ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಸ್ನಾನಘಟ್ಟದ ಕಾವೇರಿ ನದಿ ತಡದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ. ಶಂಕರ್ ಬಾಬು ನೇತೃತ್ವದಲ್ಲಿ ಎರಡು ಮಂಡಳಿಗಳ ಪಿಂಡ ಹಾಗು ತರ್ಪಣವನ್ನು ಕಾವೇರಿ ನದಿಗೆ ಬಿಟ್ಟು ಆಕ್ರೋಶ ಹೊರ ಹಾಕಿದರು.
ನಂತರ ಶಂಕರ್ ಬಾಬು ಮಾತನಾಡಿ, ತಮಿಳುನಾಡಿಗೆ ಪದೇ ಪದೇ ನೀರು ಹರಿಸುವಂತೆ ಆದೇಶಿಸುವ ಮೂಲಕ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಹಿಂದಿನಿಂದಲೂ ನಿರಂತರ ಅನ್ಯಾಯ ಮಾಡಿವೆ. ರಾಜ್ಯದ ಪಾಲಿಗೆ ಸತ್ತಿವೆ. ಹೀಗಾಗಿ ಎರಡು ಮಂಡಳಿಗಳ ಪಿಂಡ ಹಾಗೂ ತರ್ಪಣವನ್ನು ಕಾವೇರಿ ಬಿಡಲಾಗಿದೆ ಎಂದರು.ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸುವುದಿಲ್ಲ ಎಂಬ ದಿ.ಬಂಗಾರಪ್ಪ ಅವರ ರೀತಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಿಲುವು ಕೈಗೊಳ್ಳಬೇಕು. ಸುರ್ಪೀಂ ಕೋರ್ಟ್‌ಗೆ ಮೋರೆ ಹೋಗಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ರೈತ ಹೋರಾಟಗಾರರಿಂದ ವಿನೂತನ ಪ್ರತಿಭಟನೆ
ನಗರದ ಜಯಚಾಮರಾಜ ಒಡೆಯರ್ ವೃತದಲ್ಲಿ ಸೇರಿದ ಪ್ರತಿಭಟನಕಾರಾರು, 20 ಕೆಜಿ ಹುರುಳಿ ಕಾಳು ಬೇಯಿಸಿ ಒಗ್ಗರಣೆ ಹಾಕಿಕೊಂಡು ಅನ್ನದಾತರು ಬದುಕಿಗೆ ಹುಳ್ಳಿಕಾಳು ತಿನ್ನುವ ಮೂಲ ಪರಿಸ್ಥಿತಿಗೆ ಮಂಡ್ಯವನ್ನು ತರುತ್ತಿದ್ದಾರೆ ಎಂದು ಕಿಡಿಕಾರಿದರು. ತಮಿಳುನಾಡಿಗೆನೀರು ಬಿಟ್ಟು ಅನ್ನ ಬೆಳೆಯುವ ಮಂಡ್ಯ ರೈತರು ಹುರುಳಿಕಾಳು ಬೆಳೆಯುವ ಸ್ಥಿತಿಯನ್ನು ಸರ್ಕಾರಗಳು, ಕಾವೇರಿ ನದಿ ನೀರು ಪ್ರಾಧಿಕಾರ ಮತ್ತು ಸಮಿತಿಗಳು ನಿರ್ಮಾಣ ಮಾಡುತ್ತಿವೆ ಎಂದು ಎಚ್ಚರಿಸಿದರು.ನಂತರ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿಗಾಗಿ ಅಖಂಡ ಕರ್ನಾಟಕ ಬಂದಗಾಗಿ ಮಂಡ್ಯ ವರ್ತಕರು ಸಹಕಾರ ನೀಡುವಂತೆ ಕೋರಿದರು.