ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿಸ್ನು ಎಸ್ ಮೆನನ್ ಮತ್ತು ಸಿದ್ದಾರ್ಥ್ ಶೆಟ್ಟಿ ನಿರ್ದೇಶನ ವಿಶಾಂತ್ ಮಿನೆಜಸ್ ನಿರ್ಮಾಣದಲ್ಲಿ ತಯಾರಾದ ‘ಕಜ್ಜ’ ತುಳು ಸಿನಿಮಾ ಗುರುವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ದೇಶಕ, ನಟ ಸಿದ್ದಾರ್ಥ್ ಶೆಟ್ಟಿ ತಿಳಿಸಿದರು.
ಕಜ್ಜ ಸಿನಿಮಾದಲ್ಲಿ ಸಿದ್ದಾರ್ಥ್ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ನಿರ್ದೇಶನ: ಜಿಸ್ನು ಎಸ್ ಮೆನನ್ ಸಿದ್ದಾರ್ಥ್ ಶೆಟ್ಟಿ, ನಿರ್ಮಾಪಕರು: ವಿಶಾಂತ್ ಮಿನೆಜಸ್, ಛಾಯಾಗ್ರಾಹಣ: ಚಂದು ಮೆಪ್ಪಾಯೂರ್, ಸಂಕಲನ: ಶರತ್ ಹೆಗ್ಡೆ, ನೃತ್ಯ: ವಿಜೇತ್ ಆರ್ ನಾಯಕ್, ಸಾಹಸ: ಯೋಗಾನಂದ್, ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ ಅಡ್ಯನಡ್ಕ.
ಮೋಹನ್ ರಾಜ್, ಸಹನಾ ಸುಧಾಕರ್, ನಿರ್ಮಾಪಕ ವಿಶಾಂತ್ ಮಿನೆಜೆಸ್, ಗೌತಮ್ ಬಂಗೇರ, ಉದಯ ಪೂಜಾರಿ ಬಲ್ಲಾಲ್ ಬಾಗ್ ಇದ್ದರು.