ಕನ್ನಡಪ್ರಭ ವಾರ್ತೆ ಬೀದರ್
ಎಜುಕೇಟ್ ಎ ಚೈಲ್ಡ್, ಎಂಪವರ್ ಎ ಫ್ಯೂಚರ್ ಎಂಬ ಉದಾತ್ತ ಧ್ಯೇಯದೊಂದಿಗೆ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಸಲುವಾಗಿ ರೋಟರಿ ಕ್ಲಬ್ ಆಫ್ ಸಿಲ್ವರ್ ಸ್ಟಾರ್ ವತಿಯಿಂದ ಜ.8 ರಿಂದ 11ವರೆಗೆ ಆಯೋಜಿ ಸಲಾದ ರೋಟರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಕಲ್ಯಾಣ್ ಜೋನ್ 2.0 ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಆದಿಶ್ ವಾಲಿ ಮತ್ತು ತಂಡದ ಶ್ರಮವನ್ನು ಕೊಂಡಾಡಿದರು,
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಇಲ್ಲಿನ ಪಂದ್ಯಾವಳಿಗಳು ಯಾವುದೇ ಐಪಿಎಲ್ ಪಂದ್ಯಗಳಿಗೂ ಕಡಿಮೆ ಇರಲಿಲ್ಲ. ಎಂಟು ತಂಡಗಳು ಯಾವುದೇ ಸ್ವಾರ್ಥವಿಲ್ಲದೆ ಅತ್ಯಂತ ಉತ್ಸಾಹದಿಂದ ಆಡಿವೆ ಎಂದರು.ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್ ಮಾತನಾಡಿ, ಕೇವಲ 10 ನಿಮಿಷ ಪಂದ್ಯ ವೀಕ್ಷಿಸಲು ಬಂದ ನಾನು, ಇಲ್ಲಿನ ರೋಚಕತೆ ಮತ್ತು ಸಂಭ್ರಮ ಕಂಡು ಎರಡು ಗಂಟೆಗಳ ಕಾಲ ಇಲ್ಲೇ ಉಳಿಯುವಂತಾಯಿತು ಎಂದರು.
ಕ್ಲಬ್ ಅಧ್ಯಕ್ಷ ಆದೀಶ್ ಆರ್. ವಾಲಿ ಮಾತನಾಡಿ, ಎಲ್ಲರ ಸಹಕಾರ, ಅಟಗಾರರು, ತಂಡದ ಮಾಲೀಕರು, ಪ್ರಾಯೋಜಕರು, ಬೆಂಬಲಿಗರು ಸೇರಿದಂತೆ ವಿವಿಧ ವಿಭಾಗಗಳಿಂದ ಬೆಂಬಲ ಮತ್ತು ಸಹಕಾರದಿಂದ ಈ ಲೀಗ್ ಸಾಧ್ಯವಾಗಿದೆ. ನಿಮ್ಮ ಸಹಕಾರ ಇದ್ದರೆ ಮತ್ತೆ ದೊಡ್ಡ ಮಟ್ಟದಲ್ಲಿ ಲೀಗ್ ಅಯೋಜನೆ ಮಾಡೋಣ ಎಂದರು.ಕ್ಲಬ್ ಕಾರ್ಯದರ್ಶಿ ಕಿರಣ್ ಸ್ಯಾಮುವೆಲ್ ಮಾತನಾಡಿ, ವಿವಿಧ ಪ್ರಾಯೋಜಕರ ಹಾಗೂ ಅಟಗಾರರ ಮತ್ತು ತಂಡದ ಮಾಲೀ ಕರ ಸಹಕಾರದೊಂದಿಗೆ ಬಡಮಕ್ಕಳ ವಿದ್ಯಾನಿಧಿಗಾಗಿ ಸುಮಾರು 25 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದ್ದು, ನಮ್ಮ ತಂಡದ ಒಗ್ಗಟ್ಟಿನ ಕಾರ್ಯದಿಂದ ಅದ್ಭುತ ಲೀಗ್ ಅಯೋಜನೆ ಯಶ್ವಸಿಯಾಗಿದೆ ಎಂದರು.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ (ಕೆಎಸ್ ಸಿಎ) ರಾಯಚೂರು ವಿಭಾಗದ ಸಂಚಾಲಕರಾದ ಕುಶಲ್ ಪಾಟೀಲ್ ಗಾದಗಿ ಮಾತನಾಡಿ, ನಮ್ಮ ಭಾಗದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಅವರು, ಲೀಗ್‌ನಲ್ಲಿ ವಿಶೇಷ ಪ್ರಶಸ್ತಿ ಗೆದ್ದ ಆಟಗಾರರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು.
ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಿರ್ಮಾಣ ನಿಂಜಾಸ್ 12 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಬಾರಿಸಿದರು. ಗುರಿಯನ್ನು ಬೆನ್ನೆಟಿದ ರಾಯಲ್ ಚಾಲೆಂಜರ್ಸ್ ಬೀದರ್ ತಂಡವು 5 ವಿಕೆಟ್‌ಗಳ ನಷ್ಟ ದೊಂದಿಗೆ 11.4 ಓವರ್‌ಗಳಲ್ಲಿ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಭವೇಶ್ ಪಟೇಲ್ ಅವರ ಅದ್ಭುತ ಆಲ್ರೌಂಡರ್ ಪ್ರದರ್ಶನ ಮತ್ತು ದತ್ತಾತ್ರೇಯ ಪಾಟೀಲ್ ಅವರ ಶಿಸ್ತುಬದ್ಧ ಬೌಲಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಈ ಸಂದರ್ಭದಲ್ಲಿ ಕಲ್ಯಾಣ ವಲಯದ ಗವರ್ನರ್ ಹಾವಶೆಟ್ಟಿ, ಪತ್ರಕರ್ತರಾದ ಶಿವಶರಣಪ್ಪ ವಾಲಿ, ಬಿವಿಬಿ ಕ್ಯಾಂಪನ್ ಸಂಚಾಲಕರಾದ ರಜನೀಶ ವಾಲಿ, ಕ್ಲಬ್ ಸಲಹೆಗಾರ ಬಸವರಾಜ್ ಧನ್ನೂರ್, ಲೀಗ್ ನ ಪ್ರೊಜೆಕ್ಟ್ ಡೈರೆಕ್ಟರ್ ಹಾಗೂ ಕ್ಲಬ್ ಉಪಾಧ್ಯಕ್ಷ ಅನಂದ ಕೋಟ್ಟರ್ಕಿ, ಜಂಟಿ ಕಾರ್ಯದರ್ಶಿ ಹಾಗೂ ಕೋ-ಆರ್ಡಿನೇಟರ್ ಭಾವೇಶ ಪಾಟೀಲ್, ಲೀಗ್ ನ ಯೋಜನಾ ನಿರ್ದೇಶಕಿ ಸ್ಫೂರ್ತಿ ಧನ್ನೂರ್, ಕ್ಲಬ್ ಖಜಾಂಚಿ ಅಂಬರೇಶ ಅಂಬೇಸಾಗೆ, ಅಭಿಷೇಕ ಪೋಲಾ, ಮತ್ತಿತರರು ಇದ್ದರು.