10ರಂದು ಕಾರ್ಕಳದಲ್ಲಿ ‘ನಮನ’ ಚಿತ್ರಕಲಾ ಪ್ರದರ್ಶನ

KannadaprabhaNewsNetwork |  
Published : Apr 07, 2026, 02:45 AM IST
ಕಾರ್ಕಳದಲ್ಲಿ ‘ನಮನ’ ಚಿತ್ರಕಲಾ ಪ್ರದರ್ಶನ | Kannada Prabha

ಸಾರಾಂಶ

ಸ್ಥಳೀಯ ಪರಿಸರ, ಮಣ್ಣಿನ ಸಾರ ಹಾಗೂ ಸಂಸ್ಕೃತಿಯ ಪ್ರತೀಕಗಳನ್ನು ಬಿಂಬಿಸುವ ‘ನಮನ’ ಚಿತ್ರಕಲಾ ಪ್ರದರ್ಶನ ಏ.10ರಂದು ಸಂಜೆ 4.30ಕ್ಕೆ ಬೈಲೂರು ಹಾಲಿನ ಡೈರಿ ಮೇಲ್ಭಾಗದಲ್ಲಿರುವ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಚಿತ್ರ ಕಲಾವಿದ ಹರೀಶ್ ಸಾಗ ಹೇಳಿದರು.

ಕಾರ್ಕಳ: ಸ್ಥಳೀಯ ಪರಿಸರ, ಮಣ್ಣಿನ ಸಾರ ಹಾಗೂ ಸಂಸ್ಕೃತಿಯ ಪ್ರತೀಕಗಳನ್ನು ಬಿಂಬಿಸುವ ‘ನಮನ’ ಚಿತ್ರಕಲಾ ಪ್ರದರ್ಶನ ಏ.10ರಂದು ಸಂಜೆ 4.30ಕ್ಕೆ ಬೈಲೂರು ಹಾಲಿನ ಡೈರಿ ಮೇಲ್ಭಾಗದಲ್ಲಿರುವ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಚಿತ್ರ ಕಲಾವಿದ ಹರೀಶ್ ಸಾಗ ಹೇಳಿದರು.ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್‍ಯಕ್ರಮದಲ್ಲಿ ಶಾಸಕ ವಿ. ಸುನೀಲ್ ಕುಮಾರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ತ್ರಿವರ್ಣ ಕಲಾ ತರಗತಿಯ 7ರಿಂದ 18 ವರ್ಷದೊಳಗಿನ ಆಯ್ದ 30 ವಿದ್ಯಾರ್ಥಿಗಳಿಂದ ರಚಿಸಲಾದ 33 ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಪಂಚಗಂಗಾವಳಿ, ಕಂಬಳ, ಜಾತ್ರೆ, ತೈಯಂ, ಬೇಸಾಯ, ಕೋಟಿಲಿಂಗೇಶ್ವರ ಮೊದಲಾದ ಸ್ಥಳೀಯ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡ ಕಲಾಕೃತಿಗಳು ವಿಶೇಷ ಆಕರ್ಷಣೆಯಾಗಿವೆ ಎಂದರು.

ಸಾಯಿರಾಂ ಸುರೇಶ್ ಮಾತನಾಡಿ, ಏ. 11, 12ರಂದು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಮತದಾನದ ಮೂಲಕ ಅತ್ಯುತ್ತಮ ಕಲಾಕೃತಿಗೆ ಬಹುಮಾನವನ್ನು ನೀಡಲಾಗುತ್ತದೆ. ಇದು ಕಲಾವಿದ ಹರೀಶ್ ಸಾಗಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ 31ನೇ ಕಲಾ ಪ್ರದರ್ಶನವಾಗಿದೆ ಎಂದರು.

ಕರಾವಳಿ ಯೂತ್ ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ, ಸುನೀತಾ ದಿನೇಶ್ ಶೆಟ್ಟಿ, ಶಾಲಿನಿ ಸುರೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಸೂಪರ್ 36’, ‘ಸ್ಟೇಟ್ ಟಾಪರ್ಸ್ ’ ಬೃಹತ್ ಯೋಜನೆ
ಸಂಘಟನೆಗಳಿಂದ ಸ್ಥಿರವಾದ ಯಕ್ಷಗಾನ ಕಲೆ: ಎಡನೀರು ಶ್ರೀ