ಕನ್ನಡಪ್ರಭ ವಾರ್ತೆ ಗೋಕಾಕ ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ ಅವರಂತೆಯೇ ನಮ್ಮ ಚಿಕ್ಕಪ್ಪ ಡಾ.ಪುನೀತರಾಜಕುಮಾರ ಅವರ ಕೊಡುಗೆ ಅಪಾರವಾಗಿದೆ. ಗೋಕಾಕ ಚಳುವಳಿಯ ಸಂದರ್ಭ ಹಾಗೂ ಇತರೆ ಸಂದರ್ಭದಲ್ಲಿ ಗೋಕಾಕ ನಗರಕ್ಕೆ ಡಾ.ರಾಜಕುಮಾರ ಒಡನಾಟವನ್ನು ನಟ ವಿನಯರಾಜಕುಮಾರ ಭಾವುಕರಾದರು
ಕನ್ನಡಪ್ರಭ ವಾರ್ತೆ ಗೋಕಾಕ
ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ ಅವರಂತೆಯೇ ನಮ್ಮ ಚಿಕ್ಕಪ್ಪ ಡಾ.ಪುನೀತರಾಜಕುಮಾರ ಅವರ ಕೊಡುಗೆ ಅಪಾರವಾಗಿದೆ. ಗೋಕಾಕ ಚಳುವಳಿಯ ಸಂದರ್ಭ ಹಾಗೂ ಇತರೆ ಸಂದರ್ಭದಲ್ಲಿ ಗೋಕಾಕ ನಗರಕ್ಕೆ ಡಾ.ರಾಜಕುಮಾರ ಒಡನಾಟವನ್ನು ನಟ ವಿನಯರಾಜಕುಮಾರ ಭಾವುಕರಾದರು.ನಗರದ ಲಕ್ಷ್ಮೀ ಚಿತ್ರಮಂದಿರದ ಬಳಿಯ ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ ವೃತ್ತದಲ್ಲಿ ಅವರ ಅಭಿಮಾನಿ ಬಳಗ ನಿರ್ಮಿಸಿರುವ ನೂತನ ಡಾ.ಪುನೀತ ರಾಜಕುಮಾರ ಅವರ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು. ಈ ಹಿಂದೆ ನಮ್ಮ ತಾತ ಡಾ.ರಾಜಕುಮಾರ ಅವರೊಂದಿಗೆ ಒಂದು ವರ್ಷದ ಮಗುವಿದ್ದಾಗ ಚಿತ್ರಕರಣ ಸಂದರ್ಭದಲ್ಲಿ ಗೋಕಾಕಕ್ಕೆ ಆಗಮಿಸಿದ್ದೆ. ಈಗ ಮತ್ತೆ ಗೋಕಾಕ ನಗರಕ್ಕೆ ಬರುವ ಭಾಗ್ಯ ಒದಗಿ ಬಂದಿದೆ ಎಂದರು.ನಗರಕ್ಕೆ ಆಗಮಿಸಿದ್ದ ನಟ ವಿನಯರಾಜಕುಮಾರರನ್ನು ಬೈಕ್ ರ್‍ಯಾಲಿ ಮೂಲಕ ಅಭಿಮಾನಿಗಳು ವೇದಿಕೆಗೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಉದ್ಘಾಟಿಸಿದರು. ಅಫೇಕ್ಸ್ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ಮುಖಂಡರಾದ ಬಸವರಾಜ ಕಲ್ಯಾಣಶೆಟ್ಟಿ, ಜಾವೇದ ಗೋಕಾಕ, ಇಸ್ಮಾಯಿಲ, ರಾಮಣ್ಣ ತಳ್ಳಿ, ಸಂಜು ಚಿಪ್ಪಲಕಟ್ಟಿ, ಶಂಕರ ಅಂಕದವರ, ಶಶಿ ಕನ್ನಪ್ಪನವರ, ರಮೇಶ ಮಾದರ, ಭಗವಂತ ಹುಳ್ಳಿ, ನೀಲಕಂಠ ಕಪ್ಪಲಗುದ್ದಿ, ಪ್ರಕಾಶ ತಳ್ಳಿ, ರಮೇಶ ಬಡೆಪ್ಪಗೋಳ, ಡಾ.ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ಅಪ್ಪು ಬಡೆಪ್ಪಗೋಳ, ಉಪಾಧ್ಯಕ್ಷ ಗೋವಿಂದ ವಡ್ಡರ ಸೇರಿ ಹಲವರು ಇದ್ದರು..