ಲಯನ್ಸ್‌ ಕ್ಲಬ್‌ ಸಮಾಜಮುಖಿ ಕಾರ್ಯ ರೂಪಿಸಲಿ

KannadaprabhaNewsNetwork |  
Published : Jul 24, 2024, 01:18 AM IST
ನರಸಿಂಹರಾಜಪುರ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದವಿ ಸ್ಪೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಲಯನ್ಸ್‌ ಕ್ಲಬ್ ಜಿಲ್ಲಾ 317-ಡಿ  ದ್ವಿತೀಯ ಉಪ ರಾಜ್ಯಪಾಲ ಎಚ್‌.ಎಂ.ತಾರಾನಾಥ್ ಅಧಿಕಾರ ಹಸ್ತಾಂತರ ಮಾಡಿಸಿದರು. | Kannada Prabha

ಸಾರಾಂಶ

ನೂತನ ಪದಾಧಿಕಾರಿಗಳಿಗೆ ಉಪ ರಾಜ್ಯಪಾಲ ತಾರಾನಾಥ ಪ್ರಮಾಣ ವಚನ ಬೋಧನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಇಲ್ಲಿನ ಲಯನ್ಸ್ ಕ್ಲಬ್ ಸ್ವಂತ ಕಟ್ಟಡ ಕಟ್ಟಲು ಪ್ರಾರಂಭಿಸಿರುವುದು ಸಂತಸದ ವಿಷಯವಾಗಿದೆ ಎಂದು ಲಯನ್ಸ್‌ ಕ್ಲಬ್‌ ನ ಜಿಲ್ಲಾ 317-ಡಿ ದ್ವಿತೀಯ ಉಪ ರಾಜ್ಯಪಾಲ ಎಚ್‌.ಎಂ.ತಾರಾನಾಥ್‌ ತಿಳಿಸಿದರು.

ಸೋಮವಾರ ರಾತ್ರಿ ಸಿಂಸೆಯ ಕನ್ಯಕುಮಾರಿ ಕಂಪರ್ಟ್ ಹಾಲ್‌ನಲ್ಲಿ ನಡೆದ ಲಯನ್ಸ್‌ ಕ್ಲಬ್‌ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಕೆ.ಟಿ.ಎಲ್ದೋ ಹಾಗೂ ಖಜಾಂಚಿ ಈಶ್ವರಾಚಾರ್ ಅವರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ಲಯನ್ಸ್‌ ಕ್ಲಬ್‌ ಬಡವರಿಗೆ ಅನುಕೂಲವಾಗುವ ಸಮಾಜ ಮುಖಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಯಾವುದೇ ಸಂಸ್ಥೆ ಸದೃಢವಾಗಿರಬೇಕಾದರೆ ಆರ್ಥಿಕವಾಗಿಯೂ ಸದೃಢವಾಗಿರುವುದು ಅವಶ್ಯಕ ಎಂದರು.

ಲಯನ್ಸ್‌ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಎಂ.ಬಿ.ಗೋಪಾಕಲ್‌ ಗೌಡ ಮಾತನಾಡಿ, ಹಿರಿಯ ಅಧ್ಯಕ್ಷರು, ಸದಸ್ಯರು ನೂತನ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು. ಆಗ ಸಂಸ್ಥೆ ಇನ್ನೂ ಉತ್ತಮ ಕಾರ್ಯಮಾಡಲು ಸಾದ್ಯವಾಗುತ್ತದೆ ಎಂದರು.

ಈ ವೇಳೆ ನಿರ್ಗಮಿತ ಅಧ್ಯಕ್ಷ ರವಿಚಂದ್ರ ಮಾತನಾಡಿದರು. ಸಭೆಯಲ್ಲಿ ಲಯನ್ಸ್‌ ಕ್ಲಬ್‌ನ ವಲಯ 3ರ ಅಧ್ಯಕ್ಷ ಕೆ.ಆರ್‌.ಗೋಪಾಲಗೌಡ, ಬಾಳೆಹೊನ್ನೂರು ಲಯನ್ಸ್‌ ಕ್ಲಬ್ ಅಧ್ಯಕ್ಷ ಶ್ರೀನಿವಾಸ್‌, ಶೃಂಗೇರಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಧರ್ಮಪ್ಪ ಹೆಗ್ಡೆ, ಎನ್‌.ಎರ್‌.ಪುರ ಲಯನ್ಸ್‌ ಕ್ಲಬ್‌ ನೂತನ ಕಾರ್ಯದರ್ಶಿ ಕೆ.ಟಿ.ಎಲ್ದೋ, ಖಜಾಂಚಿ ಈಶ್ವರಾಚಾರ್‌,ಲಯನ್ಸ್ ಕ್ಲಬ್‌ ವಲಯ 2ರ ಅಧ್ಯಕ್ಷ ಸಂದೇಶ ಹೆಗ್ಡೆ, ಅಂಬಿಕ ರವಿಚಂದ್ರ, ಪುಷ್ಪ ರವಿಕುಮಾರ್, ದಕ್ಷಿಣಾಮೂರ್ತಿ, ಸಿಜು ಇದ್ದರು.

ಇದೇ ಸಂದರ್ಭದಲ್ಲಿ ಉಪ ರಾಜ್ಯಪಾಲ ಎಚ್‌.ಎಂ.ತಾರಾನಾಥ್‌ ಅವರನ್ನು ಅಭಿನಂದಿಸಲಾಯಿತು. ದಾನಿಗಳಾದ ಡಿ.ರಮೇಶ್ ಅವರು ಕೊಪ್ಪ ತಾಲೂಕಿನ ಹಿರೇಕೊಡಿಗೆ ಲಾಲ್ ಬಹುದ್ದೂರ್ ಪ್ರೌಢ ಶಾಲೆಗೆ ನೀಡಿದ ಶಾಲಾ ಪರಿಕರಣಗಳನ್ನು ವಿತರಿಸಲಾಯಿತು. ಕುದುರೆಗುಂಡಿಯ ಇತಿಹಾಸ್‌ ಖಾಂಡ್ಯ ಹಾಗೂ ಲಯನ್ಸ್ ಕಟ್ಟಡ ಕಟ್ಟಲು ಕಾರಣರಾದ ನಿರ್ಗಮಿತ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಕೃಷ್ಣಯ್ಯ ಆಚಾರ್‌, ಖಜಾಂಚಿ ಜಾನಕೀ ರಾಂ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ