ಕನ್ನಡಪ್ರಭ ವಾರ್ತೆ ಚಿಂತಾಮಣಿ
ಜನರ ಅಗತ್ಯತೆಗೆ ಅನುಗುಣವಾಗಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕಾಗಿರುವುದು ಕಾಯಕಬಂಧುಗಳ ಕರ್ತವ್ಯವಾಗಿದೆಯೆಂದು ತಾಪಂ ಇಒ ಆನಂದ್ ಅಭಿಪ್ರಾಯಪಟ್ಟರು.ನಗರದ ತಾ.ಪಂ. ಸಭಾಂಗಣದಲ್ಲಿ ಪಂಚಾಯತ್‌ರಾಜ್ ಇಲಾಖೆ, ಎನ್‌ಎಸ್‌ಐಆರ್‌ಡಿ, ಗ್ರಾಮ ಸ್ವರಾಜ್ ಅಭಿಯಾನ, ಜಿ.ಪಂ. ಮತ್ತು ತಾ.ಪಂ. ಜನಪರ ಫೌಂಡೇಷನ್ ಸಂಸ್ಥೆ ಒಗ್ಗೂಡಿ ಆಯೋಜಿಸಿದ್ದ ಕಾಯಕಬಂಧುಗಳ ತರಬೇತಿಯಲ್ಲಿ ಮಾತನಾಡಿ. ಬಸವಣ್ಣ ನವರು ಕಾಯಕವೇ ಕೈಲಾಸ ಎಂದಿದ್ದಾರೆ. ಅದರ ಅರ್ಥ ಎಲ್ಲರೂ ದುಡಿಯಬೇಕು, ಅದಕ್ಕೆ ತಕ್ಕ ಫಲ ಪಡೆಯಬೇಕು ಎಂದರು.
ಕಾಯಕ ಬಂಧುಗಳ ಕೆಲಸಕಾಯಕಬಂಧುಗಳು ತಮಗೆ ವಹಿಸಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಪ್ರತಿಯೊಂದು ಹಳ್ಳಿಯಲ್ಲಿಯೂ ಕಾಯಕಬಂದುಗಳು ಕೆಲಸ ಮಾಡುವುದರಿಂದ ದುಡಿಯುವ ಕೈಗಳಿಗೆ ಉದ್ಯೋಗ ಸಿಗುತ್ತದೆ. ಹಳ್ಳಿ ಹಳ್ಳಿಯಲ್ಲಿಯೂ ಸಾಮೂಹಿಕ ಆಸ್ತಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಎಫ್‌ಇಎಸ್‌ನ ಲೋಕೇಶ್ ಮಾತನಾಡಿ, ಉದ್ಯೋಗ ಖಾತ್ರಿ ಕಾಯ್ದೆಯು ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು, ಗ್ರಾಮೀಣ ಪ್ರದೇಶದ ಜನರಿಗೆ ತಾವು ವಾಸಿಸುವ ಕಡೆಯೇ ಕೆಲಸ ನೀಡುವ ಮೂಲಕ ದುರ್ಬಲ ವರ್ಗದ ಜನರಿಗೆ ಸಾಮಾಜಿಕ ರಕ್ಷಣೆ ನೀಡಬೇಕು ಎಂದರು.ಗ್ರಾಮ ಸ್ವರಾಜ್ ಅಭಿಯಾನ
ಜನಪರ ಫೌಂಡೇಷನ್‌ನ ಶಶಿರಾಜ್ ಹರತಲೆ ಮಾತನಾಡಿ, ಗ್ರಾಮ ಸ್ವರಾಜ್ ಅಭಿಯಾನ ಕರ್ನಾಟಕ ವತಿಯಿಂದ ನರೇಗಾವನ್ನು ಪುನಶ್ಚೇತನಗೊಳಿಸುವ ಸಲುವಾಗಿ ಸರ್ಕಾರದ ಜೊತೆಗೆ ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿರುವ ಸ್ವತಂತ್ರ ಅಭಿಯಾನವಾಗಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಜನಪರ ಫೌಂಡೇಷನ್ ಸಂಸ್ಥೆಯು ಈ ಅಭಿಯಾನದ ಸಹಭಾಗಿತ್ವ ವಹಿಸಿಕೊಂಡಿದೆ ಎಂದರು.ಈ ಸಂದರ್ಭದಲ್ಲಿ ತಾ.ಪಂ. ಸಹಾಯಕ ನಿರ್ದೇಶಕಿ ಕವಿತ, ತಾಲ್ಲೂಕು ಐಇಸಿ ಕೋ-ಆರ್ಡಿನೇಟರ್ ನವೀನ್, ತರಬೇತುದಾರರಾದ ಮಂಜುನಾಥ್, ಬಾಬುರೆಡ್ಡಿ, ನರಸಿಂಹಮೂರ್ತಿ, ಜ್ಯೋತಿ, ಶಾರದ ಉಪಸ್ಥಿತರಿದ್ದರು.