ನೇಹಾ ಕೊಲೆ ಆರೋಪಿ ಗಲ್ಲಿಗೇರಿಸಲು ಆಗ್ರಹ

KannadaprabhaNewsNetwork |  
Published : Apr 20, 2024, 01:13 AM IST
ನೇಹಾ ಕೊಲೆ ಖಂಡಿಸಿ ಪ್ರತಿಭಟನೆ ಮನವಿ | Kannada Prabha

ಸಾರಾಂಶ

ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಫಯಾಜ್‌ ಕೊಲೆ ಮಾಡಿದ್ದಾನೆ.

ಕನ್ನಡಪ್ರಭ ರಬಕವಿ - ಬನಹಟ್ಟಿ

ಹುಬ್ಬಳಿ ನಗರದ ಬಿವಿಬಿ ಶಿಕ್ಷಣ ಸಂಸ್ಥೆಯಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳು, ಜಂಗಮ ಸಮುದಾಯದವರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.

ರಬಕವಿ - ಬನಹಟ್ಟಿ ತಾಲೂಕಿನ ಜಂಗಮ ಸಮುದಾಯದ ಬಾಂಧವರು ನೇಹಾ ಕೊಲೆ ಖಂಡಿಸಿ ಹಿಂದೂಪರ ಸಂಘಟನೆಗಳ ಬೆಂಬಲದಲ್ಲಿ ಸಾಮೂಹಿಕ ಪ್ರತಿಭಟನೆ ಮಾಡಿ ರಬಕವಿ-ಬನಹಟ್ಟಿ ತಾಲೂಕು ತಹಸೀಲ್ದಾರ ಗಿರಿಶ್ ಸ್ವಾದಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಫಯಾಜ್‌ ಕೊಲೆ ಮಾಡಿದ್ದಾನೆ. ಲವ್‌ ಜಿಹಾದ್‌ಗೆ ಮುಗ್ದ ಹೆಣ್ಣು ಮಗಳು ಬಲಿಯಾಗಿದ್ದಾಳೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ರಾಜ್ಯ ಸರ್ಕಾರದ ತುಷ್ಟೀಕರಣ, ಮುಸ್ಲಿಂ ಓಲೈಕೆ ನೀತಿ, ಪರೋಕ್ಷ ಬೆಂಬಲದಿಂದ ಇಂತಹ ಕೃತ್ಯಗಳು ನಡೆಯುತ್ತಿದ್ದು ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಿ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ಗಲ್ಲಿಗೆರಿಸಿದರೆ ಮಾತ್ರ ಇಂಥಹ ಹೇಯ ಕೃತ್ಯಗಳು ನಿಲ್ಲಿಸಲು ಸಾಧ್ಯ ಎಂದು ಜಂಗಮ ಸಮುದಾಯದ ಮುಖಂಡ ಗುರುಪಾದಯ್ಯ ಅಮ್ಮಣಗಿಮಠ ಆಕ್ರೋಶ ಹೊರಹಾಕಿದರು.

ಹೆತ್ತ ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕು. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಕಾರ್ಯವು ಪ್ರಾಮಾಣಿಕವಾಗಿ ಬೆಂಬಲಿತವಾಗಿರಬೇಕು. ಇದರಲ್ಲಿ ಏನಾದರು ಕುಂಟಿತ ಕಂಡುಬಂದರೆ ರಾಜ್ಯದ ಎಲ್ಲ ಜಂಗಮ ಸಮುದಾಯ ಹಾಗು ಹಿಂದುಪರ ಸಂಘಟನೆಗಳ ಬೆಂಬಲದಲ್ಲಿ ಬೀದಿಗಿಳಿದು ಭೀಕರ ಹೊರಾಟ ಮಾಡಬೇಕಾದಿತ್ತು ಎಂದು ಎಚ್ಚರಿಕೆ ನೀಡಿದರು.

ರ-ಬ ನಗರಸಭಾ ಮಾಜಿ ಅಧ್ಯಕ್ಷ ಸಂಜು ತೆಗ್ಗಿ ಮಾತನಾಡಿ, ಪೊಲೀಸ್‌ ಇಲಾಖೆಯು ಯಾವುದೆ ರಾಜಕೀಯದ ಒಳಸಂಚಿನ ಒತ್ತಡಕ್ಕೆ ಮಣಿಯಬಾರದು. ಮೃತ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಈ ಕೊಲೆಯ ಹಿಂದೆ ಇನ್ನೂ ನಾಲ್ವರ ಕೈವಾಡ ಇದೆ ಎನ್ನುವ ಸುದ್ದಿ ಹಬ್ಬುತ್ತಿದೆ. ಅವರನ್ನು ಸಹ ಪತ್ತೆಮಾಡಿ ಜೈಲಿಗೆ ಅಟ್ಟಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಹಿಂದೂಪರ ಸಂಘಟನೆಯ ಮುಖಂಡ ನಂದು ಗಾಯಕವಾಡ ಮಾತನಾಡಿ, ಕೊಲೆ ಆರೋಪಿಯನ್ನು ಎನ್‌ಕೌಂಟರ್‌ ಮಾಡಬೇಕು. ಇದರಿಂದ ಸಮಾಜದಲ್ಲಿ ಸದ್ಯ ಆವರಿಸಿರುವ ಆತಂಕದ ಛಾಯೆ ಕಡಿಮೆಯಾಗುತ್ತದೆ. ಲವ್-ಜಿಹಾದ್‌ ಹೆಸರಿನಲ್ಲಿ ಹಿಂದು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು, ಕೊಲೆಗಳು ಹೆಚ್ಚುತ್ತಿವೆ. ನಡೆಯುತ್ತಿವೆ. ಈ ಬಗ್ಗೆ ಹಿಂದೂಪರ ಸಂಘಟಣೆಗಳು ಎಚ್ಚೆತ್ತುಕೊಂಡಿವೆ. ಇದು ಹೀಗೆ ಮುಂದುವರೆದರೆ ಲವ್ - ಜಿಹಾದಿಗಳನ್ನು ದೇಶದಿಂದ ಗಡಿಪಾರು ಮಾಡಲು ಉಗ್ರವಾದ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬನಹಟ್ಟಿ ಜಂಗಮ ಸಮುದಾಯದ ಮುಖಂಡ ದೊಡಯ್ಯ ಲಿಂಗದ್, ದುಂಡಯ್ಯ ಕಾಡದೇವರ, ಗಂಗಯ್ಯ ಹಿರೇಮಠ. ಸಂಜು ಅಮ್ಮಣಗಿಮಠ, ಮಾದೇವ ಮಠಪತಿ, ವಿವೇಕಾನಂದ ಹಿರೇಮಠ, ರಾಜು ಮಠಪತಿ, ಈಶ್ವರ ಕಾಡದೇವರ್‌, ವೀರಭಧ್ರ ಶಾಸ್ತ್ರೀ ಹಿರೇಮಠ, ಶೀವಾನಂದ ಮಠದ, ರಾಜು ಮಠದ, ಹಾಗು ಎಬಿವಿಪಿ ಮುಖಂಡ ಹೇಮಂತ್ ಮಳಲಿ, ಶ್ರೀರಾಮ ಸೇನಾ ಮುಖಂಡ ಯಮನಪ್ಪಾ ಕೋರಿ, ಹಿಂದು ಜಾಗರಣ ಮುಖಂಡ ಭಿಮ್ಸಿ ಆಲ್ಗೋಂಡ, ಬಸವರಾಜ್ ಮನ್ಮಿ, ಶಿವಾನಂದ ಕಾಗಿ, ಅಶೋಕ ರಾವಳ ಹಿಂದುಪರ ಸಂಘಟಿತ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ