- ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ತುರ್ವಿಹಾಳ

KannadaprabhaNewsNetwork |  
Published : Sep 04, 2024, 01:47 AM IST
03-ಎಂ ಎಸ್ ಕೆ -01 | Kannada Prabha

ಸಾರಾಂಶ

ಮಸ್ಕಿ ತಾಲೂಕಿನ ಸಾನಬಾಳ್ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು

ಕನ್ನಡಪ್ರಭ ವಾರ್ತೆ ಮಸ್ಕಿ

ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾನಬಾಳ ಗ್ರಾಮದಲ್ಲಿ ₹3 ಕೋಟಿ ವೆಚ್ಚದಲ್ಲಿ ಸಾನಬಾಳ-ಮಸ್ಕಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಹಾಲಾಪೂರ ಗ್ರಾಮದಿಂದ ಶಂಕರನಗರ ಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ₹2 ಕೋಟಿ ಹಾಗೂ ಬುದ್ದಿನ್ನಿ ಮತ್ತು ಅಂಕುಶದೊಡ್ಡಿ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹66 ಲಕ್ಷ ಅನುದಾನ ನೀಡಲಾಗಿದ್ದು ಪಿಎಂಜಿಎಸ್‌ವೈ ಸಂಸ್ಥೆ ಮೂಲಕ ಟೆಂಡರ್ ಆಗಿದೆ. ಒಟ್ಟು ₹5.60 ಕೋಟಿ ವೆಚ್ಚದ ಕಾಮಗಾರಿ ಗುತ್ತಿಗೆಯನ್ನು ಬಸವರಾಜ ಮರಕಮದಿನ್ನಿ, ಜಕ್ಕರಾಯ ಸಿಂಧನೂರಗೆ ವಹಿಸಲಾಗಿದೆ. ಎಲ್ಲಾ ಕಾಮಗಾರಿಗೆ ಇಂದೇ ಚಾಲನೆ ನೀಡಲಾಗಿದೆ ಎಂದರು.

ಮುಖಂಡ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ವೆಂಕಟರೆಡ್ಡಿ ಹಾಲಾಪೂರ, ಆದನಗೌಡ ದಳಪತಿ, ನಿರುಪಾದೆಪ್ಪ ವಕೀಲ, ಬಲವಂತರಾಯ ವಟಗಲ್. ಕರಿಯಪ್ಪ ಹಾಲಾಪೂರು, ಗುತ್ತಿಗೆದಾರ ಜಕ್ಕರಾಯ ಸಿಂಧನೂರು. ಬಸವರಾಜ ಮರಕಮದಿನ್ನಿ, ಎಇಇ ಭರತ್ ಸೇರಿ ಮುಖಂಡರು, ಗ್ರಾಪಂ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!