ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣ

KannadaprabhaNewsNetwork |  
Published : Apr 26, 2026, 02:30 AM IST
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕುಮಾರ್, ಸಾಹಿತಿ ಹೊನ್ನ ಶೆಟ್ಟಿಹಳ್ಳಿ ಗಿರಿರಾಜ್, ಪುರಸಭಾ ಮುಖ್ಯಾಧಿಕಾರಿ ಯತೀಶ್‌ಕುಮಾರ್, ಮಾಜಿ ಅಧ್ಯಕ್ಷರುಗಳಾದ ಕೋಟೆಮೋಹನ್, ಬನಶಂಕರಿ ರಘು, ಸದಸ್ಯರುಗಳಾದ ಕವಿತಾ ರಾಜಣ್ಣ, ಗಣೇಶ್, ರಾಜಕುಮಾರ್ ಸಂಘದ ಸದಸ್ಯರುಗಳಾದ ರಾಮಚಂದ್ರು, ದಿನೇಶ್, ಮಹೇಶ್, ರೇವಣ್ಣಪ್ಪ, ರುದ್ರೇಶ್, ತೀರ್ಥ, ಪುರುಷೋತ್ತಮ್ ಮತ್ತಿತರಿದ್ದರು.  | Kannada Prabha

ಸಾರಾಂಶ

ರಾಜಕುಮಾರ್‌ ಸಂಘದ ಸದಸ್ಯರ ಕಾಳಜಿಯಿಂದ ಇಂತಹ ಸುಂದರ ಉದ್ಯಾನವನ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಸಂಘದ ಅಧ್ಯಕ್ಷರಾದ ಪುಟ್ಟಣ್ಣನವರು ಪಟ್ಟಣದ ಪ್ರಮುಖ ಸ್ಥಳದಲ್ಲಿ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಿದ್ದು, ಅದಕ್ಕೆ ಪೂರಕವಾಗಿ ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಉದ್ಯಾನವನಕ್ಕೆ ದೀಪ, ಕುಡಿಯುವ ನೀರು ಹಾಗೂ ಅರಳಿಕಟ್ಟೆಗೆ ಕಟ್ಟೆಯನ್ನು ಕಟ್ಟಿಕೊಡಲು ಮನವಿ ಮಾಡಿದ್ದು ಅದನ್ನ ಕೂಡ ಪೂರ್ಣಗೊಳಿಸಲಾಗುವುದು. ರಾಜಕುಮಾರ್ ಕೇವಲ ನಟರಲ್ಲ ಕನ್ನಡ ನಾಡು ನುಡಿ ವಿಚಾರದಲ್ಲಿ ತಮ್ಮ ಸಾರ್ವಭೌಮವನ್ನು ಮೆರೆದಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನ ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಭರವಸೆ ನೀಡಿದರು.

ಪಟ್ಟಣದ ಡಾ. ರಾಜ್‌ಕುಮಾರ್ ಉದ್ಯಾನವನದಲ್ಲಿ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಮಕ್ಕಳ ಕ್ರೀಡಾ ಸಾಮಗ್ರಿಗಳನ್ನ ಉದ್ಘಾಟಿಸಿ ಶುಕ್ರವಾರ ಮಾತನಾಡಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲು ಉದ್ಯಾನವನಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದ್ದು, ಅದರಂತೆ ರಾಜಕುಮಾರ್ ಉದ್ಯಾನವನದಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ವಾಯುವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಅದನ್ನು ಗಮನಿಸಿದ ಪುರಸಭೆಯ ಹಿಂದಿನ ಆಡಳಿತ ಮಂಡಳಿ ಉದ್ಯಾನವನದಲ್ಲಿ ಮಕ್ಕಳಿಗೆ ಆಟವಾಡಲು ಸಾಮಗ್ರಿಗಳನ್ನ ನಿರ್ಮಿಸಲಾಗಿದ್ದು ಪಟ್ಟಣದಲ್ಲೇ ಒಂದು ಸುಸಜ್ಜಿತ ಉದ್ಯಾನವನವಾಗಿ ಮಾರ್ಪಟ್ಟಿದೆ. ಇದಕ್ಕೆ ರಾಜಕುಮಾರ್‌ ಸಂಘದ ಸದಸ್ಯರ ಕಾಳಜಿಯಿಂದ ಇಂತಹ ಸುಂದರ ಉದ್ಯಾನವನ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಸಂಘದ ಅಧ್ಯಕ್ಷರಾದ ಪುಟ್ಟಣ್ಣನವರು ಪಟ್ಟಣದ ಪ್ರಮುಖ ಸ್ಥಳದಲ್ಲಿ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಿದ್ದು, ಅದಕ್ಕೆ ಪೂರಕವಾಗಿ ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಉದ್ಯಾನವನಕ್ಕೆ ದೀಪ, ಕುಡಿಯುವ ನೀರು ಹಾಗೂ ಅರಳಿಕಟ್ಟೆಗೆ ಕಟ್ಟೆಯನ್ನು ಕಟ್ಟಿಕೊಡಲು ಮನವಿ ಮಾಡಿದ್ದು ಅದನ್ನ ಕೂಡ ಪೂರ್ಣಗೊಳಿಸಲಾಗುವುದು. ರಾಜಕುಮಾರ್ ಕೇವಲ ನಟರಲ್ಲ ಕನ್ನಡ ನಾಡು ನುಡಿ ವಿಚಾರದಲ್ಲಿ ತಮ್ಮ ಸಾರ್ವಭೌಮವನ್ನು ಮೆರೆದಿದ್ದಾರೆ ಎಂದರು.ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಮಾತನಾಡಿ ರಾಜಕುಮಾರ್ ಕುಟುಂಬಕ್ಕೂ ಹಾಗೂ ಚನ್ನರಾಯಪಟ್ಟಣಕ್ಕೂ ಅವಿನ ಭಾವ ಸಂಬಂಧವಿದ್ದು ಗೋಕಾಕ್ ಚಳವಳಿ ಪ್ರಾರಂಭದಲ್ಲಿ ಪಟ್ಟಣದ ಹಳೆ ಬಸ್ ನಿಲ್ದಾಣಕ್ಕೆ ರಾಜಕುಮಾರ್ ಅವರು ಬಂದು ಭಾಷಣ ಮಾಡಿ ಹೋಗಿದ್ದು ಇತಿಹಾಸ ಅದರಂತೆ ರಾಜಕುಮಾರ್ ಒಬ್ಬ ಕೇವಲ ನಟರಲ್ಲ ಅವರು ಕನ್ನಡ ಭಾಷೆಗೆ ಬಹಳಷ್ಟು ಪ್ರಾಮುಖ್ಯತೆಯನ್ನ ನೀಡುತ್ತಿದ್ದರು. ಅಂತಹ ಮೇರು ನಟರ ಹುಟ್ಟುಹಬ್ಬವನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಮುಂದಿನ ಪೀಳಿಗೆಗೆ ರಾಜಕುಮಾರ್‌ ಅವರ ಆದರ್ಶಗಳನ್ನ ಹೇಳುವ ಮೂಲಕ ಅವರ ಸರಳತೆಯನ್ನ ಮೈಗೂಡಿಸಿಕೊಳ್ಳಬೇಕು ಅವರಂತಹ ಮೇರು ನಟರನ್ನ ಪಡೆದ ಕನ್ನಡಿಗರದ ನಾವೇ ಧನ್ಯರು ಶಾಸಕರು ಸಂಘದ ಮನವಿಗೆ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಪೂರಕವಾಗಿ ಕೆಲಸಗಳನ್ನು ಮಾಡಿಕೊಡಲಾಗುವುದೆಂದು ಭರವಸೆ ನೀಡಿದ್ದಾರೆ ಎಂದರು.

ಡಾ. ರಾಜ್‌ಕುಮಾರ್‌ ಸಂಘದ ಜಿಲ್ಲಾ ಗೌರವಾಧಕ್ಷರಾದ ಬಾಳ್ಳುಗೋಪಾಲ್ ಮಾತನಾಡಿ ರಾಜಕುಮಾರ್‌ ಕೇವಲ ತಮ್ಮ ಕುಟುಂಬಕ್ಕಾಗಿ ಮೀಸಲಿದ್ದವರಲ್ಲ. ಅವರು ಇಡೀ ಕರ್ನಾಟಕದ ಆಸ್ತಿ ಅವರು ಸಮಾಜಕ್ಕೋಸ್ಕರ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಹಾಸನದ ಆದಿಚುಂಚನಗಿರಿ ಶಾಖಾ ಮಠ ಹಾಗೂ ಕಲ್ಯಾಣಮಂಟಪ ನಿರ್ಮಾಣ ಅರ್ಧಕ್ಕೆ ನಿಂತಿದ್ದ ಸಂದರ್ಭದಲ್ಲಿ ರಾಜ್‌ಕುಮಾರ್‌ ಅವರು ಹಾಸನಕ್ಕೆ ಆಗಮಿಸಿ ಕಾರ್ಯಕ್ರಮಗಳನ್ನ ನಡೆಸಿ ಗೇಣಿಗೆ ಸಂಗ್ರಹ ಮಾಡಿ ಅದರ ಹಣದಿಂದ ಕಟ್ಟಡವನ್ನು ನಿರ್ಮಾಣ ಮಾಡಿಸಿದ್ದರು. ಇದೇ ರೀತಿ ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಕ್ರಮಗಳನ್ನ ಮಾಡಿ ಅದರಲ್ಲಿ ಬಂದಂತಹ ಹಣವನ್ನ ಆಯಾ ವ್ಯಾಪ್ತಿಯ ತಾಲೂಕುಗಳಿಗೆ ನೀಡಿ ಸಮಾಜ ಸೇವೆಯನ್ನು ಮಾಡಿರುವುದು ಯಾರು ಮರೆತಿಲ್ಲ, ಅಂತಹ ಶ್ರೇಷ್ಠ ನಟರನ್ನು ಪಡೆದ ನಾವುಗಳೇ ಧನ್ಯರು ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕುಮಾರ್‌, ಸಾಹಿತಿ ಹೊನ್ನ ಶೆಟ್ಟಿಹಳ್ಳಿ ಗಿರಿರಾಜ್, ಪುರಸಭಾ ಮುಖ್ಯಾಧಿಕಾರಿ ಯತೀಶ್‌ ಕುಮಾರ್‌, ಮಾಜಿ ಅಧ್ಯಕ್ಷರುಗಳಾದ ಕೋಟೆ ಮೋಹನ್, ಬನಶಂಕರಿ ರಘು, ಸದಸ್ಯರಾದ ಕವಿತಾ ರಾಜಣ್ಣ, ಗಣೇಶ್, ರಾಜಕುಮಾರ್ ಸಂಘದ ಸದಸ್ಯರಾದ ರಾಮಚಂದ್ರು, ದಿನೇಶ್, ಮಹೇಶ್, ರೇವಣ್ಣಪ್ಪ, ರುದ್ರೇಶ್, ತೀರ್ಥ, ಪುರುಷೋತ್ತಮ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರಿನಲ್ಲಿ ಶಂಕರಾಚಾರ್ಯರ ಜಯಂತಿ
ಭ್ರಷ್ಟಾಚಾರದ ವಿರುದ್ಧ ಹೋರಾಟಲು ಸಿದ್ಧ ಎಂದ ಕನಾಯ್ಕನಹಳ್ಳಿ ಪ್ರದೀಪ್