ಜಿಲ್ಲೆಯಾದ್ಯಂತ ಸಂಭ್ರಮದ ಎಳ್ಳ ಅಮಾವಾಸ್ಯೆ ಆಚರಣೆ

KannadaprabhaNewsNetwork |  
Published : Jan 12, 2024, 01:45 AM IST
ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದ ರೈತರಾದ ರಾಮಣ್ಣ ರಂಗಪ್ಪ ಕಾಶಪ್ಪನವರ ಅವರ ಹೊಲದಲ್ಲಿ ಎಳ್ಳ ಅಮಾವಾಸ್ಯೆಯನ್ನು ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಆಚರಿಸಲಾಯಿತು. | Kannada Prabha

ಸಾರಾಂಶ

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಬರಗಾಲ ಆವರಿಸಿ ರೈತರು ಸಂಕಷ್ಟದಲ್ಲಿದ್ದರೂ ಸಂಪ್ರದಾಯದಂತೆ ಗುರುವಾರ ಎಳ್ಳ ಅಮಾವಾಸ್ಯೆಯನ್ನು ಕೊಂಚ ಉತ್ಸಾಹದಿಂದಲೇ ಆಚರಿಸಿದರು.

ಗದಗ: ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಬರಗಾಲ ಆವರಿಸಿ ರೈತರು ಸಂಕಷ್ಟದಲ್ಲಿದ್ದರೂ ಸಂಪ್ರದಾಯದಂತೆ ಗುರುವಾರ ಎಳ್ಳ ಅಮಾವಾಸ್ಯೆಯನ್ನು ಕೊಂಚ ಉತ್ಸಾಹದಿಂದಲೇ ಆಚರಿಸಿದರು.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ದೂರ ದೂರದ ಪಟ್ಟಣಗಳಲ್ಲಿರುವ ಜನರು ಎಳ್ಳ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮರಳಿ ತಮ್ಮ ತಮ್ಮ ಗ್ರಾಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಹೊಲಕ್ಕೆ ತೆರಳಿ ಭೂಮಿ ತಾಯಿಯ ಒಡಲಿನಲ್ಲಿ ಹಸಿರಾದ ಪೈರನ್ನು ತುಂಬಿಕೊಂಡು ಕಂಗೊಳಿಸಿದ್ದು, ಆ ತಾಯಿಗೆ ಪೂಜೆ ಸಲ್ಲಿಸಿ ಉತ್ತಮವಾದ ಫಸಲು ರೈತನ ಕೈ ಸೇರಿ ರೈತರ ಬಾಳು ಬಂಗಾರ ಮಾಡು ಎಂದು ರೈತ ಸಮುದಾಯ ಭೂಮಿ ತಾಯಿಯನ್ನು ಪೂಜಿಸಿ ಬೇಡಿಕೊಂಡರು.

ಎಳ್ಳ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ಮಹಿಳೆಯರು ಪುಂಡಿ ಪಲ್ಯ, ಕುಚ್ಚಿದ ಮೆಣಸಿನಕಾಯಿ, ಜೋಳದ ಕಡಬು, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ, ಕಡಬು, ಕರಿಗಡಬು, ಶೇಂಗಾ ಚಟ್ನಿ, ಮೊಸರು, ತುಪ್ಪ, ಗುರೆಳ್ಳ ಚಟ್ನಿ ಮುಂತಾದ ವಿಶೇಷ ಖಾದ್ಯಗಳನ್ನು ತಯಾರಿಸಿ ಅಕ್ಕ-ತಂಗಿಯರನ್ನು, ಮಕ್ಕಳನ್ನು, ಬಂಧು ಬಳಗವನ್ನು ಸ್ನೇಹಿತರನ್ನು ಕರೆಯಿಸಿ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ, ಕಾರು, ಟಾಟಾ ಎಸಿ, ಬೈಕ್ ಇನ್ನೂ ಅನೇಕ ವಾಹನಗಳ ಮೂಲಕ ತಮ್ಮ ತಮ್ಮ ಹೊಲಗಳಿಗೆ ತೆರಳಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಭೂತಾಯಿ ಮಡಿಲಲ್ಲಿ ಮನೆ ಮಂದಿಯೆಲ್ಲಾ ಕುಳಿತು ಊಟ ಮಾಡಿ ಸಂಭ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ.1ರಿಂದ ಸೇವೆ ಬಂದ್‌ ಸರ್ಕಾರಿ ವೈದ್ಯರಿಂದ ಎಚ್ಚರಿಕೆ
ಚರಿತ್ರೆ ತಿಳಿದಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ: ಸಿಎಂ