ಜನರ ಮನಸ್ಸು ಗೆದ್ದ ಮೋದಿ

KannadaprabhaNewsNetwork |  
Published : Apr 21, 2024, 02:22 AM IST
ಕೆರೂರ | Kannada Prabha

ಸಾರಾಂಶ

ಕೇಂದ್ರದಲ್ಲಿ ಅವರ ನೇತೃತ್ವದ ಸರ್ಕಾರವೇ ರಚನೆಯಾಗುತ್ತದೆ. ನನ್ನ ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಕೆರೂರ

ಭಾರತವನ್ನು ವಿಶ್ವವೆ ಗುರುತಿಸುವಂತೆ ಮಾಡಿದ ಹಾಗೂ ತಮ್ಮ ಜನಪರ ಕೆಲಸಗಳಿಂದ ಮೋದಿ ಮನೆಮಾತಾಗಿದ್ದಾರೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತವೆಂದು ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ಪಟ್ಟಣದ ರಾಚೋಟೇಶ್ವರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ನನ್ನ ಪರ ಒಳ್ಳೆಯ ವಾತಾವರಣವಿದೆ. ನನ್ನ ಪುನರಾಯ್ಕೆ ಖಚಿತ. ಪ್ರಧಾನಿ ನರೇಂದ್ರ ಮೋದಿ ಕಳೆದ ಒಂದು ದಶಕದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನ ಗುರುತಿಸಿದ್ದಾರೆ ಎಂದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ತಾವು ಮಾಡಿದ ಜನಪರ ಕೆಲಸಗಳನ್ನು ಮನೆಮನೆಗೆ ತಿಳಿಸುವ ಕಾರ್ಯಕ್ರಮ ಮಾಡಿದ್ದಾರೆ. ಅವರ ಸುಭದ್ರ ಭಾರತದ ಕಲ್ಪನೆಗೆ ಮತದಾರರು ಬದ್ದತೆ ತೋರಿಸುತ್ತಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಅವರ ನೇತೃತ್ವದ ಸರ್ಕಾರವೇ ರಚನೆಯಾಗುತ್ತದೆ. ನನ್ನ ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಕಾರ್ಯಕರ್ತರು ಮನೆಮನೆಗೆ ಸಂಚರಿಸಿ ಪ್ರಚಾರ ಮಾಡುತ್ತಿದ್ದು ಕ್ಷೇತ್ರದಲ್ಲಿ ನಾನು ಹೋದೆಲ್ಲೆಲ್ಲ ಮತದಾರರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆಂದರು.

ಬಿಜೆಪಿಗೆ ನಷ್ಟವಿಲ್ಲ : ಬಾಗಲಕೋಟ ನಗರದ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮತ್ತು ಸಂತೋಷ ಹೊಕ್ರಾನಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಈಗ ಅವರ ಕಾಂಗ್ರೆಸ್‌ ಸೇರ್ಪಡೆಯಿಂದ ಬಿಜೆಪಿಗೆ ನಷ್ಟವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ದಾಸಮನಿ, ಪ.ಪಂ.ಸದಸ್ಯ ವಿಜಕುಮಾರ ಐಹೊಳ್ಳಿ, ಪರಶುರಾಮ ಮಲ್ಲಾಡದ , ಶಂಕರ ಕೆಂದೂಳ್ಳಿ ಪ್ರಮುಖರಾದ ಕಾಂತೇಶ ಬಿಜಾಪೂರ, ಅರುಣ ಕಟ್ಟಿಮನಿ, ಹನಮಂತ ಚೂರಿ, ಸದಾನಂದ ಮದಿ, ನಾಗೇಶ ಛತ್ರಬಾನ, ಶರಣು ಸಜ್ಜನ, ಅನಂತ ಚೂರಿ, ಜೋಗಿ ಸೇರಿದಂತೆ ಹಲವಾರು ಜನರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ