25 ರಂದು ಮಡಿಕೇರಿಯಲ್ಲಿ ‘ಬಹುಭಾಷಾ ಕವಿಗೋಷ್ಠಿ’

KannadaprabhaNewsNetwork |  
Published : Sep 24, 2025, 01:02 AM IST
ಕವಿಗೋಷ್ಠಿ’ | Kannada Prabha

ಸಾರಾಂಶ

ಬಹುಭಾಷಾ ಕವಿಗೋಷ್ಠಿ ಸೆ. 25ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ದಿನಪೂರ್ತಿ ನಡೆಯುವ ಮೂಲಕ ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ‘ಬಹುಭಾಷಾ ಕವಿ ಗೋಷ್ಠಿ’ ಸೆ.25 ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ದಿನ ಪೂರ್ತಿ ನಡೆಯುವ ಮೂಲಕ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆಯೆಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್ ಅವರು ತಿಳಿಸಿದ್ದಾರೆ.ಬಹುಭಾಷಾ ಕವಿಗೋಷ್ಠಿಯ ಆರಂಭಕ್ಕೂ ಮುನ್ನ ಅಂದು ಬೆಳಗ್ಗೆ 9 ಗಂಟೆಗೆ ಗಾಂಧಿ ಮೈದಾನ ರಸ್ತೆಯ ಬಳಿಯಲ್ಲಿರುವ, ಡಿಸಿಸಿ ಬ್ಯಾಂಕ್ ಮುಂಭಾಗದ ‘ಕುವೆಂಪು ಪುತ್ತಳಿ’ಗೆ ಪುಷ್ಪನಮನ ಸಲ್ಲಿಸುವ ಮೂಲಕ ಕವಿಗೋಷ್ಠಿಯ ಅಧ್ಯಕ್ಷರಾದ ಸಾಹಿತಿ ಸುನೀತಾ ಲೋಕೇಶ್ ಅವರು, ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ.ಬಳಿಕ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ಬಹುಭಾಷಾ ಕವಿಗೋಷ್ಠಿಯನ್ನು ಕರ್ನಾಟಕ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕರು, ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್ ಅವರು ವಹಿಸಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಸುನೀತಾ ಲೋಕೇಶ್ ವಹಿಸಲಿದ್ದು, ವಿಶೇಷ ಅತಿಥಿಯಾಗಿ ಕೆ.ಜಿ.ಎಫ್., ಸಲಾರ್ ಚಲನ ಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್ ಆಗಮಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೊಡಗು ರೆಡ್‌ಕ್ರಾಸ್ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ, ನಗರಸಭಾ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ, ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿಗಳಾದ ಕ್ಯಾಪ್ಟನ್ ಬಿದ್ದಂಡ ನಾಣಯ್ಯ(ನಾಣಿ), ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾದ ಪಿ.ಕಲಾವತಿ, ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷರಾದ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಪಾಲ್ಗೊಳ್ಳಲಿದ್ದಾರೆ.‘ಕಾವ್ಯ ಕಲರವ’ ಅನಾವರಣ:

ಬಹುಭಾಷಾ ಕವಿಗೋಷ್ಠಿಗೆ ಆಯ್ಕೆಯಾದ ಕವನಗಳ ಸಂಕಲನ ‘ಕಾವ್ಯ ಕಲರವ’ವನ್ನು ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷರಾದ ಸುನೀತಾ ಲೋಕೇಶ್ ಅವರು ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭ ಡಿ.ಹೆಚ್.ಪುಷ್ಪ ಅವರು ರಚಿಸಿರುವ ‘ಸಂವೇದನೆ’ ಕವನ ಸಂಕಲನ ಮತ್ತು ಶೋಭಾ ರಕ್ಷಿತ್ ಅವರ ‘ಮನಸೆಳೆದ ಹಿಮಗಿರಿ’ ಪ್ರವಾಸ ಕಥನ ಪುಸ್ತಕಗಳನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಕವಿಗೋಷ್ಠಿಯ ಕವನ ವಾಚನದ ಬಳಿಕ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಬಿ.ಆರ್.ಜೋಯಪ್ಪ ಪಾಲ್ಗೊಳ್ಳಲಿದ್ದಾರೆ.77 ಕವನಗಳ ವಾಚನ:

ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಈ ಬಾರಿ 77 ಕವಿಗಳು ರಚಿಸಿರುವ ಕವನಗಳು ಆಯ್ಕೆಯಾಗಿದ್ದು, ಇವುಗಳ ವಾಚನ ನಡೆಯಲಿದೆ. ಈ ಬಾರಿ ಬಹುಭಾಷಾ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಸುಮಾರು 207ಕ್ಕೂ ಅಧಿಕ ಕವಿಗಳು, ಕವಯತ್ರಿಯರು ಹಾಗೂ ಮಕ್ಕಳು ಸ್ವರಚಿತ ಕವನವನ್ನು ಕವಿಗೋಷ್ಠಿ ಸಮಿತಿಗೆ ಕಳುಹಿಸಿಕೊಟ್ಟಿದ್ದು. ಕೊಡಗಿನ ಹಿರಿಯ ಹಾಗೂ ಅನುಭವಿ ಸಾಹಿತಿಗಳ ಸಹಕಾರದೊಂದಿಗೆ 77ಕವನಗಳನ್ನು ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ.ಕನ್ನಡ ಕವನಗಳ ವಾಚನ ಮಾಡುವವರು: ಅಯ್ಯೇಟ್ಟಿ ಶ್ರುತಿ ವೈದ್ಯ, ಡಾ.ಅನುರಾಧಾ ಕುರುಂಜಿ, ಸೌಮ್ಯ ಶೆಟ್ಟಿ ಬಿ.ಬಿ, ದೀಪಿಕಾ ರಾಘವೇಂದ್ರ, ನಿರ್ಮಲ ಪೂವಯ್ಯ, ಅಲ್ಲಾರಂಡ ವಿಠಲ ನಂಜಪ್ಪ, ಲಲಿತ ಎಂ.ಕೆ, ವೇಣುಗೋಪಾಲ್ ಹೆಚ್.ಎಸ್., ಸಂತೋಷ ಹೆಚ್.ಎಸ್., ಪೂರ್ಣಿಮಾ ಜೋಶಿ, ಕುಕ್ಕನೂರು ರೇಷ್ಮ ಮನೋಜ್, ಈರಮಂಡ ಹರಿಣಿ ವಿಜಯ್, ಬಿ.ಆರ್ ರಾಮಚಂದ್ರ ರಾವ್, ಕಡ್ಲೇರ ಆಶಾ ಧರ್ಮಾಪಾಲ್, ಮುಕ್ಕಾಟಿ ಹರಿಣಿ ಗಿರೀಶ್, ಸುಜಾತ ಪಿ.ಈ., ಗಾಯತ್ರಿ ರಾಜೀವ್, ಹೇಮಲತಾ ಪೂರ್ಣಪ್ರಕಾಶ್, ವಿಜಯಶ್ರೀ ಅನಿಲ್ ಕೆದಿಲಾಯ, ಜಲಕಾಳಪ್ಪ, ಮಂಜುನಾಥ್ ಹೆಚ್. ಚಿರಕನಹಳ್ಳಿ, ರಾಧಿಕಾ ವಿಶ್ವನಾಥ್, ಚೇತನ್ ಬಿ.ಎಸ್, ಪುಷ್ಪ ಶಿವರಾಂ ರೈ ಹಾಗೂ ಕಿಗ್ಗಾಲು ಗಿರೀಶ್. ಇಂಗ್ಲಿಷ್ ವಿಭಾಗ: ಮನ ಕೆ.ಆರ್, ಸಂಜನ ಎನ್ ಜೆ, ಜೀವಿತ ಕೆ.ಆರ್, ಡಾ.ವಾಣಿ ರಾಘವೇಂದ್ರ, ಬಿ.ಜಿ. ಅನಂತಶಯನ. ಕೊಡವ ಭಾಷೆ: ಕದ್ದಣಿಯಂಡ ವಂದನ ಚಿಣ್ಣಪ್ಪ, ಆರತಿ ಪೂಣಚ್ಚ ಕುಪ್ಪಂಡ, ಮೈನಾ ಚಂಗಪ್ಪ ಕುಮ್ಮಂಡ, ಬಾದುಮಂಡ ಬೀನಾ ಕಾಳಯ್ಯ, ವೈಲೇಶ ಪಿ.ಎಸ್, ಯಶೋಧ ಪೆರಿಯಂಡ. ಅರೆಭಾಷೆ ವಿಭಾಗ: ಕಟ್ರತನ ಲಲಿತಾ ಅಯ್ಯಣ್ಣ, ಸುಷ್ಮಿತ ಮಧು, ಕಡ್ಲೇರ ಜಯಲಕ್ಷ್ಮಿ, ರಂಜಿತ್ ಮೋದುರ ಕುದುಪಜೆ, ಅನನ್ಯ ಎಚ್ ಸುಬ್ರಮಣ್ಯ, ಜಶ್ಮಿ ಕಲ್ಲುಮುಟ್ಲು. ತುಳು: ವಿನ್ಯಾಸ್ ಕುಲಾಲ್, ಪಿ.ಯು ಸುಂದರ, ಪೂರ್ಣಿಮಾ ಪೆರ್ಲಂಪಾಡಿ, ಚೈತ್ರ ಬೆಳ್ಳರಿಮಾಡು ಆಯ್ಕೆಯಾಗಿದ್ದಾರೆ. ಮಕ್ಕಳ ಕವಿತೆ: ದಿಯಾ ಎಂ. ಗೌಡ, ತೇಜಸ್.ಎಸ್, ಅಂಜಲಿ ಪಿ.ಎಸ್, ಜಸ್ಟಿನ್ ತಿಮ್ಮಯ್ಯ, ರುಷಿಕ.ಕೆ.ಎಂ, ಪ್ರಥಮ್ ಚಿಣ್ಣಪ್ಪ, ಎಸ್.ಪಿ.ಜನ್ಮಿತ, ಎಕಾಕ್ಷ್ ಕೆ.ಸಿ, ತಪಶ ಲೋಕೇಶ್, ಹಮ್ದನ್ ಹೆಚ್.ಎಸ್., ಜಶ್ವತ್ ವೈ.ಟಿ, ತಿಷ್ಯಾ ಪೊನ್ನೆಟ್ಟಿ, ಚಿನ್ಮಯ್, ಪೂರ್ವಿಕ ದೇವಯ್ಯ, ಸಫೀದಾ. ಇನ್ನುಳಿದಂತೆ ಪುಷ್ಪ ಪ್ರಸಾದ್ ಉಡುಪಿ(ಕುಂಬಾರ), ಎಸ್.ಎಂ ರಜನಿ(ಯರವ), ಭಾಗೀರಥಿ ಹುಲಿತಾಳ(ಹವ್ಯಕ), ಸವಿತ ಕರ್ಕೆರ(ಹಿಂದಿ), ಕೂತಂಡ ಪೂಜಾ ಜಗತ್ (ಹಿಂದಿ), ರಶ್ಮಿತಾಸುರೇಶ್ (ಬೈರಬಾಸೆ), ಮಣಿ ವೈ.ಆರ್.(ಯರವ), ಸುನಿತಾ ವಿಶ್ವನಾಥ್(ಕುಂಬಾರ), ಔಹರ್ ಅಲಿ (ಬ್ಯಾರಿ), ಲೇಖಾ ಪ್ರಮೋದ್(ಮಲಯಾಳಂ), ಪವಿತ್ರ ಎಂ. ಜೇನು ಕುರುಬ) , ಕೆ.ಎಂ.ಸುಶೀಲ(ಮಲಯಾಳ), ಅಬ್ದುಲ್ಲ ಮಡಿಕೇರಿ (ಬ್ಯಾರಿ) ಕವನಗಳನ್ನು ವಾಚಿಸಲಿದ್ದಾರೆ. ಚುಟುಕು ಕವನಗಳ ವಿಭಾಗದಲ್ಲಿ ಹೇಮಂತ್ ಪಾರೇರ, ವಿ.ವಿ. ಪೂರ್ಣಿಮಾ ರಾವ್, ಗೌರಮ್ಮ ಮಾದಮ್ಮಯ್ಯ ಕವನಗಳನ್ನು ವಾಚಿಸಲಿದ್ದಾರೆಂದು ಉಜ್ವಲ್ ರಂಜಿತ್ ಮಾಹಿತಿ ನೀಡಿದ್ದಾರೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ