಾಷ್ಟ್ರೀಯ ಶಿಕ್ಷಣ ಸಂಶೋಧನೆ. ತರಬೇತಿ ಮಂಡಳಿಯು ನವೆಂಬರ್ 3ರಿಂದ ದೇಶಾದ್ಯಂತ ಶೈಕ್ಷಣಿಕ ಸಾಧನ ಸಮೀಕ್ಷೆ-23 ಹಮ್ಮಿಕೊಂಡಿದೆ ಎಂದು ಬಿಇಒ ಜಿ.ಎಂ. ಮುಂದಿನಮನಿ ಹೇಳಿದರು. ರಾಷ್ಟ್ರೀಯ ಶೈಕ್ಷಣಿಕ ಸಾಧನ ಸಮೀಕ್ಷೆ ಅಂಗವಾಗಿ ಶುಕ್ರವಾರ ಪಟ್ಟಣದ ಸಹಸ್ರಾರ್ಜುನ ಬಿ. ಇಡಿ. ಪದವಿ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ರಾಷ್ಟ್ರದಲ್ಲಿನ ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಉದ್ದೇಶದಿಂದ 3.6 ಮತ್ತು 9ನೇ ತರಗತಿಯ ಆಯ್ದ ವಿದ್ಯಾರ್ಥಿಗಳಿಗಾಗಿ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರದ ವಿದ್ಯಾರ್ಥಿಗಳಲ್ಲಿನ ಕಲಿಕೆಯ ಪ್ರಮಾಣ ಯಾವರೀತಿ ಸಾಗುತ್ತಿದೆ ಹಾಗೂ ಮಕ್ಕಳ ಪ್ರಗತಿಗೆ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮಗಳು ತಲುಪಿರುವ ಕುರಿತು ಅರಿಯುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು. ಈ ವೇಳೆ ಗದಗ ಜಿಲ್ಲಾ ಡಯಟ್‌ನ ಉಪನ್ಯಾಸಕ ಕೆ.ಪಿ. ಸಾಲಿಮಠ, ಡಯಟ್ ಉಪನ್ಯಾಸಕ ಜೆ.ಡಿ. ದಾಸರ, ಎಂ.ಎನ್. ಹಲವಾಗಲಿ, ಆರ್.ಎಂ. ಅಂಗಡಿ ಅವರು ಮಕ್ಕಳ ಶೈಕ್ಷಣಕ ಪ್ರಗತಿ ಅರಿಯುವ ಹಾಗೂ ಸಾಧನ ಸಮೀಕ್ಷೆಯುನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಬಿಆರ್‌ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಕೃಷ್ಣ ಖೋಡೆ, ಪ್ರಾಚಾರ್ಯ ಶಂಭುಲಿಂಗ ಹೊಸಳ್ಳಿಮಠ, ಇಸಿಓ ಉಮೇಶ ಹುಚ್ಚಯ್ಯನಮಠ ಇದ್ದರು. ಉಮೇಶ ನೇಕಾರ ನಿರೂಪಿಸಿದರು. ವಾಸು ದೀಪಾಲಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ