ಪುಷ್ಪಗಿರಿ ಶ್ರೀಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Nov 04, 2024, 12:28 AM ISTUpdated : Nov 04, 2024, 12:29 AM IST
3ಎಚ್ಎಸ್ಎನ್3: ಹಳೇಬೀಡು ಸಮೀಪದ  ಪುಷ್ಪಗಿರಿ ಕ್ಷೇತ್ರದಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ತಾಲೂಕು ಆಡಳಿತದಿಂದ ಗೌರವಿಸಲಾಯಿತು. | Kannada Prabha

ಸಾರಾಂಶ

ಇಲ್ಲಿಗೆ ಸಮೀಪದ ಪುಷ್ಪಗಿರಿಯಲ್ಲಿ ನಡೆದ ಶ್ರೀ ಕರಿಬಸವ ಅಜ್ಜಯ್ಯ ಸ್ವಾಮಿಯವರ ದೇವಾಲಯದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಹುಲ್ಲಳ್ಳಿ ಸುರೇಶ್ ಹಾಗೂ ತಾಲೂಕು ದಂಡಾಧಿಕಾರಿ ಮಮತಾ ಅವರು ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಸೋಮಶೇಖರ ಸ್ವಾಮೀಜಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತ,ತಾಲೂಕು ಆಡಳಿತ ಶ್ರೀ ಮಠದ ಹಲವಾರು ಸಾಮಾಜಿಕ ಸೇವೆಗಳನ್ನು ಗುರುತಿಸಿ ಜಿಲ್ಲಾ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದಕ್ಕೆ ಆಭಾರಿಯಾಗಿರುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ತಾಲೂಕು ಆಡಳಿತ ಶ್ರೀ ಮಠದ ಹಲವಾರು ಸಾಮಾಜಿಕ ಸೇವೆಗಳನ್ನು ಗುರುತಿಸಿ ಜಿಲ್ಲಾ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದಕ್ಕೆ ಆಭಾರಿಯಾಗಿರುತ್ತೇನೆ ಎಂದು ಪುಷ್ಪಗಿರಿ ಕ್ಷೇತ್ರದ ಶ್ರೀ ಸೋಮಶೇಖರ ಸ್ವಾಮೀಜಿಯವರು ತಿಳಿಸಿದರು.

ಇಲ್ಲಿಗೆ ಸಮೀಪದ ಪುಷ್ಪಗಿರಿಯಲ್ಲಿ ನಡೆದ ಶ್ರೀ ಕರಿಬಸವ ಅಜ್ಜಯ್ಯ ಸ್ವಾಮಿಯವರ ದೇವಾಲಯದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಹುಲ್ಲಳ್ಳಿ ಸುರೇಶ್ ಹಾಗೂ ತಾಲೂಕು ದಂಡಾಧಿಕಾರಿ ಮಮತಾ ಅವರು ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀ ಸೋಮಶೇಖರ ಸ್ವಾಮೀಜಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತ, ಈ ಕ್ಷೇತ್ರ ರಾಜ್ಯ ಹಾಗೂ ದೇಶದಲ್ಲಿ ಪ್ರಚಾರ ಇರುವ ಕ್ಷೇತ್ರವಾಗಿದೆ. ಈ ಪ್ರಶಸ್ತಿ ನಮ್ಮ ಕ್ಷೇತ್ರ ಸಂಸ್ಥಾನಕ್ಕೆ, ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರಿಗೆ ನನ್ನ ಭಕ್ತರಿಗೆ ಸಲ್ಲಿರುವ ಪ್ರಶಸ್ತಿಯನ್ನು ಅವರುಗಳ ಪರವಾಗಿ ಸ್ವೀಕರಿಸಿದ್ದೇನೆ. ಮಠಮಾನ್ಯಗಳು ಸಮಾಜದಲ್ಲಿ ನೊಂದವರ ದೀನದಲಿತರ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಕಷ್ಟಕ್ಕೆ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕಾರ್ಯ ಮಾಡುತ್ತವೆ. ಆ ನಿಟ್ಟಿನಲ್ಲಿ ಪುಷ್ಪಗಿರಿ ಮಹಾಸಂಸ್ಥಾನ ಒಂದು ಹೆಜ್ಜೆ ಮುಂದೆ ಇದ್ದು, ಅದನ್ನು ಗುರುತಿಸಿದ ತಾಲೂಕು ಮತ್ತು ಜಿಲ್ಲಾ ಆಡಳಿತಕ್ಕೆ ಕೃತಜ್ಞತೆ ತಿಳಿಸುತ್ತಾ ತಾಲೂಕು ಆಡಳಿತ ನೀಡಿದ ಗೌರವವನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ. ಸುರೇಶ್ ಮಾತನಾಡಿ, ನಾಡಿನ ಎಲ್ಲಾ ಭಾಗದ ಎಲ್ಲಾ ವರ್ಗದವರ ಅದರಲ್ಲೂ ಗ್ರಾಮೀಣ ಭಾಗದ ರೈತರ ಮಹಿಳೆಯರ ಬಡವರ ಕಷ್ಟಗಳಿಗೆ ಆಸರೆಯಾಗುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ಶ್ರೀಮಠ ಹಮ್ಮಿಕೊಂಡಿದ್ದು, ಅದರಂತೆ ಗ್ರಾಮೀಣ ಭಾಗಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕ, ಮಹಿಳಾ ಸ್ವಾವಲಂಬಿ ಹಾಗೂ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಿ ಪುಷ್ಪಗಿರಿ ಮಹಾಸಂಸ್ಥಾನದಿಂದ ನೊಂದವರ ಧ್ವನಿಯಾಗುವ ಕಾರ್ಯ ಮಾಡುತ್ತಿದೆ. ಅವರ ಸಾಮಾಜಿಕ ಕಾರ್ಯಕ್ಕೆ ಗೌರವ ದೊರೆತಿದೆ ಎಂದು ತಿಳಿಸಿದರು.

ತಹಸೀಲ್ದಾರ್‌ ಮಮತಾ ಮಾತನಾಡಿ, ಪುಷ್ಪಗಿರಿ ಮಠದ ಶ್ರೀಗಳು ಬಹಳ ಶ್ರಮಜೀವಿಗಳು, ಎಲ್ಲಾ ಕೆಲಸ ಬಗ್ಗೆ ಅನುಭವ ಹೊಂದಿದ್ದಾರೆ. ದಿನದ ೨೪ ಗಂಟೆಗಳು ಸಮಾಜದ ಅಭಿವೃದ್ಧಿಗಾಗಿ ಅಲೋಚನೆ ಮಾಡುವ ವ್ಯಕ್ತಿಗಳು, ಅವರ ಪರಿಶ್ರಮದಿಂದಲೇ ಪುಷ್ಪಗಿರಿ ಮಠ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಅವರ ಸಾಧನೆ ಗುರುತಿಸಿ ನಮ್ಮ ಜಿಲಾ ಮತ್ತು ತಾಲೂಕು ಆಡಳಿತ ಇಂದು ಕನ್ನಡ ರಾಜ್ಯೋತ್ಸವದಂದು ಗೌರವಿಸಿದೆ ಎಂದು ತಿಳಿಸಿದರು.

ಈ ಕಾರ್ಯಕ್ರದಲ್ಲಿ ಪುಷ್ಪಗಿರಿ ಮಠದ ಜಿಲ್ಲಾ ಯೋಜನಾಧಿಕಾರಿ ವಿನುತಾ ಧನಂಜಯ್ ಮಠದ ಭಕ್ತರಾದ ಪ್ರಸನ್ನ, ರಘುನಾಥ್, ಹೆಬ್ಬಾಳು ಹಾಲಪ್ಪ, ಎಂ.ಸಿ.ಕುಮಾರ್‌, ಜಾವಗಲ್ ಪ್ರಸನ್ನಕುಮಾರ್, ಮುಂತಾದವರು ಕಾರ್ಯಕ್ರದಲ್ಲಿ ಹಾಜರಿದ್ದರು.

.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ