ಕುವೆಂಪು ಕೃತಿಗಳು ಮೌಲ್ಯಗಳ ಆಗರ

KannadaprabhaNewsNetwork |  
Published : Dec 31, 2025, 01:15 AM IST
೩೦ಕೆಎಲ್‌ಆರ್-೬ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಎಡಿಸಿ ಎಸ್.ಎಂ.ಮಂಗಳ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುವೆಂಪು ಅ‍ವರ ಕವಿತೆಗಳಲ್ಲಿ ಪ್ರಮುಖವಾಗಿ ನೋಡುವುದಾರೆ, ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ, ಮತಿಯಿಂದ ದುಡಿಯಿರಿ ಲೋಕದ ಹಿತಕ್ಕೆ ಎನ್ನುವ ಕವಿತೆ ಸಾಲುಗಳು ಇಂದಿನ ಕಲುಷಿತ ಸಮಾಜಕ್ಕೆ ಹೇಳಿ ಮಾಡಿಸಿದಂತಿದೆ. ಇಂತಹ ಅನೇಕ ಕವಿತೆಗಳನ್ನು ಕುವೆಂಪು ರಚಿಸಿದ್ದಾರೆ. ಅವರ ಕವಿತೆಗಳನ್ನು ಜೀವನ ಅಳವಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೋಲಾರನಾವೆಲ್ಲರೂ ಸರ್ವ ಜನಾಂಗದ ಶಾಂತಿ ತೋಟ ಕಟ್ಟುವ ದಿಕ್ಕಿನಡೆಗೆ ನಡೆದರೆ, ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಎಡಿಸಿ ಎಸ್.ಎಂ.ಮಂಗಳ ಅಭಿಪ್ರಾಯಪಟ್ಟರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಬಾಲ್ಯದಿಂದ ಒಬ್ಬ ಕವಿಯಾಗಿ ಬೆಳೆದು ಬಂದರು. ಅವರ ಕವಿತೆಗಳಲ್ಲಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಬೇಕೆಂಬ ಸಂದೇಶವಿದೆ ಎಂದರು.

ಕವಿತೆ ಅರ್ಥಮಾಡಿಕೊಳ್ಳಬೇಕು

ಕುವೆಂಪು ಅ‍ವರ ಕವಿತೆಗಳಲ್ಲಿ ಪ್ರಮುಖವಾಗಿ ನೋಡುವುದಾರೆ, ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ, ಮತಿಯಿಂದ ದುಡಿಯಿರಿ ಲೋಕದ ಹಿತಕ್ಕೆ ಎನ್ನುವ ಕವಿತೆ ಸಾಲುಗಳು ಇಂದಿನ ಕಲುಷಿತ ಸಮಾಜಕ್ಕೆ ಹೇಳಿ ಮಾಡಿಸಿದಂತಿದೆ. ಇಂತಹ ಅನೇಕ ಕವಿತೆಗಳನ್ನು ಕುವೆಂಪು ರಚಿಸಿದ್ದಾರೆ. ಅವರ ಕವಿತೆಗಳನ್ನು ಜೀವನ ಅಳವಡಿಸಿಕೊಂಡರೆ ನಿಜವಾಗಿ ದೇಶ ಸರ್ವಜನಾಂಗದ ಶಾಂತಿ ತೋಟವಾಗುತ್ತದೆ ಎಂದು ತಿಳಿಸಿದರು.

ಕುವೆಂಪು ಕವಿತೆ, ನಾಟಕಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ತಮ್ಮ ಸಾಹಿತ್ಯ ಕೃಷಿಯಲ್ಲಿ ಸರ್ವ ಜನಾಂಗದವರು, ಒಂದೇ ಎಂಬಂತೆ ಜೀವಿಸಬೇಕು ಎಂಬ ಆಸೆಯ ಹೊಂದಿದ್ದರು ಎನ್ನುವದಕ್ಕೆ ಓ ನನ್ನ ಚೇತನ, ಹಾಗೂ ನೀ ಅನಿಕೇತನ ಕವಿತೆ ಸಾಕ್ಷಿ ಎಂದರು.ಕನ್ನಡಕ್ಕೆ ಕಿರೀಟ ಇದ್ದಂತೆ

ಕುವೆಂಪು ಕನ್ನಡಕ್ಕೆ ಕಿರೀಟ ಇದ್ದಂತೆ. ಅವರು ರಚಿಸಿದ ಹಲವಾರು ಕೃತಿಗಳು ಇಂದು ಆದರ್ಶ ಮೌಲ್ಯಗಳನ್ನು ಹೊಂದಿವೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಯಾರು ಮಾಡದಂತ ಸಾಧನೆ ಮಾಡಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಅವಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮುಜರಾಯಿ ತಹಸೀಲ್ದಾರ್ ಶ್ರೀನಿವಾಸರೆಡ್ಡಿ, ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬೀಸಪ್ಪಗೌಡ, ಜಿಲ್ಲಾಧ್ಯಕ್ಷ ಕೆ.ವಿ.ಶಂಕರಪ್ಪ, ನಿರ್ದೇಶಕ ಡಿ.ಕೆ.ರಮೇಶ್, ಮುಖಂಡರಾದ ನಾರಾಯಣಸ್ವಾಮಿ, ರಮೇಶ್, ಲೋಕೇಶ್, ಕೃ?ಗೌಡ, ಹನೀಫ್, ವರಲಕ್ಷ್ಮಿ ಕುವೆಂಪು ಕುರಿತು ಉಪನ್ಯಾಸ ನೀಡಿದರು. ಟಿ.ವಿ.ರಾಮಸ್ವಾಮಿ ನಿರ್ದೇಶನದಲ್ಲಿ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ಯಾಕುಮಾರಿಗೆ ಸುರೇಶ್‌ ಕುಮಾರ! ಸೈ‘ಕ್ಲಿಂಗ್‌’!
ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು