ಅಪೌಷ್ಟಿಕತೆ ನಿವಾರಣೆಗೆ ರಾಗಿ ಮಾಲ್ಟ್‌ ಸಹಕಾರಿ

KannadaprabhaNewsNetwork |  
Published : Feb 24, 2024, 02:37 AM IST
ಫೋಟೋ ಶೀರ್ಷಿಕೆ 22ಎಸ್‌ಡಿಟಿ3ಸವದತ್ತಿಯ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ಪೂರಕ ಪೌಷ್ಠಿಕ ಆಹಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸನ್ನು ವಿತರಿಸುವ ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಧುಸೂಧನ ಕುಲಕರ್ಣಿ ಮಾತನಾಡಿದರು.  | Kannada Prabha

ಸಾರಾಂಶ

ರಾಗಿ ಕ್ಯಾಲ್ಸಿಯಂಯುಕ್ತವಾಗಿದ್ದು, ಇದರಿಂದ ತಯಾರಿಸಲಾದ ಮಾಲ್ಟ್ ವಿದ್ಯಾರ್ಥಿಗಳಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸುತ್ತದೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಿಸಲು ಸಿರಿ ಧಾನ್ಯಗಳಲ್ಲಿರುವ ಬಹುಪೌಷ್ಟಿಕಾಂಶಗಳು ಸಹಕಾರಿಯಾಗಲಿವೆ ಎಂದು ತಹಸೀಲ್ದಾರ್‌ ಮಧುಸೂದನ್ ಕುಲಕರ್ಣಿ ಹೇಳಿದರು.

ಪಟ್ಟಣದ ಗುರ್ಲಹೊಸೂರಿನ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಗುರುವಾರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯುಲು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಸಂಸ್ಥೆಯವರು ಉಚಿತವಾಗಿ ನೀಡುತ್ತಿರುವ ರಾಗಿ ಮಾಲ್ಟ್ ಪೂರಕ ಪೌಷ್ಠಿಕ ಆಹಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳ ಮಹತ್ವ ಅರಿತು, ಮಕ್ಕಳು ಇದರ ಲಾಭ ಪಡೆಯಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ ಮಾತನಾಡಿ, ರಾಗಿ ಕ್ಯಾಲ್ಸಿಯಂಯುಕ್ತವಾಗಿದ್ದು, ಇದರಿಂದ ತಯಾರಿಸಲಾದ ಮಾಲ್ಟ್ ವಿದ್ಯಾರ್ಥಿಗಳಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು, ಇದು ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೈತ್ರಾದೇವಿ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ರಾಗಿ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ರಾಜ್ಯಾದ್ಯಂತ ಆಯ್ದ ಶಾಲೆಗಳಲ್ಲಿ ರಾಗಿ ಮಾಲ್ಟ್ ವಾರದಲ್ಲಿ ಮೂರು ದಿನ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಮಕ್ಕಳ ದೇಹದ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ರಾಜ್ಯ ಮಟ್ಟದ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅಶ್ವಿನಿ ಮೇಟಿಯನ್ನು ಸತ್ಕರಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ್ ವಾಗೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕಿರಣ ಕುರಿ, ನಿರ್ದೇಶಕ ಪ್ರೇಮಾ ಹಲಕಿ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಟಿ.ಬಿ.ಏಗನಗೌಡರ, ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ, ಗಿರೀಶ ಮುನವಳ್ಳಿ, ಮುಖ್ಯೋಪಾಧ್ಯಾಯ ಎಂ.ಬಿ.ಕಮ್ಮಾರ, ಸಿಡಿಪಿಒ ಸುನಿತಾ ಪಾಟೀಲ್, ಪುರಸಭೆ ಸದಸ್ಯ ದ್ಯಾಮನ್ನ ಸುತಗಟ್ಟಿ, ಗಣ್ಯರಾದ ಶಿವಾನಂದ ಪಟ್ಟಣಶೆಟ್ಟಿ, ದಿಲಾವರ ಸನದಿ, ಪ್ರವೀಣ ಮುನವಳ್ಳಿ, ಸಮನ್ವಯ ಶಿಕ್ಷಣ ಶಿಕ್ಷಕ ವೈ.ಬಿ.ಕಡಕೋಳ, ಸಿ.ವಿ.ಬಾರ್ಕಿ, ಎಸ್.ಬಿ.ಬೆಟ್ಟದ, ಡಿ.ಎಲ್.ಭಜಂತ್ರಿ, ರಾಮಚಂದ್ರಪ್ಪ, ಎಚ್.ಎಲ್.ನದಾಫ್ ಮೊದಲಾದವರು ಇದ್ದರು. ಎಂ.ಬಿ.ಕಮ್ಮಾರ ಸ್ವಾಗತಿಸಿದರು. ಆನಂದ ಬೆಳವಟಗಿ ನಿರೂಪಿಸಿದರು. ಎಂ.ಜಿ.ದೊಡಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ