ಇಂದು ನಾಳೆ ‘ಪಂಚಮಪದ’, ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ

KannadaprabhaNewsNetwork |  
Published : Sep 20, 2024, 01:35 AM IST
19ಎಚ್ಎಸ್ಎನ್15 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಚಲಂ . | Kannada Prabha

ಸಾರಾಂಶ

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೆ.೨೦ ಮತ್ತು ೨೧ ರಂದು ಎರಡು ದಿನಗಳ ಕಾಲ ಪಂಚಮಪದ ಮತ್ತು ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನಗೊಳ್ಳಲಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಣೆ ಮಾಡುವುದರ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸುವಂತೆ ರಂಗಕರ್ಮಿ ಚಲಂ ಮನವಿ ಮಾಡಿದರು.

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೆ.೨೦ ಮತ್ತು ೨೧ ರಂದು ಎರಡು ದಿನಗಳ ಕಾಲ ಪಂಚಮಪದ ಮತ್ತು ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನಗೊಳ್ಳಲಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಣೆ ಮಾಡುವುದರ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸುವಂತೆ ರಂಗಕರ್ಮಿ ಚಲಂ ಮನವಿ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನೆಲದನಿ ಸಾಂಸ್ಕೃತಿಕ ಸಂಘ, ದಿಂಡಗೂರು ಮತ್ತು ಮಾಯ್ಕ ಟ್ರಸ್ಟ್ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಎರಡು ದಿನದ ನಾಟಕೋತ್ಸವದಲ್ಲಿ ಸೆ. ೨೧ರ ಶುಕ್ರವಾರ ಪಂಚಮಪದ ನಾಟಕವು ಸಂಜೆ ೬ ಗಂಟೆಗೆ ಪ್ರಾರಂಭವಾಗಲಿದೆ. ಉದ್ಘಾಟನೆಯನ್ನು ರಂಗ ನಿರ್ದೇಶಕ ಹಾಗೂ ಹೋರಾಟಗಾರ ಮೈಸೂರಿನ ಎಚ್.ಜನಾರ್ಧನ್ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪಾಲ್ಗೊಳ್ಳುವರು. ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಪ್ರಾಸ್ತಾವಿಕ ನುಡಿ ನುಡಿಯಲಿದ್ದಾರೆ ಹಾಗೂ ಡಿಎಸ್‌ಎಸ್ ಚಳುವಳಿಯ ಜಿಲ್ಲೆಯ ಮೊದಲ ತಲೆಮಾರಿನ ಹಿರಿಯ ದಲಿತ ಮುಖಂಡರು ಮತ್ತು ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಒಬ್ಬರಿಗೆ ಟಿಕೆಟ್ ದರ ೧೦೦ ರು. ನಿಗದಿ ಮಾಡಲಾಗಿದೆ. ೨೦೦ ರು. ನೀಡಿ ಎರಡು ದಿನದ ಎರಡು ಟಿಕೆಟ್ ಪಡೆಯಬಹುದು. ನಾಟಕ ಪ್ರದರ್ಶನಕ್ಕೆ ಟಿಕೆಟ್ ಪಡೆಯಲಿಚ್ಚಿಸುವವರು ಹಾಸನಾಂಬ ಕಲಾ ಕ್ಷೇತ್ರದ ಕೌಂಟರ್ ನಲ್ಲಿ ಪಡೆಯಬಹುದಾಗಿದ್ದು, ಟಿಕೆಟ್ ಸಿಗದಿದ್ದರೆ ಮತ್ತು ಹೆಚ್ಚಿನ ಮಾಹಿತಿ ಪಡೆಯಲು ೮೭೪೭೦೪೩೪೮೫ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ರಂಗ ನಟರಾದ ಸಂತೋಷ್ ದಿಂಡಗೂರು, ವಿನೀತ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಗಾಲಿ ಕಾರ್ಖಾನೆ ಉದ್ಯೋಗಿಗೆಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್
ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ