ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ನಗರದ ಪಲಾಡಿಯಂ, ವೃಷಭಾವತಿ,ಸರ್ ಎಂ.ವಿ.ಲೇ ಔಟ್, ರಾಜರಾಜೇಶ್ವರಿ ನಗರ, ಬನಶಂಕರಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಪ್ರದೇಶಗಳಲ್ಲಿ ಜೂ. 20 ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ
ಬೆಂಗಳೂರು : ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ನಗರದ ಪಲಾಡಿಯಂ, ವೃಷಭಾವತಿ,ಸರ್ ಎಂ.ವಿ.ಲೇ ಔಟ್, ರಾಜರಾಜೇಶ್ವರಿ ನಗರ, ಬನಶಂಕರಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಪ್ರದೇಶಗಳಲ್ಲಿ ಜೂ. 20 ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಪಲಾಡಿಯಂ ಕೇಂದ್ರ ವ್ಯಾಪ್ತಿಯ ಸುತ್ತ ಇಂದು ವಿದ್ಯುತ್ ವ್ಯತ್ಯಯ
ಪಲಾಡಿಯಂ ಕೇಂದ್ರ ವ್ಯಾಪ್ತಿಯ ಆರ್.ಬ್ಲಾಕ್, ನಿರ್ಮಾಣ್ ಭವನ್, ಕೆಆರ್ ಡಿಸಿಎಲ್, ಜೆಟ್ ಲಾಗ್, ನಾರಾಯಣ ನೇತ್ರಾಲಯ, ಇಸ್ಕಾನ್ ಟೆಂಪಲ್, ಪಲಾಡಿಯಂ ವಸತಿ ಸಮುಚ್ಛಯ ಮತ್ತು ಸುತ್ತಮುತ್ತಲ ಪ್ರದೇಶಗಳು, ವೃಷಭಾವತಿ ಕೇಂದ್ರ ವ್ಯಾಪ್ತಿಯ ಬಾಪೂಜಿನಗರ, ಗಂಗೊಂಡನಹಳ್ಳಿ, ದೀಪಾಂಜಲಿನಗರ, ಅತ್ತಿಗುಪ್ಪೆ, ಪಂತರಪಾಳ್ಯ, ಕೆಂಚೇನಹಳ್ಳಿ, ರಾಜರಾಜೇಶ್ವರಿನಗರ, ಬೆಟ್ಟನಪಾಳ್ಯ, ಐಡಿಯಲ್ ಹೋಮ್ಸ್, ಬಿಎಚ್ ಇಎಲ್ ಲೇ ಔಟ್, ಜ್ಞಾನಭಾರತಿ, ವಿನಾಯಕ ಲೇ ಔಟ್,ಕೆಂಗೇರಿ ಉಪನಗರ, ಜ್ಞಾನಭಾರತಿ ಲೇ ಔಟ್, ಬಂಡೇಮಠ, ಮೈಲಸಂದ್ರ, ವಿಶ್ವೇಶ್ವರಯ್ಯ ಲೇ ಔಟ್, ಆರ್.ಆರ್.ಲೇ ಔಟ್, ಕೆಂಗುಂಟೆ, ಕೊಡಿಗೇಹಳ್ಳಿ, ಮುದ್ದಿನಪಾಳ್ಯ, ಮರಿಯಪ್ಪನಪಾಳ್ಯ, ಸುಭಾಷ್ ನಗರ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ವಿದ್ಯಾಪೀಠ, ತ್ಯಾಗರಾಜನಗರ, ಹೊಸಕೆರೆಹಳ್ಳಿ, ನಾಗೇಂದ್ರಬ್ಲಾಕ್, ಆವಲಹಳ್ಳಿ ಹಾಗೂ ಮೈಸೂರು ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಸರ್ ಎಂವಿ ಲೇ ಔಟ್ ಕೇಂದ್ರ ವ್ಯಾಪ್ತಿ
ಸರ್ ಎಂವಿ ಲೇ ಔಟ್ ಕೇಂದ್ರ ವ್ಯಾಪ್ತಿಯ ಉಲ್ಲಾಳ ಮೈನ್ ರೋಡ್, ಪ್ರೆಸ್ ಲೇಔಟ್, ರೈಲ್ವೆ ಲೇ ಔಟ್, ಜ್ಞಾನಜ್ಯೋತಿನಗರ, ಮುನೇಶ್ವರ ನಗರ, ಎಂಪಿಎಂ ಲೇ ಔಟ್, ಐಟಿಐ ಲೇ ಔಟ್, ಕೆಂಗುಂಟೆ, ಮಲ್ಲತ್ತಹಳ್ಳಿ, ಡಿಗ್ರೂಪ್ ಲೇ ಔಟ್, ದೊಡ್ಡಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯತ್ರಿ ಲೇ ಔಟ್, ಸೊನ್ನೇನಹಳ್ಳಿ, ಅಮ್ಮ ಆಶ್ರಮ, ಜ್ಞಾನಭಾರತಿ ಲೇ ಔಟ್, ಆರ್ ಆರ್ ಲೇಔಟ್,ಅಂಜನಾನಗರ, ರತ್ನಾನಗರ, ಕೊಡಿಗೇಹಳ್ಳಿ, ಕನ್ನಲಿ, ದೊಡ್ಡಗೊಲ್ಲರಹಟ್ಟಿ, ಸರ್ ಎಂವಿ ಲೇ ಔಟ್, 1 ರಿಂದ 9ನೇ ಬ್ಲಾಕ್ ವರೆಗೆ, ಹೇರೋಹಳ್ಳಿ, ಬಿಇಎಲ್ ಬಡಾವಣೆ, ಮಂಗನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ರಾಜರಾಜೇಶ್ವರಿ ವಿತರಣಾ ಕೇಂದ್ರ ವ್ಯಾಪ್ತಿಯ ಪಟ್ಟಣಗೆರೆ, ಕೃಷ್ಣಗಾರ್ಡನ್, ಬಿಎಚ್ಇಎಲ್ ಲೇ ಔಟ್, ಭೂಮಿಕ ಲೇ ಔಟ್, ಬಿಇಎಂಎಲ್, 1, 2 ಮತ್ತು 10ನೇ ಹಂತ, ಮೈಲಸಂದ್ರ, ಉತ್ತರಹಳ್ಳಿ, ಮೈನ್ ರೋಡ್, ಕಾನ್ ಕಾರ್ಡ್ ಲೇ ಔಟ್, ಓಂಕಾರನಗರ, ಕೋಡಿಪಾಳ್ಯ, ಕೋನಸಂದ್ರ, ಹೆಮ್ಮಿಗೆಪುರ, ಚೆಟ್ಟಿಪಾಳ್ಯ, ಚೂಡೇನಪುರ, ಕಾಟನಾಯಕನಪುರ, ಬಿಜಿಎಸ್ ಹಾಸ್ಪಿಟಲ್, ಗಾಣಕಲ್ಲು, ಶ್ರೀನಿವಾಸಪುರ ಕಾಲೋನಿ, ಎಂ.ಎಲ್.ಲೇ ಔಟ್, ಬಿಡಿಎ ಲೇ ಔಟ್, ಸಚ್ಚಿದಾನಗರ, ಒಲಂಪಸ್ ಆಸ್ಪತ್ರೆ, ಹಲಗೇ ವಡೇರಹಳ್ಳಿ, ದ್ವಾರಕನಗರ, ಐಡಿಯಲ್ ಹೋಮ್ಸ್, ಸ್ವಾಮಿ ವಿವೇಕಾನಗರ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಬನಶಂಕರಿ ವಿದ್ಯುತ್ ಕೇಂದ್ರ ವ್ಯಾಪ್ತಿಯ ಹನುಮಂತನಗರ, ಗವಿಪುರಂ, ಬಸಪ್ಪ ಲೇ ಔಟ್, ಶ್ರೀನಗರ, ಬುಲ್ ಟೆಂಪಲ್ ಮತ್ತು ಮೌಂಟ್ ಜಾಯ್ ರಸ್ತೆ, ಕೆ.ಜಿ.ನಗರ, ಚಾಮರಾಜಪೇಟೆ, ಟೆಲಿಫೋನ್ ಎಕ್ಸ್ ಚೇಂಜ್, ಶ್ರೀನಗರ, ಪೈಪ್ ಲೈನ್, ಏರಿಯಾ, ಗಿರಿನಗರ 2ನೇ ಹಂತ, ವಿದ್ಯಾಪೀಠ, ಸಿಡಿಬೆಡ್, ತ್ಯಾಗರಾಜನಗರ, ಬಿಎಸ್ ಕೆ 1ನೇ ಹಂತ, ಎನ್.ಆರ್.ಕಾಲೋನಿ, ಹೊಸಕೆರೆಹಳ್ಳಿ, ನಾಗೇಂದ್ರ ಬ್ಲಾಕ್, ಮುನೇಶ್ವರಿ ಬ್ಲಾಕ್, ಆವಲಹಳ್ಳಿ, ಕೆ.ಆರ್.ಆಸ್ಪತ್ರೆ ರಸ್ತೆ, ಬಿಡಿಎ ಲೇ ಔಟ್, ಪಿಇಎಸ್ ಕಾಲೇಜು, ಎನ್.ಟಿ.ವೈ ಲೇ ಔಟ್, ಸುಂದರ್, ಇಂಡಸ್ಟ್ರಿಯಲ್ ಲೇ ಔಟ್, ಬ್ಯಾಟರಾಯನಪುರ, ಟೆಲಿಕಾಂ ಲೇ ಔಟ್, ಕೆ.ಆರ್.ರಸ್ತೆ, ಕನಕಪುರ ರಸ್ತೆ, ಬಸವನಗುಡಿ, ಶಾಸ್ತ್ರಿನಗರ, ಆವಲಹಳ್ಳಿಗಳಲ್ಲಿ ವಿದ್ಯುತ್ ಇರುವುದಿಲ್ಲ ಬೆ.ವಿ.ಕಂ ಬೆಂಗಳೂರು ಪಶ್ಚಿಮ ವಿಭಾಗದ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.
