ವಿದ್ಯುತ್ ಕಾಯ್ದೆ ತಿದ್ದುಪಡಿ ಖಾಸಗೀಕರಣ ಮಾಡುವ ಹುನ್ನಾರ

KannadaprabhaNewsNetwork |  
Published : Jun 11, 2026, 12:30 AM IST
10ಎಚ್ಎಸ್ಎನ್4 :  | Kannada Prabha

ಸಾರಾಂಶ

ವಿದ್ಯುತ್ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಹಾನಿ, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಸಲ್ಲದು, ಉದ್ದೇಶಿತ ವಿದ್ಯುತ್ ಕಾಯ್ದೆಗೆ ವಿರೋಧ, ಕಾರ್ಮಿಕರ ವಿರೋಧ ನೀತಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೆ. ಗೋಕುಲ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದ್ಯುತ್ ಕಾಯ್ದೆ ತಿದ್ದುಪಡಿ ಖಾಸಗೀಕರಣದ ಹುನ್ನಾರಕ್ಕೆ ನಮ್ಮ ವ್ಯಾಪಕ ವಿರೋಧವಿದೆ ಹಾಗೂ ಇದರಿಂದ ಗ್ರಾಹಕರಿಗೆ ತೀವ್ರ ನಷ್ಟವಾಗಲಿದೆ ಎಂದು ನೌಕರರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರುವ ಮೂಲಕ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದ್ದು, ಇಲಾಖೆಯ ಕಾರ್ಮಿಕರಿಗೆ, ರೈತರು ಮತ್ತು ಬಡವರಿಗೆ ಹೊರೆಯಾಗುತ್ತದೆ ಎಂದು ಚೆಸ್ಕಾಂ ನೌಕರರು ಬುಧವಾರ ವಿದ್ಯುತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ವಿದ್ಯುತ್ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಹಾನಿ, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಸಲ್ಲದು, ಉದ್ದೇಶಿತ ವಿದ್ಯುತ್ ಕಾಯ್ದೆಗೆ ವಿರೋಧ, ಕಾರ್ಮಿಕರ ವಿರೋಧ ನೀತಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೆ. ಗೋಕುಲ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದ್ಯುತ್ ಕಾಯ್ದೆ ತಿದ್ದುಪಡಿ ಖಾಸಗೀಕರಣದ ಹುನ್ನಾರಕ್ಕೆ ನಮ್ಮ ವ್ಯಾಪಕ ವಿರೋಧವಿದೆ ಹಾಗೂ ಇದರಿಂದ ಗ್ರಾಹಕರಿಗೆ ತೀವ್ರ ನಷ್ಟವಾಗಲಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ತತ್ತರಿಸುತ್ತಾ ಬದುಕು ಸಾಗಿಸುತ್ತಿರುವ ರೈತ ಕುಟುಂಬಗಳು ತೀವ್ರ ತೊಂದರೆಯಾಗಲಿದೆ. ಬಡವರು ವಿದ್ಯುತ್ ಬಿಲ್‌ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ, ವಿದ್ಯುತ್ ಖಾಸಗೀಕರಣದ ಮಾಲೀಕತ್ವದಲ್ಲಿ ನೌಕರರು ಇಕ್ಕಟ್ಟಿನಲ್ಲಿ ಸೌಲಭ್ಯಗಳು ಇಲ್ಲದೆ ನಿರ್ವಹಿಸುವ ದುಸ್ಥಿತಿ ಬರಲಿದೆ. ಮಸೂದೆಯೂ ರೈತರು ಮತ್ತು ಬಡವರ ಸಂಪೂರ್ಣ ವಿರೋಧಿಯಾದ ಕಾರಣದಿಂದ ಕೇಂದ್ರ ತನ್ನ ವಿದ್ಯುತ್ ಪ್ರಸ್ತಾವಿಕ ಕಾಯ್ದೆ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಮೋಹನ್ ಕುಮಾರ್‌, ಎಇಇ ದೀಪಕ್, ಸಿಇಸಿ ಕುಮಾರ್,ನೌಕರರ ಸಂಘದ ರಂಗಸ್ವಾಮಿ, ನಟೇಶ್, ಧರ್ಮೇಂದ್ರ, ಜೆಇ ಹರೀಶ್, ರಾಘವೇಂದ್ರ, ವಿಜಯಕುಮಾರ್, ಮನೋಹರ್, ಪ್ರವೀಣ್, ದಿವಾಕರ್, ಮನೋಹರ್,ಕಿರಣ್ ಕುಮಾರ್, ಬಸವರಾಜು, ರಘು ಹಾಗೂ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರವಣಬೆಳಗೊಳದಲ್ಲಿ ಕನ್ನಡದ ಮತ್ತೊಂದು ಶಾಸನ ಪತ್ತೆ
ವೈದ್ಯ ಜ್ಞಾನದ ಶಕ್ತಿ ಕೇಂದ್ರ ‘ಮಿಮ್ಸ್ ಕೇಂದ್ರ ಗ್ರಂಥಾಲಯ’..!