ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಉಪ ಲೋಕಾಯುಕ್ತ ಕಾರ್ಯ ವ್ಯಾಪ್ತಿಗೆ ಒಳಪಡುವ ಹಲವು ಪ್ರಕರಣಗಳನ್ನು ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೋಮವಾರ ವಿಚಾರಣೆ ನಡೆಸಿದರು.ನಗರ ಹೊರವಲಯ ಜಿಲ್ಲಾಡಳಿತ ಭವನದದ ಜಿಲ್ಲಾ ಪಂಚಾಯತ್‌ನ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ದೂರು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಿಂದ ಸಾಕಷ್ಟು ದೂರುಗಳು ಬಂದಿವೆ. ಅವುಗಳಲ್ಲಿ 120 ದೂರುಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸೋಮವಾರ 60 ದೂರುಗಳು ಮತ್ತು ಮಂಗಳವಾರ ಉಳಿದ ದೂರುಗಳ ವಿಚಾರಣೆ ಮಾಡಲಾಗುವುದು ಎಂದರು.
ಸರ್ಕಾರ ಎಂದರೆ ದೇವರುಎಲ್ಲರಿಗೂ ಗೊತ್ತಿದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು. ದೇವರು ಪ್ರತ್ಯಕ್ಷವಾಗಿ ಬಂದು ಕೆಲಸ ಮಾಡಿಕೊಡುವುದಿಲ್ಲ. ಪೂಜಾರಿಗೆ ಪೂಜಾರಿಯ ಮೂಲಕ ಅಹವಾಲು ಸಲ್ಲಿಸಿ ವರ ಪಡೆಯುತ್ತೇವೆ. ಅದೇ ರೀತಿ ಸರ್ಕಾರದ ಕೆಲಸಕ್ಕೆ ಆ ದೇವರು ಸರ್ಕಾರಿ ಅಧಿಕಾರಿಗಳ ಮೂಲಕ ಪರಿಹಾರ ಪಡೆಯಬೇಕು ಎಂದು ನಮಗೆ ಸರ್ಕಾರಿ ಕೆಲಸವನ್ನು ನೀಡಿದ್ದಾನೆ. ಸರ್ಕಾರ ಎಂದರೆ ದೇವರು. ಇದನ್ನು ಅರಿತು ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಬೇಕು ಎಂದರು.
ಅಧಿಕಾರಿಗಳು ಸಾರ್ವಜನಿಕರಿಂದ ಯಾವುದೇ ರೀತಿಯ ಲಂಚ ಋಷುವತ್ತು ಪಡೆಯದೆ ಅವರ ಕೆಲಸಗಳನ್ನು ಮಾಡಿಕೊಡಬೇಕು. ಆಗ ನಮ್ಮ ಜನ್ಮ ಸಾರ್ಥಕ. ಸಾರ್ವಜನಿಕ ಸಮಸ್ಯೆಗಳನ್ನು ಕಾನೂನು ಪ್ರಕಾರ ಕಾನೂನು ಮಿತಿಮೀರದೆ ಮಾಡುವುದು ಮತ್ತು ಕಾನೂನಿನ ಪ್ರಕಾರ ಎಲ್ಲ ಸವಲತ್ತುಗಳನ್ನು ಆರ್ಹರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಕರ್ತವ್ಯ ಭ್ರಷ್ಟತೆ ಎಂದಾದರೆ ಅದಕ್ಕಿಂತ ನಿಕೃಷ್ಟತೆ ಮತ್ತೊಂದಿಲ್ಲ ಎಂದರು.ಕಚೇರಿಗಳಲ್ಲಿ ಲಂಚಾವತಾರ
ಇವತ್ತಿನ ದಿನ ನಾವು ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದರು ಸಾರ್ವಜನಿಕವಾಗಿ ಕೇಳಿ ಬರುವ ಪ್ರಶ್ನೆ ಹಣ ಮತ್ತು ಶಿಫಾರಸು ಇದ್ದರೆ ಇದ್ದರೆ ಮಾತ್ರ ಎಲ್ಲಾ ಕೆಲಸ ಮತ್ತು ಸವಲತ್ತುಗಳು ಎಲ್ಲಾ ಕೆಲಸಗಳು ಆಗುತ್ತವೆ ಎಂಬುದು ಕೇಳಿ ಬರುತ್ತದೆ. ಆದ್ದರಿಂದ ಇದನ್ನು ತಪ್ಪಿಸಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಕಚೇರಿಗಳನ್ನು ಲಂಚಮುಕ್ತ ಮಾಡಿ ಸಾರ್ವಜನಿಕ ಸ್ನೇಹ ಕಚೇರಿಗಳನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಕಿವಿಮಾತು ಹೇಳಿದರುತಹಸೀಲ್ದಾರ್, ಎಡಿಎಲ್‌ಆರ್‌ಗೆ ತರಾಟೆ
ಆರಂಭದಲ್ಲಿ ಹೈಕೋರ್ಟ್ ಜಮೀನಿನ ಖಾತೆ ಮಾಡಲು ಆದೇಶಸಿ 6 ವರ್ಷವಾಡರೂ ಮಾಡಿಲ್ಲ ಎಂಬ ದೂರು ದಾಖಲಾಗಿದ್ದು, ಇದಕ್ಕೆ ತಹಸೀಲ್ಧಾರ್ ಮತ್ತು ಎಡಿಎಲ್ ಆರ್ ರನ್ನು ತರಾಟೆಗೆ ತೆಗೆದು ಕೊಂಡು, ಖಾತೆ ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಿದರು. ಈ ಒಂದು ತಿಂಗಳಲ್ಲಿ ಮಾಡದಿದ್ದಲ್ಲಿ ಕೋರ್ಟ ನಿಂದನೆ ಪ್ರಕರಣ ದಾಖಲಿಸುವಂತೆ ತಿಳಿಸಿದರು.ಆರೋಗ್ಯ ಇಲಾಖೆಯ ನಿವೃತ್ತ ನೌಕರರೊಬ್ಬರು ನಿವೃತ್ತಿಗೂ ಮೊದಲು ತಮಗೆ ಪ್ರಮೋಷನ್ ನೀಡಬೇಕಿತ್ತು ಎಂದು ಡಿಎಚ್ಓ ಮತ್ತಿತರರ ಮೇಲೆ ನೀಡಿದ್ದ ದೂರು ವಿಚಾರಣೆ ನಡೆಸಿ, ನಿವೃತ್ತ ನೌಕರರಿಗೆ ಪ್ರಮೋಷನ್ ನೀಡ ಬೇಕಿರುವುದು ಆರೋಗ್ಯ ಮತ್ತು ಕುಟುಂಭ ಕಲ್ಯಾಣ ನಿರ್ಧೇಶಕರು ಅವರ ಬಳಿ ವಿಚಾರಿಸಿ ನಂತರ ಪ್ರಮೋಷನ್ ದೊರೆಯದಿದ್ದರೆ ದೂರು ದಾಖಲಿಸಿ ಎಂದರು.
ಈ ವೇಳೆ ಉಪ ಲೋಕಾಯುಕ್ತರ ಕಾರ್ಯದರ್ಶಿ ನ್ಯಾ.ಕಿರಣ್.ಎಂ.ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಶಿಲ್ಪ. ಜಿಲ್ಲಾಧಿಕಾರಿಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಡಿಸಿಎಫ್ಓ ಹೆಚ್.ಸಿ.ಗಿರೀಶ್, ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಬಿ.ಜಗನ್ನಾಥ್ ರೈ,ಲೋಕಾಯುಕ್ತ ಎಸ್ ಪಿ ಜಾನ್ ಅಂಟೋನಿ, ಉಪವಿಭಾಗಾಧಿಕಾರಿ ಡಿ,ಎಚ್.ಅಶ್ವಿನ್, ಲೋಕಾ ಡಿವೈಎಸ್ಪಿ ವೀರೇಂದ್ರಕುಮಾರ್, ತಹಸೀಲ್ದಾರ್ ಅನಿಲ್, ದೂರುದಾರರು ಇದ್ದರು.