ಭುವನೇಶ್ವರಿ ತರಕಾರಿ ವರ್ತಕರ ಸಂಘದ ಕಚೇರಿ ಉದ್ಘಾಟಿಸಿದ ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Apr 26, 2026, 02:30 AM IST
ಪಟ್ಟಣದ ಎಪಿಎಂಸಿ ಆವರಣದಲ್ಲಿ ಭುವನೇಶ್ವರಿ ತರಕಾರಿ ವರ್ತಕರ ಸಂಘದ ಕಚೇರಿಯನ್ನು ಶಾಸಕ ಸಿಎನ್ ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಪಿಎಂಸಿ ಆವರಣದಲ್ಲಿ ಭುವನೇಶ್ವರಿ ತರಕಾರಿ ವರ್ತಕರ ಸಂಘದ ಕಚೇರಿಯನ್ನು ಶಾಸಕ ಸಿ ಎನ್ ಬಾಲಕೃಷ್ಣ ಉದ್ಘಾಟಿಸಿದರು. ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವೇ ಇಲ್ಲ. ಹಾಗೆಯೇ ಎಲ್ಲರೂ ಸಹಕಾರ ಸಲಹೆಯಿಂದ ಎಲ್ಲಾ ಕೆಲಸಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಅರ್ಥ ಸಹಕಾರದಿಂದ ಸಹಕಾರಿ ಸಂಘ ಸಂಸ್ಥೆಗಳನ್ನು ನಡೆಸಲು ಸಹಕಾರಿಗಳ ಭಾಗಿತ್ವ ಬಹುಮುಖ್ಯವಾಗಿದೆ. ಒಗ್ಗಟ್ಟಿನಿಂದ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತವೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಎಪಿಎಂಸಿ ಆವರಣದಲ್ಲಿ ಭುವನೇಶ್ವರಿ ತರಕಾರಿ ವರ್ತಕರ ಸಂಘದ ಕಚೇರಿಯನ್ನು ಶಾಸಕ ಸಿ ಎನ್ ಬಾಲಕೃಷ್ಣ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿ ಶಾಸಕರು ರೈತರ ಅನುಕೂಲಕ್ಕಾಗಿ ಸುಮಾರು ಎರಡು ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಿದ್ದು ಇದರಿಂದ ಬಹಳಷ್ಟು ಅನುಕೂಲಕರ ಕಾರ್ಯಗಳು ನಡೆದಿವೆ. ಅದರಲ್ಲಿ ಶೌಚಾಲಯ ಕುಡಿಯುವ ನೀರು, ವಿದ್ಯುತ್ ದೀಪ, ಕಾಂಕ್ರೀಟ್ ರಸ್ತೆ, ವ್ಯಾಪಾರಸ್ಥರಿಗೆ ಅಂಗಡಿ ಮಳಿಗೆಗಳು ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಅದರಂತೆ ಇನ್ನೂ ವಿವಿಧ ಕಾಮಗಾರಿಗಳು ಇದ್ದು ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಹಿಂದೆ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅದರಿಂದ ಬಹಳಷ್ಟು ತೊಂದರೆಗಳು ಉಂಟಾದವು. ಆದಕಾರಣ ಒಂದು ಕೋಟಿ 50 ಲಕ್ಷ ರುಪಾಯಿ ಮುಂಗಡ ಠೇವಣಿಯನ್ನು ಬ್ಯಾಂಕಿನಲ್ಲಿ ಇಟ್ಟು, ಅದರಿಂದ ಬಂದಂತಹ ಬಡ್ಡಿಯ ಹಣದಲ್ಲಿ ಕಚೇರಿಯ ನಿರ್ವಹಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಇಂತಿಷ್ಟು ತೆರಿಗೆ ಹಣವನ್ನು ಎಪಿಎಂಸಿ ಸಂಗ್ರಹಣೆಗೆ ಬಹಳಷ್ಟು ಸಹಕಾರಿಯಾಗಿದ್ದು ಇದರಿಂದ ಎಪಿಎಂಸಿ ಆವರಣಗಳು ನಿರ್ವಹಣೆ ಮತ್ತು ಕಚೇರಿಯ ನಿರ್ವಹಣೆಗೆ ಸಹಕಾರಿಯಾಗಿದ್ದೆ ಎಂದರು.ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಅಧಿಕಾರಿ ಡಾ. ವಿಜಯಲಕ್ಷ್ಮೀ ಮಾತನಾಡಿ ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವೇ ಇಲ್ಲ. ಹಾಗೆಯೇ ಎಲ್ಲರೂ ಸಹಕಾರ ಸಲಹೆಯಿಂದ ಎಲ್ಲಾ ಕೆಲಸಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಅರ್ಥ ಸಹಕಾರದಿಂದ ಸಹಕಾರಿ ಸಂಘ ಸಂಸ್ಥೆಗಳನ್ನು ನಡೆಸಲು ಸಹಕಾರಿಗಳ ಭಾಗಿತ್ವ ಬಹುಮುಖ್ಯವಾಗಿದೆ. ಒಗ್ಗಟ್ಟಿನಿಂದ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತವೆ.ಹಾಗೆಯೇ ಇಂದು ನಿಮ್ಮೆಲ್ಲರ ಒಗ್ಗಟ್ಟಿನಿಂದ ಇಂದು ಎಪಿಎಂಸಿ ಆವರಣದಲ್ಲಿ ತಾಯಿ ಭುವನೇಶ್ವರಿ ಮಾತೆಯ ಹೆಸರಿನಲ್ಲಿ ತರಕಾರಿ ವರ್ತಕರ ಸಂಘವನ್ನು ಸ್ಥಾಪಿಸಿದ್ದೀರಾ ಈ ಸಂಘವು ಉತ್ತಮವಾಗಿ ಬೆಳೆಯಲಿ ಯಾವುದೇ ರೀತಿಯ ಅಡೆತಡೆಗಳು ಬರದಂತೆ ಸಾಗಲಿ ಎಂದು ಈ ಮೂಲಕ ಹಾರೈಸುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸೋಮಶೇಖರ್‌, ಶ್ರೀ ಭುವನೇಶ್ವರಿ ತರಕಾರಿ ವರ್ತಕರ ಸಂಘದ ಕಾರ್ಯದರ್ಶಿ ದಿವಾಕರ್ ಇನ್ನು ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರಿನಲ್ಲಿ ಶಂಕರಾಚಾರ್ಯರ ಜಯಂತಿ
ಭ್ರಷ್ಟಾಚಾರದ ವಿರುದ್ಧ ಹೋರಾಟಲು ಸಿದ್ಧ ಎಂದ ಕನಾಯ್ಕನಹಳ್ಳಿ ಪ್ರದೀಪ್