ದಾಬಸ್‍ಪೇಟೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ, ಪಟ್ಟಣದ ವಿಕೇರ್ ಇಂಟರ್‍ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಪ್ರತಿಷ್ಠಿತ ಇಸ್ರೋ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶಾಲೆಯ ಸಂಸ್ಥಾಪಕ ಅಂಚೆಮನೆ ರಾಜಶೇಖರ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ತಮ್ಮ ಸೃಜನಶೀಲತೆ, ವೈಜ್ಞಾನಿಕ ಚಿಂತನೆ ಮತ್ತು ಅಂತರಿಕ್ಷ ವಿಜ್ಞಾನದ ಮೇಲಿನ ಆಸಕ್ತಿಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದ ಸ್ಪರ್ಧೆಯಲ್ಲಿ ಭಾಗವಹಿಸುವುದು ಅನೇಕ ಉದಯೋನ್ಮುಖ ವಿಜ್ಞಾನಿಗಳ ಕನಸಾಗಿದೆ. ನಮ್ಮ ವಿದ್ಯಾರ್ಥಿಗಳು ತಮ್ಮ ಚಂದ್ರಯಾನ -3 ಮಾದರಿಯನ್ನು ಆತ್ಮವಿಶ್ವಾಸದಿಂದ ವಿವರಿಸಿ ಅದರ ಉದ್ದೇಶಗಳು, ಚಂದ್ರನ ಮೇಲಿನ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಮತ್ತು ಭಾರತದ ಐತಿಹಾಸಿಕ ಸಾಧನೆಯ ಮಹತ್ವವನ್ನು ಸ್ಪಷ್ಟವಾಗಿ ತಿಳಿಸಿದರು ಎಂದು ಪ್ರಶಂಸಿದರು.

ಕಾರ್ಯದರ್ಶಿ ಸ್ವಣಾರ್ಂಬ ರಾಜಶೇಖರ್ ಮಾತನಾಡಿ, ಶಾಲೆಯ ಮಕ್ಕಳಿಗೆ ಈ ಅದ್ಭುತ ಅವಕಾಶ ನೀಡಿದ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದಗಳು. ಈ ಸ್ಪರ್ಧೆಯ ಮೂಲಕ ಮಕ್ಕಳಿಗೆ ಇಸ್ರೋ ಭಾಗವಾಗುವ ಅವಕಾಶ ಹಾಗೂ ಅವರು ಪ್ರೋತ್ಸಾಹ ನಮ್ಮ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ನಮ್ಮ ಭವಿಷ್ಯದ ವಿಜ್ಞಾನಿಗಳು ಇನ್ನೂ ಎತ್ತರಕ್ಕೆ ಹಾರಲು ಸಿದ್ದರಾಗಿದ್ದಾರೆ ಎಂದು ಹೇಳಿದರು. ಪೋಟೋ 5 :

ದಾಬಸ್‍ಪೇಟೆಯ ವಿಕೇರ್ ಇಂಟರ್‌ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಪ್ರತಿಷ್ಠಿತ ಇಸ್ರೋ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು.