ಕನ್ನಡಪ್ರಭ ವಾರ್ತೆ ಇಂಡಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿದ್ದರೇ, ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.100ರ ಗಡಿಯಲ್ಲಿ ಇದೆ. ಪಿಯುಸಿ ಫಲಿತಾಂಶದಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಸಂಸ್ಥೆ ಪ್ರಸಕ್ತ ವರ್ಷದ 10ನೇ ತರಗತಿಯಲ್ಲಿ ಶೇ.72 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಭಾಗ್ಯವಂತಿ ಕನ್ನಡ ಮಾಧ್ಯಮ ಪ್ರೌಢಶಾಲೆಯು 2024- 25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಪ್ರತಿಶತ 72ರಷ್ಟು ಫಲಿತಾಂಶ ಪಡೆದಿದೆ. ಸೃಷ್ಟಿ ಪಂಡಿತ ಬಿರಾದಾರ (595/625) ಶೇ.96 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.
ರೇವಗೊಂಡ ಈರಣ್ಣ ಬಿರಾದಾರ 625ಕ್ಕೆ 549 ಅಂಕ ಪಡೆದು ಶೇ.88 ಅಂಕ ಪಡೆದು ದ್ವಿತೀಯ, ಸಾಗರ ಅಣ್ಣರಾಯ ಕರ್ಜಿಗಿ 625ಕ್ಕೆ 547 ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಶ್ರೀ ಭಾಗ್ಯವಂತಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100ಕ್ಕೆ100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಅನಿಲ್ ವಿಠೋಬ ದಶವಂತ (598/625) ಪ್ರಥಮ ಸ್ಥಾನ (ಶೇ.96), ಆರ್ಯನ ರಾಠೋಡ (568/625) ದ್ವಿತೀಯ, ಐಶ್ವರ್ಯ ಸಿದ್ದರಾಯ ಪಾಟೀಲ್ ತೃತೀಯ ಸ್ಥಾನ (546/625) ಪಡೆದಿದ್ದಾನೆ.ಶಾಂತಪ್ಪ ದಶವಂತ ನೇತೃತ್ವದಲ್ಲಿ 1989-90ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಮತ್ತು ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ಮತ್ತು ಜೀವನಕ್ಕಾಗಿ ಶಿಕ್ಷಣ ಎಂಬ ಧ್ಯೇಯದೊಂದಿಗೆ ಮುಂದುವರಿಯುತ್ತ ಬಂದಿದೆ. ಆಡಳಿತ ಮಂಡಳಿ ಯಾವುದೇ ವೈಯಕ್ತಿಕ ಪ್ರತಿಫಲಾಪೇಕ್ಷೆಯಿಲ್ಲದೆ ಸಂಗ್ರಹವಾದ ಹಣವನ್ನು ಸಂಸ್ಥೆಯ ಬೆಳವಣಿಗೆಗೆ ವಿನಿಯೋಗಿಸುತ್ತ ಬಂದಿದೆ.
ಅಭಿನಂದಿಸಿದ ಆಡಳಿತ ಮಂಡಳಿ
-----------
ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ನಗರ ಪ್ರದೇಶದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಮಹಾದಾಸೆಯಿಂದ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಪ್ರತಿ ವರ್ಷ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಫಲಿತಾಂಶ ಗುಣಮಟ್ಟದಿಂದ ಬರುತ್ತಿದ್ದು ಸಂತಸ ತಂದಿದೆ. ಪಪೂ ವಿಭಾಗದ ಫಲಿತಾಂಶವೂ ಉತ್ತಮವಾಗಿ ಬರುತ್ತಿದೆ. ಗ್ರಾಮೀಣ ಮಕ್ಕಳಿಗೆ ಈ ಸಂಸ್ಥೆಯಿಂದ ಅನುಕೂಲವಾಗುತ್ತಿದೆ.
------------
-ಅಪ್ಪಾರಾಯ ದಶವಂತ, ಸಲಹಾ ಸಮಿತಿ ಅಧ್ಯಕ್ಷರು