ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಸಂವಿಧಾನದಲ್ಲಿ ಮತದಾನದ ಹಕ್ಕು ನೀಡಲಾಗಿದೆ. ಜವಾಬ್ದಾರಿಯಿಂದ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಇ ದನ್ನು ಬಳಸಬೇಕೇ ಹೊರತು ಮತವನ್ನು ಮಾರಾಟ ಮಾಡಿಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ನಗರದ ತಾಪಂ ಕಚೇರಿಯ ಸಾಮರ್ಥ್ಯ ಸೌಧದಲ್ಲಿ ನಡೆದ ೯೪ ಸಿಆರ್ ಹಕ್ಕು ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಚುನಾವಣೆಗಳು ಬರುತ್ತವೆ ಹೋಗುತ್ತವೆ ಯಾರಾದರೂ ಎಂಎಲ್‌ಎಗಳಾಗಿ ಆಯ್ಕೆಯಾಗಬಹುದು. ಆದರೆ ನಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಯಾರು ಕ್ರಮ ವಹಿಸುತ್ತಾರೆ ಎಂಬುದನ್ನು ಅರಿಯಬೇಕು ಎಂದರು.
ಸಮಾಜದಲ್ಲಿ ಅನ್ಯೋನ್ಯತೆ ಮುಖ್ಯನಮ್ಮ ಗ್ರಾಮಗಳಿಗೆ ರಸ್ತೆ, ನೀರು ಹಾಕಿಸಿದವರಾರೂ, ಗ್ರಾಣಗಳಿಗೆ ಸೌಲಬ್ಯ ಕಲ್ಪಿಸಿದವರು ಯಾರು ಎಂಬುದನ್ನ ಗ್ರಾಮೀಣು ಅರಿತುಕೊಳ್ಳಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿ ಮತ ಚಲಾವಣೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಜಾತಿ ಧರ್ಮಗಳು ಹೊಟ್ಟೆಗೆ ಊಟವನ್ನು ನೀಡುವುದಿಲ್ಲ. ಸಮಾಜದಲ್ಲಿ ನಾವು ಅನ್ಯೋನ್ಯವಾಗಿ ಕೂಡಿ ಅಣ್ಣ ತಮ್ಮಂದಿರಂತೆ ಬಾಳಬೇಕು ಹಾಗೂ ಬೇರೆಯವರಿಗೆ ಗೌರವ ನೀಡಬೇಕು, ಅವರ ನಂಬಿಕೆಗಳಿಗೆ ಗೌರವ ನೀಡುವುದರ ಮೂಲಕ ಮತ್ತೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಾಣಿದಾಗ ನಾವು ಸುಖಮಯ ಜೀವನ ನಡೆಸಬಹುದಾಗಿದೆ ಎಂದರು.
ಗ್ರಾಪಂ ಸದಸ್ಯನಿಂದ ಹಿಡಿದು ಜಿ.ಪಂ. ತಾ.ಪಂ. ಪ್ರಧಾನಿಮಂತ್ರಿಗಳ ಅಧಿಕಾರಕ್ಕೂ ಒಂದು ಇತಿಮಿತಿ ಇರುತ್ತದೆ. ಅದರ ವ್ಯಾಪ್ತಿಯಲ್ಲೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪ್ರಾಮಾಣಿಕವಾಗಿ ತಾಲೂಕಿನಾದ್ಯಂತ ಉತ್ತಮ ಕೆಲಸವನ್ನು ನಿರ್ವಹಿಸಿ ಎಲ್ಲರಿಗೂ ಒಳಿತಾಗಬೇಕೆಂಬ ಮಹಾದಾಸೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿಗೆ ವಿವಿಧ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಲಾಗಿದೆ. ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.ಒಳಾಂಗಣ ಕ್ರೀಡಾಂಗಣ ನಿರ್ಮಾಣ
ತಾಲೂಕಿನಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು. ೨೦೦೫ರಲ್ಲೇ ಒಳಾಂಗಣ ಕ್ರೀಡಾಂಗಣದ ಕನಸು ಕಂಡಿದ್ದೆ, ಕೆಲವರು ಇದಕ್ಕೂ ಅಡ್ಡಿಪಡಿಸಿದರು. ಕಡೆಗೆ ೧೦ ವರ್ಷ ನಾನು ಇರಲಿಲ್ಲ, ಪುನಶ್ಚೇತನ ಮಾಡಲಿಲ್ಲ, ತಾಪಂ ಕಚೇರಿಯ ಆವರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಬಳಸಿ ಸುಸಜ್ಜಿತ ಸಭಾಂಗಣವನ್ನು ಈ ಸಾಮರ್ಥ್ಯ ಸೌಧ ಮೇಲೆ ನಿರ್ಮಾಣ ಮಾಡಲಾಗುವುದು ಎಂದರು.ಚಿನ್ನಸಂದ್ರ ಬಳಿ ಕೋರ್ಟ್ ಕಾಂಪ್ಲೆಕ್ಸ್
ಪರಿವೀಕ್ಷಣಾ ಮಂದಿರ ೧೦ ಕೋಟಿಯಲ್ಲಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಬೇರೆಡೆ ಸ್ಥಳ ಗುರುತಿಸಲಾಗಿದೆ ಈ ಪರಿವೀಕ್ಷಣಾ ಮಂದಿರವನ್ನು ನಗರಸಭೆಗೆ ನೀಡಲು ಮುಂದಾಗಿದ್ದು ಅದೇ ರೀತಿ ೧೫ ಎಕರೆ ವಿಸ್ತೀರ್ಣದಲ್ಲಿ ಚಿನ್ನಸಂದ್ರದ ಬಳಿ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು ಕೋರ್ಟ್ ಜಾಗವನ್ನು ತಾಲೂಕು ಕಚೇರಿಗೆ ತೆಗೆದುಕೊಳ್ಳಬಹುದು, ಆಗ ಎಲ್ಲ ಕಚೇರಿಗಳನ್ನು ಒಂದೆಡೆ ತಂದರೆ ಜನರಿಗೆ ಅನುಕೂಲವಾಗುತ್ತದೆಂಬ ಉದ್ದೇಶದಿಂದ ಮಾಡಲಾಗುತ್ತಿದ್ದು ಇದಕ್ಕೆ ಸಮಯಾವಕಾಶ ಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ಕೃಷಿಕ ಸಮಾಜದ ಜಯರಾಮರೆಡ್ಡಿ, ಉನ್ನತ ಮಟ್ಟದ ಅಧಿಕಾರಿಗಳು, ಕುರುಟಹಳ್ಳಿ ಕೃಷ್ಣಮೂರ್ತಿ, ಎಜಾಜ್, ಬುಕ್ಕನಹಳ್ಳಿ ಶಿವಣ್ಣ, ಟಿಎಪಿಎಂಸಿ ಅಧ್ಯಕ್ಷ ನಾಗೇಶ್, ಮಸಲಹಳ್ಳಿ ಶಿವಾರೆಡ್ಡಿ ಮುಖಂಡರು ಉಪಸ್ಥಿತರಿದ್ದರು.