ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಕೃಷ್ಣ ಮಂದಿರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ. ಕೃಷ್ಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟೇ ಸಂಕಷ್ಟಗಳು ಎದುರಾದರೂ ಅವುಗಳನ್ನು ನಿಭಾಯಿಸಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.
ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಹಾಗೂ ಉತ್ತಮ ಸ್ಥಾನಕ್ಕೆ ಏರಬೇಕಾದರೆ ನಿಷ್ಕಲ್ಮಷ ಮನಸ್ಸು ಇದ್ದರೆ ಮಾತ್ರ ಎಂಬುದಕ್ಜೆ ಉತ್ತಮ ಉದಾಹರಣೆ ದಿ.ಎಸ್.ಎಂ.ಕೃಷ್ಣ ಅವರು ಎಂದು ತಿಳಿಸಿದರು.ಎಸ್.ಎಂ. ಕೃಷ್ಣ ಅವರ ನಿಧನ ಭಾರತದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದ್ದು, ಅಂತಹ ನಾಯಕರ ಸಂತತಿ ಭವಿಷ್ಯದಲ್ಲಿ ಹೆಚ್ಚಾಗಿ ಬೆಳೆಯಲಿ ಎಂದು ಹಾರೈಸಿದರು.