ಆಪರೆಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಭಾರತೀಯ ಸೇನೆಯಲ್ಲಿ ಯೋಧರಾಗಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹೂಟ್ಟೂರಾದ ಕಮತಗಿ ಪಟ್ಟಣಕ್ಕೆ ಮರಳಿದ ಲಕ್ಷ್ಮಣ ಎಂ. ಪೂಜಾರಿ ಅವರಿಗೆ ಸಾರ್ವಜನಿಕರು ಸೋಮವಾರ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಕನ್ನಡಪ್ರಭ ವಾರ್ತೆ ಕಮತಗಿ
ಆಪರೆಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಭಾರತೀಯ ಸೇನೆಯಲ್ಲಿ ಯೋಧರಾಗಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹೂಟ್ಟೂರಾದ ಕಮತಗಿ ಪಟ್ಟಣಕ್ಕೆ ಮರಳಿದ ಲಕ್ಷ್ಮಣ ಎಣ. ಪೂಜಾರಿ ಅವರಿಗೆ ಸಾರ್ವಜನಿಕರು ಸೋಮವಾರ ಅದ್ಧೂರಿಯಾಗಿ ಸ್ವಾಗತ ಕೋರಿದರು.ಪಟ್ಟಣದಲ್ಲ ಹೊಳೆ ಹುಚ್ಚೇಶ್ವರಮಠಕ್ಕೆ ಬೆಳಗ್ಗೆ 9ಗಂಟೆಗೆ ಆಗಮಿಸಿದ ಲಕ್ಷ್ಮಣ ಅವರು ದೇವರ ದರ್ಶನ ಪಡೆದರು. ಶಾಲಾ ವಿದ್ಯಾರ್ಥಿಗಳು, ನಿವೃತ್ತ ಯೋಧರು, ಸಾರ್ವಜನಿಕರು ಜಯ ಘೋಷದೊಂದಿಗೆ ಬರಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಾಲ್ಮೀಕಿ ಸಮುದಾಯ ಭವನಕ್ಕೆ ಕರೆತರಲಾಯಿತು. ದಾರಿಯುದ್ಧಕ್ಕೂ ಜನ ನಿವೃತ್ತ ಯೋಧ ಹಾಗೂ ಅವರ ಪತ್ನಿಗೆ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿ ಹೂಮಳೆ ಸುರಿಸಿದರು.
ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು 2000 ಮೀ ಉದ್ದದ ರಾಷ್ಟಧ್ವಜ ಪ್ರದರ್ಶಿಸಿ ಗಮನ ಸೆಳೆದರು.ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು,ಶಿಕ್ಷಕರು,ನಿವೃತ್ತ ಯೋಧರು,ಸಾರ್ವಜನಿಕರು,ವಾಲ್ಮೀಕಿ ಸಮಾಜದ ಗುರು ಹಿರಿಯರು,ಯುವಕರು ಇದ್ದರು.