ಒಳಕಾಡು ಶಾಲೆಯಲ್ಲಿ ‘ಕಲಿಕಾ ಹಬ್ಬ’ ಸಂಭ್ರಮ

KannadaprabhaNewsNetwork |  
Published : Feb 27, 2025, 12:33 AM IST
ಹಬ್ಬ | Kannada Prabha

ಸಾರಾಂಶ

ಒಳಕಾಡು ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬವನ್ನು ಇಲ್ಲಿನ ಒಳಕಾಡಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಲಂದ ಸಭಾಭವನದಲ್ಲಿ ನಡೆಸಲಾಯಿತು. ಸಾಂಕೇತಿಕವಾಗಿ ದೀಪ ಬೆಳಗಿಸಿ ನಂತರ ‘ಕಲಿಕಾ ಹಬ್ಬ’ ಎಂಬ ಕಿರೀಟವನ್ನು ಮಕ್ಕಳಿಗೆ ತೊಡಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಶಿಕ್ಷಣ ಇಲಾಖೆಯ ಆದೇಶದಂತೆ ಒಳಕಾಡು ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬವನ್ನು ಇಲ್ಲಿನ ಒಳಕಾಡಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಲಂದ ಸಭಾಭವನದಲ್ಲಿ ನಡೆಸಲಾಯಿತು.

ಸಾಂಕೇತಿಕವಾಗಿ ದೀಪ ಬೆಳಗಿಸಿ ನಂತರ ‘ಕಲಿಕಾ ಹಬ್ಬ’ ಎಂಬ ಕಿರೀಟವನ್ನು ಮಕ್ಕಳಿಗೆ ತೊಡಿಸಿ ‘ಒಗಟು ಹೊಂದಿರುವ ಕಾರ್ಡಿನ ಹಾರ’ವನ್ನು ಹಾಕಿ ವಿಶಿಷ್ಟವಾಗಿ ಸ್ಥಳೀಯ ನಗರಸಭಾ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉದ್ಘಾಟಿಸಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಡಾ. ವಿರೂಪಾಕ್ಷ ಅಧ್ಯಕ್ಷತೆ ವಹಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಕ್ಲಸ್ಟರ್ ಸಿಆರ್‌ಪಿ ರಂಜಿತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿಪೂರ್ಣಿಮಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಕುಸುಮ, ಪ್ರಾಥಮಿಕ ಶಿಕ್ಷಕ ಸಂಘದ ಕಾರ್ಯದರ್ಶಿವಿನಯ, ಎಲ್ಲಾ ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಬೇರೆ ಶಾಲೆಗಳಿಂದ ಆಗಮಿಸಿದ ಸಂಪನ್ಮೂಲ ಶಿಕ್ಷಕರು, ಪೋಷಕರು, ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಒಟ್ಟು ಏಳು ಚಟುವಟಿಕೆಗಳನ್ನು ಬೇರೆ ಬೇರೆ ಕೊಠಡಿಗಳಲ್ಲಿ ವ್ಯವಸ್ಥೆಗೊಳಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಆಯ್ಕೆ ಮಾಡಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು.

ಅತಿಥಿಗಳಾಗಿ ಶಿಕ್ಷಣ ಸಂಯೋಜಕಿ ಸುಮಾ, ಬಿ.ಆರ್.ಪಿ. ಜಯಶೀಲ ರೋಟೆ ಭಾಗವಹಿಸಿದ್ದರು. ಶಾಲೆಯ ಶಿಕ್ಷಕಿಯರಾದ ಮಾಲಿನಿ ಭಟ್ ಮತ್ತು ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಂತ ಹಾಗೂ ವಿನಯ ಧನ್ಯವಾದ ಸಮರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಸಿದ್ದುಗೆ ಇದು ಕೊನೆ ಅಧಿವೇಶನ: ವಿಜಯೇಂದ್ರ
ಬಿವೈವಿ ಕಲೆಕ್ಷನ್‌ ಕಿಂಗ್‌, ಕಲೆಕ್ಷನ್‌ ಬಿಚ್ಚಿಡ್ಲಾ? : ಡಿಕೆ