ವಚನಗಳು ಸಾರ್ವಕಾಲಿಕ ಸತ್ಯ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಹರ ಮುನಿದರೆ ಗುರು ಕಾಯುವನು ಎಂಬಂತೆ ನಾವೆಲ್ಲರು ಬಸವ ತತ್ವಗಳನ್ನು ಪ್ರತಿ ಮನೆ ಮನೆಗಳಿಗೆ ರವಾನಿಸುವದರಿಂದ ಜಗತ್ತಿನಲ್ಲಿ ನಡೆಯುತ್ತಿರುವ ಅಂಧಕಾರಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾಶರಣ ಶರಣಿಯರು ನೀಡಿದ ವಚನಗಳು ಸಾರ್ವಕಾಲಿಕ ಸತ್ಯ. ವಚನಗಳ ಸಾರವನ್ನು ಅರ್ಥೈಸಿಕೊಂಡು ಬದುಕಿದರೆ ಜೀವನ ಸಾರ್ಥಕ ಎಂದು ಪಂಚಮಸಾಲಿ ಸಮಾಜದ ಮುಖಂಡ ಎಂ.ಎಂ. ಹಂಗರಗಿ ಹೇಳಿದರು.

ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಆವರಣದಲ್ಲಿ ಐಕ್ಯ ಮಂಟಪದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಹರ ಮುನಿದರೆ ಗುರು ಕಾಯುವನು ಎಂಬಂತೆ ನಾವೆಲ್ಲರು ಬಸವ ತತ್ವಗಳನ್ನು ಪ್ರತಿ ಮನೆ ಮನೆಗಳಿಗೆ ರವಾನಿಸುವದರಿಂದ ಜಗತ್ತಿನಲ್ಲಿ ನಡೆಯುತ್ತಿರುವ ಅಂಧಕಾರಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಬಸವದಳದ ಮಾಜಿ ಅಧ್ಯಕ್ಷ ಗುರುಪಾದ ತಾರಾಪುರ ಮಾತನಾಡಿ, ಹಿಂದು ಎನ್ನುವುದು ಧರ್ಮವಲ್ಲ. ಲಿಂಗಾಯತ ಎನ್ನುವುದು ಧರ್ಮವಾಗಿದೆ. ಲಿಂಗ ಧರಿಸಿದವರೇ ಲಿಂಗಾಯತರು. ಈ ಪದಕ್ಕೆ ಯಾವುದೇ ಜಾತಿ ನಿರ್ಬಂಧವಿಲ್ಲ. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರರು ಮಹಾಮಂಟಪ ನಿರ್ಮಾಣ ಮಾಡಿ ಸಮಾನತೆ ಸಂದೇಶ ನೀಡಿದ್ದಾರೆ. ಅದಕ್ಕೆ ಬಸವ ತತ್ವಗಳ ಪ್ರಚಾರದ ಕೊರತೆಯಿಂದ ಜಗತ್ತಿನಲ್ಲಿ ಮೌಢ್ಯತೆ ಹೆಚ್ಚಾಗುತ್ತಿದ್ದು, ಅದನ್ನು ಅಳಿಸಬೇಕಾದರೆ ಬಸವಣ್ಣನವರ ಸಂದೇಶಗಳು ಪ್ರತಿ ಮನೆಗಳಿಗೆ ಮುಟ್ಟಬೇಕು ಅಂದಾಗ ಮಾತ್ರ ಜಗತ್ತಿನ ಅಂಧಕಾರ ಅಳಿಸಲು ಸಾಧ್ಯ ಎಂದರು.

ಲಿಂಗಾಯತ ಮಹಾಮಠದ ಪೀಠಾಧಿಪತಿ ಪ್ರಭು ದೇವರು ಆಶಿರ್ವಚನ ನೀಡಿ, ದಾನ-ಜ್ಞಾನ ಒಬ್ಬರಲ್ಲಿ ಇರುವುದು ವಿರಳ. ಇವೆರಡು ಸಮರ್ಥವಿದ್ದವರು ಮಹಾಶರಣ ತತ್ವ ಪ್ರಚಾರಕರಲ್ಲಿ ಮಾತ್ರ ಇರುತ್ತದೆ ಅಂತವರ ಸಾಲಲ್ಲಿ ತಡವಲಗಾದ ಗುತ್ತಿಗೆದಾರರಲ್ಲಿ ಇದೆ ಎಂದರು.

ಉದ್ಯಮಿ ಚಂದ್ರಶೇಖರ ರೂಗಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಡವಲಗಾ ಗ್ರಾಮದ ಮರುಳಸಿದ್ದ ಸಂಸ್ಥಾನದ ಚೇರಮನ್ ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ, ಮಾಜಿ ಸೈನಿಕ ಚಂದ್ರಕಾಂತ ಸಣ್ಣಮನಿ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ನಿವೃತ್ತ ಶಿಕ್ಷಕ ಆರ್‌.ಕೆ.ಕುಲಕರ್ಣಿ, ಸಂಗಣ್ಣ ಬ್ಯಾಕೋಡ, ಸಿದ್ದು ಸುಂಠಿ ಕೊರಳ್ಳಿ, ನಾಗೂ ಬಿರಾದಾರ, ಶಿವಣ್ಣ ಖಜೂರ್ಗಿ, ಅಣ್ಣು ಮದರಿ, ಎಂ.ಎಸ್.ಬಿರಾದಾರ ನಾಗರಳ್ಳಿ, ಆನಂದ ಶಾಬಾದಿ, ಪಂಡಿತ ಯಂಪೂರೆ, ಶಾಂತೂ ರಾಣಾಗೋಳ ಇದ್ದರು. ಎಂ.ಜಿ.ತಳವಾರ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ಶಿವಶಿಂಪಿ ವಂದಿಸಿದರು.

Share this article