128 ಕಿಮೀ 8 ದಿನಕ್ಕೆ ಕ್ರಮಿಸುವ ಬಿಜೆಪಿ ನಡಿಗೆಗೆ ಕ್ಷಣಗಣನೆ : ಜೆಡಿಎಸ್ ನಾಯಕರು, ಕಾರ್ಯಕರ್ತರ ಜೊತೆ ಜಂಟಿಯಾಗಿ ಪಾದಯಾತ್ರೆ

KannadaprabhaNewsNetwork |  
Published : Aug 03, 2024, 12:32 AM ISTUpdated : Aug 03, 2024, 11:18 AM IST
ಬಿಜೆಪಿ ನಡಿಗೆ | Kannada Prabha

ಸಾರಾಂಶ

‘ಮೈಸೂರು ಚಲೋ’. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯಿದು.ಈ ಪಾದಯಾತ್ರೆಯಲ್ಲಿ ಬೆಂಗಳೂರಿನ ಹೊರವಲಯದಿಂದ ಮೈಸೂರಿಗೆ ಒಟ್ಟು 128 ಕಿ.ಮೀ.ಗಳನ್ನು ಎಂಟು ದಿನಗಳಲ್ಲಿ ಕ್ರಮಿಸಲು ಉದ್ದೇಶಿಸಲಾಗಿದೆ

 ಬೆಂಗಳೂರು :  ‘ಮೈಸೂರು ಚಲೋ’. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯಿದು.ಈ ಪಾದಯಾತ್ರೆಯಲ್ಲಿ ಬೆಂಗಳೂರಿನ ಹೊರವಲಯದಿಂದ ಮೈಸೂರಿಗೆ ಒಟ್ಟು 128 ಕಿ.ಮೀ.ಗಳನ್ನು ಎಂಟು ದಿನಗಳಲ್ಲಿ ಕ್ರಮಿಸಲು ಉದ್ದೇಶಿಸಲಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಜಂಟಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಮೊದಲ ದಿನ ಶನಿವಾರ ಕೆಂಗೇರಿಯಿಂದ ಬಿಡದಿವರೆಗೆ 16 ಕಿ.ಮೀ. ಸಂಚರಿಸಲಿದೆ. ಎರಡನೇ ದಿನ ಆ.4ರಂದು ಬಿಡದಿಯಿಂದ ರಾಮನಗರದವರೆಗೆ 22 ಕಿ.ಮೀ., ಆ.5ರಂದು ರಾಮನಗರದಿಂದ ಚನ್ನಪಟ್ಟಣದವರೆಗೆ 20 ಕಿ.ಮೀ, ಆ.6ರಂದು ಚನ್ನಪಟ್ಟಣದಿಂದ ಮದ್ದೂರಿನವರೆಗೆ 20 ಕಿ.ಮೀ., ಆ.7ರಂದು ಮದ್ದೂರಿನಿಂದ ಮಂಡ್ಯದವರೆಗೆ 16 ಕಿ.ಮೀ., ಆ.8ರಂದು ಮಂಡ್ಯದಿಂದ ಶ್ರೀರಂಗಪಟ್ಟಣದವರೆಗೆ 17 ಹಾಗೂ ಆ.9ರಂದು ಶ್ರೀರಂಗಪಟ್ಟಣದಿಂದ ಮೈಸೂರಿನವರೆಗೆ 10 ಕಿ.ಮೀ.ಸಂಚರಿಸಲಿದೆ.ಕೊನೆಯ ದಿನ ಮೈಸೂರಿನಲ್ಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸುಮಾರು ಏಳು ಕಿ.ಮೀ. ಸಂಚರಿಸಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

-ವಾಸ್ತವ್ಯ ಎಲ್ಲೆಲ್ಲಿ?

ಮೊದಲ ದಿನ ಶನಿವಾರ ಬಿಡದಿಯ ಕನ್ವೆನ್ಷನ್ ಹಾಲ್‌, ಎರಡನೆಯ ದಿನ ಕೆಂಗಲ್‌ನ ಕೆವಿಕೆ ಕನ್ವೆನ್ಷನ್ ಹಾಲ್‌, ಮೂರನೇ ದಿನ ನಿಡಘಟ್ಟದ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್‌, ನಾಲ್ಕನೇ ದಿನ ಮಂಡ್ಯದ ಶಶಿಕಿರಣ್ ಕನ್ವೆನ್ಷನ್ ಹಾಲ್‌. ಐದನೇ ದಿನ ತೂಬಿನಕೆರೆ ಕೆಐಎಡಿಬಿ ಕೈಗಾರಿಕಾ ಪ್ರದೇಶಧ ರೈಟ್ಓ ಕಾಫಿ ಕೆಫೆ, ಆರನೇ ದಿನ ಶ್ರೀರಂಗಪಟ್ಟಣದ ಮಂಜುನಾಥ ಕಲ್ಯಾಣ ಮಂಟಪ, ಏಳನೇ ದಿನ ಮೈಸೂರಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿನಿತ್ಯದ ಕಾರ್ಯಕ್ರಮ ಹೇಗಿರುತ್ತದೆ?

ಬೆಳಗ್ಗೆ 6.30ಕ್ಕೆ ಕಾಫಿ ಅಥವಾ ಚಹಾ, 7.30ಕ್ಕೆ ಉಪಾಹಾರ, 8.45ಕ್ಕೆ ಪಾದಯಾತ್ರೆ ಆರಂಭ. ಮಧ್ಯೆ 10.45ಕ್ಕೆ ಕಾಫಿ ಅಥವಾ ಚಹಾ ಸೇವನೆ. ಮಧ್ಯಾಹ್ನ 12.30ರಿಂದ 3 ಗಂಟೆವರೆಗೆ ಭೋಜನ ಮತ್ತು ವಿಶ್ರಾಂತಿ. ಬಳಿಕ 3.30ಕ್ಕೆ ಮತ್ತೆ ಪಾದಯಾತ್ರೆ ಆರಂಭ. ಸಂಜೆ 5 ಗಂಟೆಗೆ ಕಾಫಿ ಅಥವಾ ಚಹಾ ಸೇವನೆ. ರಾತ್ರಿ 8 ಗಂಟೆಗೆ ಭೋಜನ.

ಎಲ್ಲೆಲ್ಲಿ ಸಾರ್ವಜನಿಕ ಸಭೆಗಳು?

ಮೊದಲ ದಿನ ಶನಿವಾರ ಬೆಳಗ್ಗೆ 9ಗಂಟೆಗೆ ಕೆಂಗೇರಿಯಲ್ಲಿ ಉದ್ಘಾಟನೆ. ಎರಡನೇ ದಿನ ರಾಮನಗರದಲ್ಲಿ ಸಂಜೆ 4.30ಕ್ಕೆ ರಾಮನಗರದಲ್ಲಿ, ಮೂರನೇ ದಿನ ಬೆಳಗ್ಗೆ 10 ಗಂಟೆಗೆ ಚನ್ನಪಟ್ಟಣದಲ್ಲಿ, ನಾಲ್ಕನೇ ದಿನ ಬೆಳಗ್ಗೆ 11 ಗಂಟೆಗೆ ಮದ್ದೂರಿನಲ್ಲಿ, ಐದನೇ ದಿನ ಬೆಳಗ್ಗೆ 11 ಗಂಟೆಗೆ ಮಂಡ್ಯದಲ್ಲಿ, ಆರನೇ ದಿನ ಶ್ರೀರಂಗಟ್ಟಣದಲ್ಲಿ ಸಾರ್ವಜನಿಕ ಸಭೆ ಇರಲಿದೆ. ಏಳನೇ ದಿನ ನಿಗದಿಯಾಗಿಲ್ಲ. ಕೊನೆಯ ದಿನ ಅಂದರೆ ಎಂಟನೇ ದಿನ ಮೈಸೂರಿನಲ್ಲಿ ಸಮಾರೋಪ ಸಮಾರಂಭ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌
ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್‌ ರದ್ದತಿಗಾಗಿ ಹೋರಾಟ