ಬಾಗೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಕೆಂಪೇಗೌಡ ಅವಿರೋಧ ಆಯ್ಕೆ

KannadaprabhaNewsNetwork |  
Published : Oct 25, 2024, 12:58 AM IST
24ಎಚ್ಎಸ್ಎನ್14 : ಬಾಗೂರು ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪಿ. ದಾಸಪುರ ಗ್ರಾಮದ ಡಿ. ಎನ್. ಕೆಂಪೇಗೌಡ ಅವಿರೋಧವಾಗಿ ಆಯ್ಕೆಗೊಂಡರು. | Kannada Prabha

ಸಾರಾಂಶ

ಬಾಗೂರು ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪಿ. ದಾಸಪುರ ಗ್ರಾಮದ ಡಿ. ಎನ್. ಕೆಂಪೇಗೌಡ ಅವಿರೋಧವಾಗಿ ಆಯ್ಕೆಗೊಂಡರು. ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಪಿ. ಲಕ್ಷ್ಮಣ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಡಿಎನ್ ಕೆಂಪೇಗೌಡ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪಿ. ದಾಸಪುರ ಗ್ರಾಮದ ಡಿ. ಎನ್. ಕೆಂಪೇಗೌಡ ಅವಿರೋಧವಾಗಿ ಆಯ್ಕೆಗೊಂಡರು.

ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಪಿ. ಲಕ್ಷ್ಮಣ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಡಿಎನ್ ಕೆಂಪೇಗೌಡ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಿ. ಎನ್. ಕೆಂಪೇಗೌಡ ಮಾತನಾಡಿ, ಹೋಬಳಿ ಕೇಂದ್ರ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಉತ್ತಮ ಬೀದಿದೀಪದ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ತಮ್ಮ ಅಧಿಕಾರ ಅವಧಿಯಲ್ಲಿ ಹೆಚ್ಚು ಆದ್ಯತೆ ಕೊಡುವುದರ ಜೊತೆಗೆ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣರವರ ಹೆಚ್ಚಿನ ಸಹಕಾರ ಪಡೆದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ತರುವುದಾಗಿ ಭರವಸೆ ನೀಡಿದರು. ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವರಲಕ್ಷ್ಮಿ ಕಾಂತರಾಜ್, ಕೃಷಿ ಪತ್ತಿನ ನಿರ್ದೇಶಕ ಬಾಗೂರು ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅನುಸೂಯ ಚಂದ್ರೇಗೌಡ, ರೂಪ ರಘು, ಶಂಕರ್, ಬೈರೇಗೌಡ, ರೇಣುಕಾ, ವೆಂಕಟೇಶ್, ಸಾಕಮ್ಮ ಬಸವಲಿಂಗ, ಪೂರ್ಣಿಮಾ, ರಂಗಸ್ವಾಮಿ, ಸುಮಿತ್ರ ಮಂಜೇಗೌಡ, ಶಕುಂತಲಾ, ಅಣ್ಣೇಗೌಡ, ಮುಖಂಡರುಗಳಾದ ಓಬಳಾಪುರ ಬಸವರಾಜ್, ಸ್ಟುಡಿಯೋ ರಘು, ಚಂದ್ರೇಗೌಡ, ಮನು, ಮಲ್ಲೇಶ್, ಯುವ ಮುಖಂಡ ಪಿ ದಾಸಪುರ ಧರಣಿ ಕುಮಾರ್, ಇಂದ್ರೇಶ್, ತೋಟಿ ನಾಗರಾಜ್, ವಿಠಲ ಕುಮಾರ, ಕೆ ಪಿ ಕುಮಾರ್, ಹರೀಶ್, ಒಂಟಿ ಮಾವಿನಹಳ್ಳಿ ಜಯರಾಮ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಪೆಟ್ರೋಲ್ ಬಂಕ್ ಸ್ವಾಮಣ್ಣ, ಪಿಡಿಒ ರಮೇಶ್, ಕಾರ್ಯದರ್ಶಿ ರಾಣಿ, ಬಿಲ್ ಕಲೆಕ್ಟರ್ ನವೀನ್ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ