ಕನ್ನಡಪ್ರಭ ವಾರ್ತೆ ರಾಯಬಾಗ: ಒಪಿಎಸ್ ಕುರಿತು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಮುಂದೆ ಕೂಡ ಒತ್ತಾಯಿಸಿ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಅಲ್ಲದೇ, ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು.

ರಾಯಬಾಗ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಸೋಮವಾರ ಹನುಮಂತ ನಿರಾಣಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಅನುದಾನಿತ ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ಕಂಪ್ಯೂಟರ್, ಸ್ಕ್ಯಾನರ್ ಮತ್ತು ಪ್ರಿಂಟರ್ ವಿತರಿಸಿ ಮಾತನಾಡಿದರು. ಸುಮಾರು ವರ್ಷಗಳಿಂದ ಅನುದಾನ ಇಲ್ಲದ ಶಾಲೆಗಳಿಗೆ ಅನುದಾನಿತ ಶಾಲೆಗಳನ್ನಾಗಿ ಮಾಡಬೇಕು ಎಂದು ಶಿಕ್ಷಣ ಸಚಿವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಲಾಗುವುದು ಎಂದರು.ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಹನುಮಂತ ನಿರಾಣಿ ಸಾಮಾಜಿಕ ಕಾಳಜಿ ಹೊಂದಿದವರು. ಸಮಸ್ಯೆಗಳ ಕುರಿತು ನಿರಾಣಿ ಮೇಲ್ಮನೆಯಲ್ಲಿ ಧ್ವನಿ ಎತ್ತಿ ಪರಿಹಾರ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಇಂತಹ ಜನಪರ ವ್ಯಕ್ತಿಗೆ ಎಲ್ಲರ ಬೆಂಬಲ ಅವಶ್ಯಕತೆ ಇದೆ ಎಂದರು.ಈ ಸಂದರ್ಭದಲ್ಲಿ ಡಿಡಿಪಿಐ ಆರ್.ಸಿತಾರಾಮ, ಬಿಇಒ ಬಸವರಾಜಪ್ಪ, ಪೃಥ್ವಿರಾಜ್‌ ಜಾಧವ, ವಕೀಲ ಎಲ್.ಬಿ.ಚೌಗುಲೆ, ಬಸವರಾಜ ಯಲಶೆಟ್ಟಿ, ಎಸ್.ಎಸ್.ಮಠದ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಖೆಮಲಾಪೂರೆ, ವ್ಹಿ.ಎಸ್.ಪುಜೇರಿ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ, ರಾಮು ಗೋಂಗವಾಡ, ಬಸವರಾಜ ಕಾಂಬಳೆ, ಕರೇಪ್ಪ ನಾಯಿಕ ಸೇರಿ ಶಿಕ್ಷಕರು, ಶಿಕ್ಷಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಮುಂತಾದವರು ಇದ್ದರು. ಜಿನೇಂದ್ರ ನಿಲಜಗಿ ಸ್ವಾಗತಿಸಿ, ವಂದಿಸಿದರು.